ಚಿತ್ರದುರ್ಗ: ರಸ್ತೆಯಲ್ಲಿ ನಾನು ಮೊದಲು ಎನ್ನುವುದೇ ಅಪಘಾತಕ್ಕೆ ಮೂಲ ಕಾರಣ. ನಾವೆಲ್ಲರೂ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ರಾಜ್ಯವನ್ನು ಅಪಘಾತ ಮುಕ್ತವಾಸೋಣ ಎಂದು ಆರ್‌ಟಿಒ ಜಿ.ಎಸ್. ಹೆಗಡೆ ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಗುರುವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪಿಎನ್‌ಸಿ ಇನ್‌ಪ್ರಾಟೆಕ್ ಲಿಮಿಟೆಡ್ ವತಿಯಿಂದ ಆಯೋಜಿಸಿದ್ದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ರಸ್ತೆ ಸುರಕ್ಷತೆಯೇ ಜೀವನ, ಸುರಕ್ಷತೆ ಧ್ಯೇಯದೊಂದಿಗೆ ಹೆಲ್ಮಟ್ ಧರಿಸಿ, ಸೀಟ್ ಬೆಲ್ಟ್ ಬಲಸಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಆತಂಕ ಹುಟ್ಟಿಸುವಂತಹ ಸಂಗತಿ ಎಂದರೆ ರಸ್ತೆ ಅಪಘಾತವಾಗಿದೆ. ಇತ್ತೀಚಿನ ಅಪಘಾತಗಳು ಘಾಸಿ ಉಂಟು ಮಾಡುತ್ತಿವೆ. ಅಪಘಾತಗಳ ಸಂಖ್ಯೆ ಕಡಿಮೆಗೊಳಿಸಲು ಸರ್ಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದೆ. ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರ ಸುರಕ್ಷತಾ ನೀತಿಯನ್ನು ರೂಪಿಸಲಾಗಿದೆ. ಈ ನೀತಿಯ ಪ್ರಕಾರ ವರ್ಷದಿಂದ ವರ್ಷಕ್ಕೆ ಶೇ. 10 ರಷ್ಟು ಅಪಘಾತಗಳನ್ನು ಕಡಿಮೆ ಮಾಡಬೇಕಿದೆ. ಹಾಗೇ ರಾಜ್ಯದಲ್ಲೂ ಕೂಡ ರಸ್ತೆ ಸುರಕ್ಷತಾ ನೀತಿ ಜಾರಿಗೆ ತರಲಾಗಿದೆ. ಕರ್ನಾಟಕ ರಸ್ತೆ ಸುರಕ್ಷತಾ ಪ್ರಾ ಧಿಕಾರ ಎಲ್ಲಾ ಇಲಾಖೆಗಳನ್ನು ಒಳಗೊಂಡಿದೆ ಎಂದರು.
ಪೊಲೀಸ್ ಉಪ ಅಧಿಧೀಕ್ಷಕ ಎಸ್. ಪಾಂಡುರಂಗ ಮಾತನಾಡಿ, ಅಪಘಾತಗಳಿಂದ ಪ್ರತಿ ದಿನ ಸಾವು-ನೋವುಗಳಾಗುತ್ತಿವೆ. ರಸ್ತೆ ಸುರಕ್ಷತಾ ಜಾಗೃತಿ ಕೇವಲ ಆಚರಣೆ ಆಗಬಾರದು. ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಿದಾಗ ಮಾತ್ರ ಪ್ರಾಣ ಹಾನಿ ಮತ್ತು ಅಂಗವೈಕಲ್ಯ ತಪ್ಪಿಸಲು ಸಾಧ್ಯ ಎಂದರು.
ಪಿಎನ್‌ಸಿ ಇನ್‌ಪ್ರಾಟೆಕ್ ಲಿಮಿಟಿಡ್‌ನ ಜಂಟಿ ಜನರಲ್ ಮ್ಯಾನೇಜರ್ ಸತೀಶ್‌ಚಂದ್ರ ಧ್ಯಾನಿ ಮಾತನಾಡಿದರು. ಚಿತ್ರದುರ್ಗ ಸಂಜೀವಿನಿ ಜೀವರಕ್ಷಕ ಟ್ರಸ್ಟ್‌ನ ರಾಜ್ಯ ಘಟಕದ ಅಧ್ಯಕ್ಷ ಡಿ. ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೌಮ್ಯ ಹಾಗೂ ಪಿಎನ್‌ಸಿ ಇನ್ ಪ್ರಾಟೆಕ್ ಸಿಬ್ಬಂದಿಗಳಾದ ತಿವಾರಿ ಮತ್ತು ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಚಿತ್ರದುರ್ಗ ಗ್ರಾಮಾಂತರ ಸಿಪಿಐ ಬಾಲಚಂದ್ರನಾಯಕ್, ಪಿಎನ್‌ಸಿ ಇನ್‌ಪ್ರಾಟೆಕ್ ಲಿಮಿಟೆಡ್‌ನ ಜಂಟಿ ಜನರಲ್ ಮ್ಯಾನೇಜರ್ ಅಭಿಜಿತ್ ಬ್ಯಾನರ್ಜಿ, ನ್ಯಾಷನಲ್ ಇನ್ಸೂರನ್ಸ್ ಕಂಪನಿ ಲಿಮಿಟೆಡ್‌ನ ದಾವಣಗೆರೆ ವಿಭಾಗೀಯ ಪ್ರಬಂಧಕ ಮಧುಸೂದನ್ ವಿ. ಗುಡಿ, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಓದಿ :
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಗತಿ, ಆಂಬುಲೆನ್ಸ್ ಕೊರತೆ: ಸದನದಲ್ಲಿ ನರೇಂದ್ರ ಪ್ರಶ್ನೆ