ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
Advertisement
ಸರ್ಕಾರದ ಪರವಾಗಿ ಸಚಿವರಾದ ಮುರುಗೇಶ್ ನಿರಾಣಿ ಹಾಗೂ ಸಿಸಿ ಪಾಟೀಲ್ ನೇತೃತ್ವದ ನಿಯೋಗ ಗುರುವಾರ ಹಿರಿಯೂರು ತಾಲೂಕು ಐಮಂಗಲ ಬಳಿ ಉಭಯ ಶ್ರೀಗಳನ್ನು ಭೇಟಿಯಾಗಿ ಚರ್ಚಿಸಿತು. ಚರ್ಚೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಶಾಸಕರು, ಸಚಿವರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಒಳ್ಳೆಯ ಸಂದೇಶ ಕಳುಹಿಸಿದ್ದಾರೆ. ಮೀಸಲಾತಿ ನೀಡಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಇದು ಮೊದಲ ಹಂತದ ಜಯ ಎಂದು ಭಾವಿಸುತ್ತೇವೆ ಎಂದರು.
ಆದೇಶ ಹೊರಡಿಸಲಿ ಎಂದು ತಿಳಿಸಿದರು. ಹರಿಹರ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, 22 ದಿನಗಳ ಪಾದಯಾತ್ರೆ ಯಶಸ್ವಿಯಾಗಿದೆ. ಸಮಾಜಕ್ಕೆ ಪಾಠ ಮಾಡುವ ನಾವೇ ಸರಿ ಇಲ್ಲದಿದ್ದರೆ ಶಾಸಕರು ಎಲ್ಲಿ ಸರಿಯಾಗುತ್ತಾರೆ ಎಂಬ ಭಾವನೆ ಇತ್ತು. ಈ ಹಿನ್ನೆಲೆಯಲ್ಲಿ ನಾವು ಒಟ್ಟಾಗಿ ಹೆಜ್ಜೆ ಹಾಕುತ್ತಿದ್ದೇವೆ ನಮ್ಮ ಸಚಿವರು, ಶಾಸಕರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ ಎಂದು ತಿಳಿಸಿದರು.
Related Articles
3ಬಿ ನೀಡಿದ್ದಾರೆ. 2ಎ ಕೂಡ ಅವರೇ ಕೊಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ ಎಂದರು.
Advertisement
ಸಚಿವ ಸಿ.ಸಿ. ಪಾಟೀಲ್ ಮಾತನಾಡಿ, ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯ ಬೇಡಿಕೆಯನ್ನು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಬಳಿ ಮನವಿ ಮಾಡಿದ್ದೇವೆ. ಈ ಬಗ್ಗೆ ಅಧ್ಯಯನ ಮಾಡಲು ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಗಳು ಆದೇಶ ಮಾಡಲಿದ್ದಾರೆ. ಶ್ರೀಗಳ ಹೋರಾಟಕ್ಕೆ ಯಶಸ್ಸು ತರಲು ಎಲ್ಲರೂ ಮುನ್ನುಗ್ಗುತ್ತೇವೆ ಎಂದು ಹೇಳಿದರು.
ಸಚಿವ ಮುರುಗೇಶ್ ನಿರಾಣಿ ಮಾತನಾಡಿ, 26 ವರ್ಷಗಳಿಂದ ಹೋರಾಟ ನಡೆಯುತ್ತಿದೆ. 2009 ರಲ್ಲಿ ಸಂಪುಟ ಉಪಸಮಿತಿ ರಚಿಸಿ ಅಧ್ಯಯನ ಆಗಿತ್ತು. ಕಾನೂನು ತೊಡಕಿನಿಂದ 3ಬಿಗೆ ಸೇರಿಸಲು ಯಶಸ್ವಿಯಾದೆವು. ಮತ್ತೆ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಸೇರುವ ಸದಾವಕಾಶ ಸಿಕ್ಕಿದೆ. ಸಮಾಜದ ಶಾಸಕರು ಸೇರಿದಂತೆ ಎಲ್ಲರ ಮನವಿಗೆ ಸ್ಪಂದಿಸಿ, ಸುಡು ಬಿಸಿಲಿನಲ್ಲಿ ಬರುವುದು ಬೇಡ ಎಂದು ಪಾದಯಾತ್ರೆ ಕೈಬಿಡಲು ಮನವಿ ಮಾಡಿದ್ದೇವೆ. ಬಿಡಲೇಬೇಕು ಎಂದು ಒತ್ತಾಯ ಮಾಡಿಲ್ಲ. ಎಂದರು.
ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ಸಂಪೂರ್ಣ ಸ್ವಾತಂತ್ರ ಇದ್ದು, ಅವರ ಬಗ್ಗೆ ಮಾತನಾಡುವುದಿಲ್ಲ. ಇಬ್ಬರೂ ಶ್ರೀಗಳನ್ನು ಒಂದೇ ವೇದಿಕೆಯಲ್ಲಿ ಕೂರಿಸುವುದು ನಮ್ಮ ಬಹಳ ದಿನಗಳ ಒತ್ತಾಸೆಯಾಗಿತ್ತು. ಇದರಿಂದ ಸಮುದಾಯದ 80 ಲಕ್ಷ ಜನರಿಗೆ ಸಂತೋಷವಾಗಿದೆ ಎಂದು ತಿಳಿಸಿದರು.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಾಳೆ ಎಲ್ಲಾ ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರ ಸಭೆ ಕರೆದಿದ್ದೇವೆ. ಅಲ್ಲಿ ಚರ್ಚಿಸಿ ಮುಂದಿನ ನಿರ್ಣಯ ತಿಳಿಸುತ್ತೇವೆ ಎಂದು ಪ್ರಕಟಿಸಿದರು.
22 ದಿನಗಳಿಂದ 486 ಕಿಮೀ ಪಾದಯಾತ್ರೆ ಮಾಡಿದ್ದೇವೆ. ಸರ್ಕಾರದಿಂದ ಸಚಿವರು, ಶಾಸಕರು ಬಂದು ನಮಗೆ ಆಶಾಭಾವನೆ ಮೂಡಿಸಿದ್ದಾರೆ. ಆಯೋಗಕ್ಕೆ ಶಿಫಾರಸು ಮಾಡಿ ತಕ್ಷಣ ವರದಿ ತರಿಸಿಕೊಂಡು ಮೀಸಲಾತಿ ಘೋಷಣೆ ಮಾಡಲಿ. ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆಬಂದಿದೆ. ಪಾದಯಾತ್ರೆಯನ್ನು ಬೆಂಗಳೂರಿನವರೆಗೆ ಮುಂದುವರೆಸುತ್ತೇವೆ. ಹಿರಿಯರ ಜತೆ ಚರ್ಚಿಸಿ ಫೆ. 15 ದಿನಾಂಕ ನಿಗ ದಿ ಮಾಡಿದ್ದೇವೆ. ಅಷ್ಟರಲ್ಲಿ ಗೆಜೆಟ್ ನೋಟಿ ಫಿಕೇಶನ್ ಹೊರಡಿಸಲಿ ಎಂದು ಮನವಿ ಮಾಡುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಬಾವಿ ಬೆಟ್ಟಪ್ಪ, ಸಂಡೂರು ನಾಗನಗೌಡ, ಶಾಸಕರಾದ ಅರವಿಂದ ಬೆಲ್ಲದ್, ಶಂಕರ ಪಾಟೀಲ್ ಮುನೇಕೊಪ್ಪ, ಅರುಣ್‌ಕುಮಾರ ಪೂಜಾರ್, ಸಿ.ಎಂ. ನಿಂಬಣ್ಣವರ್, ಮೋಹನ ಲಿಂಬಿಕಾಯಿ, ಮಹೇಶ್ ಕುಮಟಳ್ಳಿ, ವಿರೂಪಾಕ್ಷಪ್ಪ ಬಳ್ಳಾರಿ ಮತ್ತಿತರರು ಇದ್ದರು. ಓದಿ : ಏಳು-ಬೀಳಿನ ಕಠಿಣ ಹಾದಿ ಸವೆಸಿದ ಫೇಸ್ ಬುಕ್ ಗೆ 17 ವರ್ಷದ ಸಂಭ್ರಮ!