Advertisement

ಸಮ ಸಮಾಜಕ್ಕೆ ಶಿಕ್ಷಣ ಅಗತ್ಯ

03:46 PM Jan 25, 2021 | Team Udayavani |

ಚಿತ್ರದುರ್ಗ: ಸಮ ಸಮಾಜ ನಿರ್ಮಾಣದ ಮೊದಲ ಹೆಜ್ಜೆಯೇ ಶಿಕ್ಷಣ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಡಾ| ಶಾಂತವೀರ ಸ್ವಾಮೀಜಿ ಹೇಳಿದರು.

Advertisement

ನಗರದ ಹೊರವಲದ ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಮಂಜರಿ ಹನುಮಂತಪ್ಪ ಸ್ಮರಣೋತ್ಸವದಲ್ಲಿ ಶ್ರೀಗಳು ಮಾತನಾಡಿದರು.
ಶಿಕ್ಷಣದಿಂದ ಯಾರನ್ನೂ ವಂಚಿತರನ್ನಾಗಿ ಮಾಡಬಾರದು. ಭೋವಿ ಸಮಾಜದಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸುಧಾರಣೆ, ಮತ್ತು ರಾಜಕೀಯ ಸ್ವಾತಂತ್ರ್ಯ ಅಭಿಲಾಷೆಯಿಂದ ಹನುಮಂತಪ್ಪ ವಿದ್ಯಾಸಂಸ್ಥೆಗಳನ್ನು
ಸ್ಥಾಪಿಸಿದರು ಎಂದರು.
ಶಿಕ್ಷಣ ಪಡೆದು ಹೋರಾಟ ನಡೆಸುವ ಸಮುದಾಯಗಳು ಫಲಶೃತಿಯನ್ನು ಕಾಣುತ್ತವೆ. ಶಿಕ್ಷಣದಿಂದ ಪ್ರಜ್ಞಾವಂತ ಭೋವಿ ಸಮಾಜ ನಿರ್ಮಿಸಿದ
ಶ್ರೇಯಸ್ಸು ಮಂಜರಿ ಹನುಮಂತಪ್ಪನವರಿಗೆ ಸಲ್ಲುತ್ತದೆ. ಭೋವಿ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಒಂದೊಂದು ಕೊಠಡಿಯನ್ನು ಕಟ್ಟಿಸುವ ಮೂಲಕ ಇಮ್ಮಡಿ ದ್ಧರಾಮೇಶ್ವರ ಸ್ವಾಮೀಜಿಯವರಿಗೆ ಸಹಕಾರ ನೀಡಿ. ಈ ಮೂಲಕ ಮಂಜರಿ ಹನುಮಂತಪ್ಪ ಅವರ ಋಣ ತೀರಿಸುವ ಪ್ರಯತ್ನ ಮಾಡಬೇಕು ಎಂದು ಕರೆ
ನೀಡಿದರು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಶಿಕ್ಷಣದ ಮೂಲಕ ಭೋವಿ ಕುಟುಂಬಗಳಲ್ಲಿ ನಂದಾದೀಪ
ಬೆಳಗಿದವರು. ಶಿಕ್ಷಣದ ಮಹತ್ವವನ್ನು ಮಂಜರಿ ಹನುಮಂತಪ್ಪರವರು ಅರಿತಿದ್ದರಿಂದ 60-70ರ ದಶಕದಲ್ಲಿ ಗ್ರಾಮ, ಕಾಲೋನಿ, ಹಟ್ಟಿ, ಹಳ್ಳಿ,
ಹಳ್ಳಿಯಲ್ಲಿ ಸುತ್ತಾಡಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ, ಹಾಸ್ಟೆಲ್‌ ಸೌಲಭ್ಯವನ್ನು ಭೋವಿ ವಿದ್ಯಾರ್ಥಿಗಳಿಗೆ ದಕ್ಕಿಸಿಕೊಡಲು ಶ್ರಮಿಸಿದ್ದಾರೆ. ಭೋವಿ ಸಮಾಜಕ್ಕೆ ಶಿಕ್ಷಣವೇ ಆಸ್ತಿ, ಶಕ್ತಿ ಎಂಬ ಮುಂದಾಲೋಚನೆಯಿಂದ ಸಮಾಜಕ್ಕೆ ಭದ್ರ ಅಡಿಪಾಯ ಹಾಕಿದರು. ಅವರ
ಜ್ಞಾನ ದಾಸೋಹದಿಂದ ಅನೇಕ ಕುಟುಂಬಗಳಲ್ಲಿ ನಂದಾದೀಪ ಹಚ್ಚಿದ್ದಾರೆ.

ಇಂದಿರಾ ಗಾಂಧಿ  ಕಾಲದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯನ್ನು ತೆಗೆದು ಹಾಕಬೇಕೆಂಬ ಹುನ್ನಾರ ನಡೆದಿತ್ತು. ಆಗ ದೆಹಲಿ ಮಟ್ಟಕ್ಕೆ ಹೋಗಿ ಭೋವಿಗಳನ್ನು ರಕ್ಷಣೆ ಮಾಡಿದರು. ಭೋವಿ ಸಮಾಜದ ಮೊದಲ ರಾಜ್ಯ ಸಂಘದ ಸ್ಥಾಪಕರಾಗಿದ್ದ
ಅವರು ಭೋವಿ ರತ್ನ ಎಂದು ಬಣ್ಣಿಸಿದರು.

ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಲಕ್ಷ್ಮಣ, ತಾಲೂಕು ಅಧ್ಯಕ್ಷರಾದ ಡಿ.ಸಿ. ಮೋಹನ, ಕೃಷ್ಣಪ್ಪ, ಖಜಾಂಚಿ ಮಂಜುನಾಥ, ಉತ್ತರಕನ್ನಡ ಜಿಲ್ಲೆ ಅಧ್ಯಕ್ಷ ಶಿವಾಜಿ ಬಂಡಿವಡ್ಡರ್‌, ತಿಮ್ಮಣ್ಣ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗೌನಹಳ್ಳಿ ಗೋವಿಂದಪ್ಪ, ಪ್ರಾಚಾರ್ಯ ಭೀಮ ಭೋವಿ, ಬಾಗಲಕೋಟೆಯ ಯಲ್ಲಪ್ಪ ಕೆರೂರು, ಸಿಂಧನೂರು ವಕೀಲ ಶರಣಬಸವ, ಬೆಂಗಳೂರಿನ ಮಹಾಂತೇಶ,
ಎನ್‌.ಪಿ. ವೀರೇಶ್‌ ಮತ್ತಿತರರು ಇದ್ದರು.

Advertisement

ಓದಿ:  ರೈತ ಮುಖಂಡರ ಹತ್ಯೆ ಸಂಚು ತನಿಖೆ ನಡೆಸಿ

Advertisement

Udayavani is now on Telegram. Click here to join our channel and stay updated with the latest news.

Next