ಚಿತ್ರದುರ್ಗ: ಕರ್ನಾಟಕ ಜಾನುವಾರು ಹತ್ಯೆ·ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನುಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಜತೆಗೆ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿಮೂಡಿಸಬೇಕು ಎಂದು ಜಿಲ್ಲಾ ಧಿಕಾರಿ ಕವಿತಾಎಸ್.ಮನ್ನಿಕೇರಿ ಅ ಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿಶುಕ್ರವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದಅವರು, ಕರ್ನಾಟಕ ಜಾನುವಾರು ಹತ್ಯೆಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಜ.18 ರಂದು ಜಾರಿಯಾಗಿದ್ದು, ಕಾಯ್ದೆ ಕುರಿತುಕಾರ್ಯಾಗಾರ, ಫ್ಲೆಕ್ಸ್, ಕರಪತ್ರಗಳ ಮೂಲಕಸಾರ್ವಜನಿಕರಿಗೆ ವಿವರ ನೀಡಬೇಕು ಎಂದರು.ಪಶುಪಾಲನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪಮಾತನಾಡಿ, ಕಾನೂನಿಗೆ ವಿರುದ್ಧವಾಗಿ ಯಾರೂಜಾನುವಾರು ಹತ್ಯೆ ನಡೆಸುವಂತಿಲ್ಲ. ಯಾವುದೇಜಾನುವಾರು (ದನ ಮತ್ತು ಎಮ್ಮೆ) ಹತ್ಯೆಮಾಡುವಂತಿಲ್ಲ. ಸಾಗಾಣಿಕೆ ಮೇಲೆ ನಿರ್ಬಂಧಹೇರಲಾಗಿದೆ. ಜಾನುವಾರು ಹತ್ಯೆಗಾಗಿಮಾರಾಟ, ಖರೀದಿ ನಿಷೇಧ ಮಾಡಲಾಗಿದೆಎಂದರು.
ಸಾರ್ವಜನಿಕ ಆರೋಗ್ಯದ ಹಿತಾಸಕ್ತಿ,ರೋಗದಿಂದ ಬಳಲುತ್ತಿದ್ದು ಇತರೆಜಾನುವಾರುಗಳಿಗೆ ಮಾರಕ ಎಂದು ಕಂಡುಬಂದಲ್ಲಿ, ವಾಸಿಯಾಗದ ರೋಗದಿಂದಬಳಲುತ್ತಿದ್ದರೆ ಮಾತ್ರ 13 ವರ್ಷಮೇಲ್ಪಟ್ಟ ಎಮ್ಮೆ, ಕೋಣ ಹತ್ಯೆ ಮಾಡಲುನಿಯಮಬದ್ಧವಾಗಿ ವಿನಾಯಿತಿ ನೀಡಲಾಗಿದೆ.ಕೃಷಿ ಮತ್ತು ಪಶು ಸಂಗೋಪನೆ ಉದ್ದೇಶಕ್ಕಾಗಿಜಾನುವಾರು ಸಾಗಾಣಿಕೆಗೆ ಪರವಾನಗಿನೀಡಲು ಅವಕಾಶವಿದೆ. ರಾಜ್ಯದೊಳಗೆ ಹಾಗೂರಾಜ್ಯದ ಹೊರಗೆ ಜಾನುವಾರು ಸಾಗಾಣಿಕೆಮಾಡುವ ವೇಳೆ ಮಾರ್ಗಸೂಚಿ ಪಾಲಿಸಬೇಕು.ವಾಹನದಲ್ಲಿ ಜಾನುವಾರು ಮಾಲೀಕರಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇನ್ನಿತರವಿವರಗಳನ್ನು ಅಳವಡಿಸಬೇಕು. ರಾತ್ರಿ 8 ರಿಂದಬೆಳಗ್ಗೆ 6 ರವರೆಗೆ ಜಾನುವಾರು ಸಾಗಾಟನಿಷೇಧಿ ಸಲಾಗಿದೆ. ಬೇಸಿಗೆ ಕಾಲದಲ್ಲಿ ಬೆಳಗ್ಗೆ11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾಗಾಣಿಕೆಮಾಡುವಂತಿಲ್ಲ ಎಂದರು.
ಅಕ್ರಮವಾಗಿ ಜಾನುವಾರು ಸಾಗಾಟಮಾಡುವವರನ್ನು ಎಸ್‌ಐಗಿಂತ ಮೇಲ್ಪಟ್ಟಪೊಲೀಸ್ ಅಧಿ ಕಾರಿಗಳು ಶೋಧಿ· ಮಾಡುವ ಅ ಧಿಕಾರ ಹೊಂದಿದ್ದಾರೆ.·ಜಪ್ತಿ ಮಾಡಿದ ನಂತರ ಸಕ್ಷಮ ಪ್ರಾ ಧಿಕಾರ,ಉಪವಿಭಾಗಾಧಿ ಕಾರಿಗಳ ಮುಂದೆ ಹಾಜರುಪಡಿಸಬೇಕಾಗುತ್ತದೆ ಎಂದರು.
ಅಕ್ರಮ ಜಾನುವಾರು ಸಾಗಾಟದಲ್ಲಿತೊಡಗಿದವರಿಗೆ, ಮೊದಲ ಸಲ ಅಪರಾಧಕ್ಕೆ 3ವರ್ಷದಿಂದ 7 ವರ್ಷ ಕಾರಾಗೃಹ ವಾಸ ಅಥವಾಒಂದು ಜಾನುವಾರಿಗೆ 50 ಸಾವಿರ ರೂ.ಗಳಿಂದ5 ಲಕ್ಷದವರೆಗೆ ದಂಡ ವಿ ಧಿಸಬಹುದಾಗಿದೆ.ಮುಂದುವರಿದ ಅಪರಾಧಕ್ಕೆ ರೂ.1 ಲಕ್ಷದಿಂದ10
ಲಕ್ಷದವರೆಗೆ ದಂಡ ಅಥವಾ 7 ವರ್ಷಕಾರಾಗೃಹವಾಸ ದಂಡನೆ ವಿ ಧಿಸಬಹುದಾಗಿದೆಎಂದು ಹೇಳಿದರು.
ಇದರಿಂದ ಬಿಡಾಡಿ ದನಗಳ ಸಂಖ್ಯೆಹೆಚ್ಚಾಗುವ ಸಾಧ್ಯತೆ ಇರುವುದರಿಂದ,ನಿರ್ವಹಣೆಗಾಗಿ ಖಾಸಗಿ ಗೋಶಾಲೆಗಳಿಗೆಕಳುಹಿಸಬೇಕು. ಬಿಡಾಡಿ ದನಗಳನಿರ್ವಹಣೆಗಾಗಿ ರೂ.1.50 ಲಕ್ಷ ಅನುದಾನಲಭ್ಯವಿದೆ ಎಂದು ತಿಳಿಸಿದರು.
ಜಾನುವಾರುಗಳ ಪೋಷಣೆಗಾಗಿ ಜಿಲ್ಲೆಯಲ್ಲಿಸರ್ಕಾರಿ ಜಮೀನು ಗುರುತಿಸಿ, ಹೊಸದಾಗಿಪ್ರತಿ ತಾಲೂಕಿನಲ್ಲಿ ಎರಡು ಗೋಶಾಲೆಗಳನಿರ್ಮಾಣ ಮಾಡುವ ಕುರಿತು ಸರ್ಕಾರಕ್ಕೆಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗುವುದುಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಜಿ.ರಾ ಧಿಕಾ, ಅಪರ ಜಿಲ್ಲಾ ಧಿಕಾರಿಬಾಲಕೃಷ್ಣ, ಡಿವೈಎಸ್‌ಪಿ ಪಾಂಡುರಂಗ,ತಹಶೀಲ್ದಾರ್‌ಗಳು ಮತ್ತಿತರರಿದ್ದರು.
ಓದಿ :
ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡಿ