Advertisement

ರೈತ ಸಂಘದ ಅನಿರ್ದಿಷ್ಟಾವಧಿ ಧರಣಿ ಅಂತ್ಯ

04:20 PM Feb 18, 2021 | Team Udayavani |

ಹೊಳಲ್ಕೆರೆ: ಕೃಷಿ ಮತ್ತು ತೋಟಗಾರಿಕೆಗೆ 7 ತಾಸು ವಿದ್ಯುತ್‌ ಪೂರೈಕೆ ಮಾಡುವಂತೆ ಪಟ್ಟಣದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಬುಧವಾರ ಅಂತ್ಯಗೊಂಡಿದೆ.

Advertisement

ಬೆಸ್ಕಾಂ ಇಂಜಿನಿಯರ್‌ ರೈತ ಮುಖಂಡರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿ ದಿನ 4 ಗಂಟೆ
ವಿದ್ಯುತ್‌ ಸರಬರಾಜು ಮಾಡುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಯಿತು.

ಪಟ್ಟಣದ ವೀರಸೌಧದ ರೈತ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ, ಚಿತ್ರದುರ್ಗ ಜಿಲ್ಲೆಯಲ್ಲಿ ಹೊಳಲ್ಕೆರೆ ತಾಲೂಕು ಹೊರತುಪಡಿಸಿ ಬೇರೆ ತಾಲೂಕುಗಳಲ್ಲಿ 7 ಗಂಟೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಆದರೆ ಹೊಳಲ್ಕೆರೆ ತಾಲೂಕಿನ ರೈತರಿಗೆ ಇರುವಷ್ಟು ವಿದ್ಯುತ್‌ ಅಗತ್ಯತೆ ಬೇರೆ ತಾಲೂಕುಗಳಿಗಿಲ್ಲ. ಹೀಗಾಗಿ ಹಗಲಿನ
ವೇಳೆ 5 ಗಂಟೆ ವಿದ್ಯುತ್‌ ಸರಬರಾಜು ಮಾಡುವಂತೆ ಕೇಳಿಕೊಂಡಿದ್ದೆವು.

ಬೆಸ್ಕಾಂ ಅ ಧಿಕಾರಿಗಳು ಸಾಕಷ್ಟು ಚರ್ಚೆ ನಡೆಸಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ತಾತ್ಕಾಲಿಕವಾಗಿ ಧರಣಿ ವಾಪಸ್‌ ಪಡೆದಿದ್ದಾರೆ. ಕೊಟ್ಟ ಮಾತಿನಂತೆ 5 ದಿನಗಳಲ್ಲಿ ತಾಲೂಕಿನ ಎಲ್ಲಾ ಕಡೆಗಳಲ್ಲಿ 4 ರಿಂದ 5 ಗಂಟೆ ವಿದ್ಯುತ್‌ ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಅಪ್ಪರಸನಹಳ್ಳಿ ಬಸವರಾಜಪ್ಪ, ಕುನಗಲಿ ಮಹಾಲಿಂಗಪ್ಪ, ಶಂಕರಮೂರ್ತಿ ತೊಡರನಾಳ್‌, ಮಂಜುನಾಥ್‌
ತೊಡರನಾಳ್‌, ಕುನಗಲಿ ಉಮೇಶ್‌, ಟಿ. ನುಲೇನೂರು ಜಯಣ್ಣ, ಸದಾಶಿವಪ್ಪ ಚಿಕ್ಕಜಾಜೂರು, ಲೋಕೇಶ್‌ ಅಗ್ರಹಾರ, ರುದ್ರೇಶ್‌ ಮತಿಗಟ್ಟ, ಹೊಸಹಳ್ಳಿ ತುಂಗಪ್ಪ ಇತರರು ಇದ್ದರು.

Advertisement

ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?

Advertisement

Udayavani is now on Telegram. Click here to join our channel and stay updated with the latest news.

Next