Advertisement

ರೈತರ ಸಮಸ್ಯೆ ಬಗೆಹರಿಯದಿದ್ರೆ ಆಹಾರ ಸಮಸ್ಯೆ ಉದ್ಭವ: ಮುದಿಯಪ್ಪ

04:12 PM Feb 07, 2021 | Team Udayavani |

ನಾಯಕನಹಟ್ಟಿ: ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಭವಿಷ್ಯದಲ್ಲಿ ಆಹಾರದ ಸಮಸ್ಯೆ ತಲೆದೋರಲಿದೆ ಎಂದು ನೀರಾವರಿ
ಹಾಗೂ ಸಾಮಾಜಿಕ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ. ಮುದಿಯಪ್ಪ ಹೇಳಿದರು.

Advertisement

ಕೇಂದ್ರ ಸರಕಾರದ ಮೂರು ರೈತ ವಿರೋಧಿ ಕಾಯ್ದೆ ವಿರೋಧಿಸಿ ಪಟ್ಟಣದಲ್ಲಿ ನಡೆದ  ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರ ರೈತ ವಿರೋಧಿ  ನಿಲುವು ಅನುಸರಿಸುತ್ತಿದೆ. ಮೂರು ತಿಂಗಳಿನಿಂದ ದೇಶದ ಎಲ್ಲೆಡೆ ರೈತರ ಪ್ರತಿಭಟನೆಗಳು ನಡೆಯುತ್ತಿವೆ.ಹೀಗಿದ್ದರೂ ಸರಕಾರ ನಿರ್ಲಕ್ಷé ಧೋರಣೆ ತಳೆದಿದೆ.

ಪ್ರಧಾನಿಗಳು ಸಮಸ್ಯೆ ಬಗೆಹರಿಸುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ವಿದೇಶ ಪ್ರವಾಸ, ಸೆಲೆಬ್ರೆಟಿಗಳ ಮಕ್ಕಳ ಮದುವೆ ಹಾಜರಾಗುವ ಪ್ರಧಾನಿ, ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಮಯ ನೀಡುತ್ತಿಲ್ಲ. ಇದೀಗ 18 ತಿಂಗಳು ರೈತ ಕಾಯ್ದೆಗಳನ್ನು ಅಮಾನತ್ತಿನಲ್ಲಿಡಲು ಕೇಂದ್ರ
ಸರಕಾರ ಸಮ್ಮತಿಸಿದೆ. ಈ ಎಲ್ಲ ಕಾಯ್ದೆಗಳನ್ನು ಶಾಶ್ವತವಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ರೈತರು ಕೆಲ ಕಾಲ ರಾಜ್ಯ ಹೆದ್ದಾರಿ 45 ರಲ್ಲಿ ರಸ್ತೆ ತಡೆ ನಡೆಸಿದರು.

ನಂತರ ವಾಲ್ಮೀಕಿ ವೃತ್ತದಿಂದ ನಾಡ ಕಚೇರಿಯವರೆಗೆ ಮೆರವಣಿಗೆ ನಡೆಸಿ ಉಪ ತಹಶೀಲ್ದಾರ್‌ ಟಿ. ಜಗದೀಶ್‌ ಅವರಿಗೆ ಮನವಿ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯ ಜಿ. ತಿಪ್ಪೇಸ್ವಾಮಿ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ. ಮುದಿಯಪ್ಪ, ಪುರ್ನಓಬಯ್ಯ, ಪಪಂ ಸದಸ್ಯ ಟಿ. ಬಸಣ್ಣ, ಗ್ರಾಪಂ ಸದಸ್ಯ ಕಾಟಯ್ಯ, ಮುಖಂಡರಾದ ಬಸವರಾಜ್‌, ವಕೀಲ ನಾಗೇಂದ್ರಪ್ಪ, ಮುಖಂಡರಾದ ಪ್ರಕಾಶ್‌, ಬಸವರಾಜ್‌, ಬೋರೇಶ್‌ ಮತ್ತಿತರರು ಇದ್ದರು.

ಓದಿ : ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಅರಶಿನ-ಕಾಳುಮೆಣಸಿನ ಕಷಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next