Advertisement

ಜೈನ ಧರ್ಮ ಶಾಂತಿ-ಸಮಾನತೆ ಸಂಕೇತ

03:38 PM Feb 19, 2021 | Team Udayavani |

ಚಳ್ಳಕೆರೆ: ಪುಣ್ಯಭೂಮಿ ಭಾರತದಲ್ಲಿ ಎಲ್ಲಾ ರೀತಿಯ ಧಾರ್ಮಿಕ ಆಚರಣೆಗಳನ್ನು ಅನುಸರಿಸಲಾಗುತ್ತಿದೆ. ಸಮಾನತೆ ಮತ್ತು ಶಾಂತಿಯುತ ವಾತಾವರಣಕ್ಕೆ ಜೈನ ಧರ್ಮವೂ ಸಹಕಾರಿಯಾಗಿದೆ. ಜೈನ ಧರ್ಮ ಶಾಂತಿ, ಸಹಬಾಳ್ವೆ, ಸಹನೆ, ಸಮಾನತೆಯ ಸಂಕೇತವಾಗಿದೆ ಎಂದು ಮೂಡಬಿದರೆಯ ಜಗದ್ಗುರು ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ 1008 ಪಾರ್ಶ್ವನಾಥ ಜಿನಮಂದಿರದಲ್ಲಿ ತಾಲೂಕು ಜೈನ ಸಮುದಾಯ ಸಂಘ ಮತ್ತು ಭಗವಾನ್‌ ಬಾಹುಬಲಿ ದಿಗಂಬರ ಜೈನ ಟ್ರಸ್ಟ್‌
ವತಿಯಿಂದ ಹಮ್ಮಿಕೊಂಡಿದ್ದ ಮೈತ್ರಿಧಾಮ ಬಾಹುಬಲಿ ಮಹಾಸ್ವಾಮಿಯ ಪ್ರಥಮ ಪ್ರತಿಷ್ಠೆಯ ವಾರ್ಷಿಕ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೈನ ಧರ್ಮದ ಪರಂಪರೆ ಮತ್ತು ಧಾರ್ಮಿಕ ಹಿತಾಸಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇಂತಹ ಭಕ್ತಿಪೂರ್ವಕವಾದ ಧಾರ್ಮಿಕ
ಕಾರ್ಯಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.

ತಾಲೂಕು ಜೈನ ಸಂಘದ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಮಾಜಿ ಸಚಿವ ಡಿ. ಸುಧಾಕರ ಅಧ್ಯಕ್ಷತೆ ವಹಿಸಿದ್ದರು. ಜೈನ ಸಂಘದ ಗೌರವಾಧ್ಯಕ್ಷ ಡಿ. ಅಂಬಣ್ಣ, ಭಗವಾನ್‌ ಬಾಹುಬಲಿ ದಿಗಂಬರ ಜೈನ ಟ್ರಸ್ಟ್‌ ಅಧ್ಯಕ್ಷ ಡಿ. ಭರತ್‌ರಾಜ್‌, ಡಾ| ವಿಜಯೇಂದ್ರ, ಎನ್‌.ಜೆ. ವೆಂಕಟೇಶ್‌, ಎನ್‌. ಪದ್ಮಾವತಿ, ಗೌರಿಪುರ ಡಿ. ಪಾರ್ಶ್ವನಾಥ, ಪದ್ಮಾ, ದರ್ಶನ್‌, ಚೇತನ್‌, ವಿಮುಕ್ತಿ, ಡಿ. ಪ್ರಭಾಕರ, ನಾಗರಾಜು, ಡಿ. ರತ್ನರಾಜು, ಎನ್‌.ಜೆ. ವೆಂಕಟೇಶ್‌, ಹರ್ಷಿಣಿ ಸುಧಾಕರ ಮೊದಲಾದವರು ಪಾಲ್ಗೊಂಡಿದ್ದರು. ಪುರೋಹಿತರಾದ ಚಂದ್ರಕಾಂತ್‌ ಪಂಡಿತ್‌, ಪ್ರದೀಪ್‌ಕುಮಾರ್‌
ಪೂಜಾ ಕಾರ್ಯ ನಡೆಸಿಕೊಟ್ಟರು.

ಓದಿ : ಫೆ.22ರಿಂದ ಆರರಿಂದ ಎಂಟನೇ ತರಗತಿ ಶಾಲಾರಂಭ: ಸರ್ಕಾರದಿಂದ ಅಧಿಕೃತ ಆದೇಶ

Advertisement
Advertisement

Udayavani is now on Telegram. Click here to join our channel and stay updated with the latest news.

Next