Advertisement
ನಗರದ ಶಂಕರ್ ಟಾಕೀಸ್ ಬಳಿ ಮಳೆ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ರಸ್ತೆಗಳು ನದಿಯಂತಾಗುತ್ತವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅಧಿ ಕಾರಿಗಳು ವಿವರಿಸಿದರು. ಸ್ಥಳ ಪರಿಶೀಲನೆ ನಡೆಸಿದ ಡಿಸಿ, ರಸ್ತೆಯಲ್ಲಿ ನೀರು ನಿಲ್ಲದಂತೆ ಮಳೆಯ ನೀರು ಸರಾಗವಾಗಿ ಹೋಗುವಂತೆ ಕ್ರಮ ವಹಿಸಬೇಕು ಎಂದರು.
ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು. ಹೊಳಲ್ಕೆರೆ ರಸ್ತೆ ಮಾರ್ಗದಲ್ಲಿ ನಿರ್ಮಾಣ ಆಗುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಆದಷ್ಟು ಶೀಘ್ರದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು. ರಸ್ತೆ ಕಾಮಗಾರಿಯಿಂದ ಧೂಳು ಬರುತ್ತಿದ್ದು, ಪ್ರತಿನಿತ್ಯವೂ ನೀರು ಹಾಕಬೇಕು. ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಇಲ್ಲವಾದರೆ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ.ಹಾಗಾಗಿ ಗುತ್ತಿಗೆದಾರರು ಹೆಚ್ಚಿನ ಜವಾಬ್ದಾರಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು. ನ್ಯಾಯಾಲಯದ ತಡೆಯಾಜ್ಞೆ ಹೊರತುಪಡಿಸಿ ಚಿತ್ರದುರ್ಗ ನಗರದ ವಿವಿಧೆಡೆಯಲ್ಲಿ ಎಲ್ಲೆಲ್ಲಿ ರಸ್ತೆ ಒತ್ತುವರಿ ಮಾಡಲಾಗಿದೆ ಅವುಗಳನ್ನು ತೆರವುಗೊಳಿಸಬೇಕು. ಬಿ.ಡಿ. ರಸ್ತೆಯಲ್ಲಿ ಪಂಚಾಚಾರ್ಯ ಕಲ್ಯಾಣಮಂಟಪ, ಬಂಜಾರ ಸಮುದಾಯ ಭವನ, ಕೆಎಸ್‌ಆರ್ ಟಿಸಿ ರಸ್ತೆಯಲ್ಲಿರುವ ದರ್ಗಾ ಸೇರಿದಂತೆ ಹಲವು ಕಟ್ಟಡಗಳು ರಸ್ತೆಯಲ್ಲಿದ್ದು ಎಲ್ಲವನ್ನೂ ತೆರವುಗೊಳಿಸಬೇಕಿದೆ ಎಂದು ಖುದ್ದು ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ಸತೀಶ್ ಬಾಬು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ನಗರಸಭೆ ಆಯುಕ್ತ ಜೆ.ಟಿ. ಹನುಮಂತರಾಜು ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.
Related Articles
Advertisement