ಹಿರಿಯೂರು: ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ತಾಲೂಕು ಮಟ್ಟದ ಅಧಿ ಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಾರತಮ್ಯ ಮಾಡದೆ ಪ್ರಾಮಾಣಿಕವಾಗಿ ತಲುಪಿಸುವ ಮೂಲಕ ಗ್ರಾಮೀಣ ಜನರಿಗೆ ಸಹಾಯ ಮಾಡಬೇಕು. ಪಡಿತರ ಪಡೆಯಲು ಬೇರೊಂದು ಗ್ರಾಮಕ್ಕೆ ಹೋಗಲು ವೃದ್ಧರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮದಲ್ಲೇ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಲು ಸೂಚನೆ ನೀಡಿದರು. ತಹಶೀಲ್ದಾರ್ ಸತ್ಯತನಾರಯಣ ಗ್ರಾಮಕ್ಕೆ ಮಂಜೂರಾದ ಸ್ಮಶಾನ ಜಾಗದ ಮುಂಜೂರಾತಿ ಪತ್ರವನುಗ್ರಾಪಂ ಪಿಡಿಒಗೆ ಹಸ್ತಾಂತರಿಸಿದರು.
ಗ್ರಾಪಂ ಅಧ್ಯಕ್ಷ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯರಾದ ಶಂಕರಮೂರ್ತಿ, ಗ್ರಾಪಂ ಉಪಾಧ್ಯಕ್ಷೆ ತಿಪ್ಪಮ್ಮ,ತಾಪಂ ಇಒ ಹನುಮಂತಪ್ಪ ಇದ್ದರು.
ಓದಿ ;
ಸಮಸ್ಯೆಗಳ ಸರಮಾಲೆ ಮುಂದಿಟ್ಟ ಜನ