Advertisement

ಮಾ. 5ರಿಂದ ಶಿವರಾತ್ರಿ ಮಹೋತ್ಸವ

02:37 PM Feb 08, 2021 | Team Udayavani |

ಚಿತ್ರದುರ್ಗ: ನಗರದ ಸದ್ಗುರು ಕಬೀರಾನಂದ ಮಠದಿಂದ ನಡೆಸುವ ಮಹಾಶಿವರಾತ್ರಿ ಮಹೋತ್ಸವವನ್ನು ಈ ವರ್ಷ ಮಾರ್ಚ್‌ 5 ರಿಂದ 11 ರವರೆಗೆ ಸರಳವಾಗಿ ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ
ಪೂರ್ವಭಾವಿ ಸಭೆಯಲ್ಲಿ 2021ನೇ ಸಾಲಿನ 91ನೇ ಮಹಾ ಶಿವರಾತ್ರಿ ಮಹೋತ್ಸವದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ಮಾ. 5 ರಿಂದ 11 ರವರೆಗೆ ಪ್ರತಿ ದಿನ ಸಂಜೆ 5:30ರಿಂದ 6:30ರವರೆಗೆ ಸಾಮೂಹಿಕ ಶಿವಪಂಚಾಕ್ಷರಿ ಸ್ತೋತ್ರ ಮತ್ತು ಶ್ರೀಮದ್‌ ಭಗವದ್ಗೀತಾ ಪಾರಾಯಣ ಹಾಗೂ ಮಾ. 7 ರಿಂದ 11 ವರೆಗೆ ಪ್ರತಿ ದಿನ ಸಂಜೆ ಮಹಾ ಶಿವರಾತ್ರಿಯ ಅಂಗವಾಗಿ ವಿವಿಧ ರೀತಿಯ ವೇದಿಕೆಯ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು.

Advertisement

ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌ ಮಾತನಾಡಿ, ಈ ಬಾರಿ ನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಶಿವರಾತ್ರಿ ಮಹೋತ್ಸವದ ಹಿನ್ನಲೆಯಲ್ಲಿ ಜೋಗಿಮಟ್ಟಿ ರಸ್ತೆ ಹಾಗೂ ಆಶ್ರಮದ ರಸ್ತೆಯನ್ನು ಆದ್ಯತೆ ಮೇರೆಗೆ ಬೇಗ ಮುಗಿಸಿಕೊಡಲು ಮನವಿ ಮಾಡಿದರು.

ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಟಿ. ಬದರೀನಾಥ್‌ ಮಾತನಾಡಿ, ದಿನಾಂಕ ಹಾಗೂ ಸಮಯವನ್ನು ನೋಡಿಕೊಂಡು ಕಾರ್ಯಕ್ರಮಕ್ಕೆ ಸಚಿವರನ್ನು ಆಹ್ವಾನಿಸಲಾಗುವುದು. ಯಾರನ್ನು ಆಹ್ವಾನಿಸಬೇಕು ಎನ್ನುವುದನ್ನು ಸ್ವಾಮೀಜಿಗಳ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು. ಬಿಜೆಪಿ ಮುಖಂಡ ಎಂ.ಎ. ಸೇತುರಾಂ, ಹೆಬ್ಬಳ್ಳಿ ನಾಗರಾಜ್‌ ಮತ್ತಿತರರು ಇದ್ದರು.

ಓದಿ: ರಾಜ್ಯದ ಸಂಸದರು ಬಾಯಿಗೆ ಬೀಗ ಹಾಕಿದ ಕಾರಣ ಸತತ ಅನ್ಯಾಯವಾಗುತ್ತಿದೆ: ಖಾದರ್

Advertisement

Udayavani is now on Telegram. Click here to join our channel and stay updated with the latest news.

Next