ಹಿರಿಯೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿ ಸಿ ರೈತ ಸಂಘಟನೆಗಳು ಕರೆ ನೀಡಿದ್ದ ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಹೆದ್ದಾರಿ ತಡೆದ ನಡೆಸಿದ ರೈತರು ಮತ್ತು ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ರೈತರ ಪ್ರತಿಭಟನೆಗೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡ ಬಣ) ಕಾರ್ಯಕರ್ತರು ಸಾಥ್ ನೀಡಿ ಹೆದ್ದಾರಿ
ಬಂದ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಆಳುವ ಸರ್ಕಾರಗಳು ರೈತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿವೆ. ರೈತರಿಗೆ ಗೌರವ ನೀಡದೆ ಪ್ರಧಾನಿ ಮೋದಿ ಹಿಟ್ಲರ್ ರೀತಿಯ ಧೋರಣೆ ಅನುಸರಿಸುತ್ತಿದ್ದಾರೆಂದು ದೂರಿದರು.
ಅನ್ನ ನೀಡುವ ಅಮಾಯಕ ರೈತರನ್ನು ದೆಹಲಿಯಲ್ಲಿ ಬಂಧಿಸಲಾಗಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತರನ್ನು ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು. ಕರವೇ ಗೌರವಾಧ್ಯಕ್ಷ ಗೋ. ಬಸವರಾಜು, ಅಧ್ಯಕ್ಷ ಉದಯಶಂಕರ್, ಉಪಾಧ್ಯಕ್ಷ ರಾಮಕೃಷ್ಣಪ್ಪ, ದಾದಾಪೀರ್, ಜಬೀ, ಜಾಕೀರ್, ರೈತ ಮುಖಂಡರಾದ ಸಿದ್ದರಾಮಣ್ಣ, ತಿಮ್ಮಾ ರೆಡ್ಡಿ, ಸಿದ್ದಪ್ಪ, ಎಚ್. ರಂಗಸ್ವಾಮಿ, ಚಂದ್ರಪ್ಪ, ಆರ್. ಲೋಕಮ್ಮ, ಎಂ. ತಿಮ್ಮಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಓದಿ :
ರೈತರ ಸಮಸ್ಯೆ ಬಗೆಹರಿಯದಿದ್ರೆ ಆಹಾರ ಸಮಸ್ಯೆ ಉದ್ಭವ: ಮುದಿಯಪ್ಪ