Advertisement
ವ್ಯಕ್ತಿಗೆ ಬದಲಾಗಿ ಕೇವಲ ಸಿಡಿ ಕಂಬವನ್ನು ಸುತ್ತಿಸಲಾಯಿತು. ಅದರಡಿಯಲ್ಲಿ ಎತ್ತಿನ ಗಾಡಿಯಲ್ಲಿ ಸಿಡಿಯಾಡುವ ವ್ಯಕ್ತಿಯನ್ನು ವೃತ್ತಾಕಾರವಾಗಿ ಸುತ್ತಿಸಲಾಯಿತು. ಸಿಡಿ ಉತ್ಸವದಲ್ಲಿ ಎತ್ತಿನಹಟ್ಟಿ ಗೊಲ್ಲಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದವರು ಸಿಡಿಯಾಡುವುದು ವಿಶೇಷವಾಗಿದೆ. ಸಿಡಿ ಮರದ ಕೆಳಗಿದ್ದ ದಲಿತ ಸಮುದಾಯದ ಯುವಕ ಭಂಡಾರ ಬೇವಿನಸೊಪ್ಪ ಹೂವುಗಳನ್ನು ಭಕ್ತರ ಮೇಲೆ ಎಸೆದರು. ಸಿಡಿ ಕಂಬವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಪ್ರದಕ್ಷಿಣೆ ವೇಳೆ ಭಕ್ತರು ಬಾಳೆಹಣ್ಣು, ಮಂಡಕ್ಕಿ, ಹೂವುಗಳನ್ನು ಸಿಡಿಗಾರನಿಗೆ ಎಸೆದು ಹರಕೆ ಸಲ್ಲಿಸಿದರು.
Advertisement
ಹಿರೇಕೆರೆ ಕಾವಲಿನಲ್ಲಿ ಸರಳ ಸಿಡಿ ಆಚರಣೆ
03:54 PM Feb 25, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.