ಚಿತ್ರದುರ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್·ಮಂಗಳವಾರ ಜಿಲ್ಲೆಗೆ ಆಗಮಿಸಿ, ಜಿಲ್ಲೆಯಮಠಾಧೀಶರು ಹಾಗೂ ಗಣ್ಯರಿಗೆ ತಮ್ಮ ಪುತ್ರಿಯವಿವಾಹದ ಆಹ್ವಾನ ಪತ್ರಿಕೆ ನೀಡಿ ಆಮಂತ್ರಿಸಿದರು.ಡಿ.ಕೆ. ಶಿವಕುಮಾರ್ ಜಿಲ್ಲೆಗೆ ಆಗಮಿಸುತ್ತಲೇಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿನಗರಕ್ಕೆ ಕರೆತಂದರು.
ಆಹ್ವಾನ ಪತ್ರಿಕೆ ವಿತರಣೆಮುಗಿಯುವವರೆಗೆ ಜತೆಗಿದ್ದರು. ಬೆಂಗಳೂರಿನಿಂದಆಗಮಿಸಿದ ಡಿಕೆಶಿ, ಹಿರಿಯೂರಿನ ಪ್ರವಾಸಿಮಂದಿರಸಮೀಪದ ಆದಿಜಾಂಬವ ಮಠಕ್ಕೆ ಭೇಟಿ ನೀಡಿಶ್ರೀ ಷಡಕ್ಷರಿಮುನಿ ಸ್ವಾಮೀಜಿ ಅವರಿಗೆ ಆಹ್ವಾನಪತ್ರಿಕೆ ನೀಡಿದರು.
ನಂತರ ಮಾಜಿ ಸಚಿವ ಅಶ್ವತ್ಥರೆಡ್ಡಿ ಅವರ ಚಿತ್ರದುರ್ಗದ ಮನೆಗೆ ಭೇಟಿ ನೀಡಿಅವರ ಕುಟುಂಬದೊಂದಿಗೆ ಬೆಳಗಿನ ಉಪಾಹಾರಸೇವಿಸಿದರು. ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರಮನೆಗೂ ತೆರಳಿ ವಿವಾಹಕ್ಕೆ ಆಮಂತ್ರಣ ನೀಡಿದರು.ಮುರುಘಾ ಮಠಕ್ಕೆ ಭೇಟಿ ನೀಡಿ ಡಾ|ಶಿವಮೂರ್ತಿ ಮುರುಘಾ ಶರಣರೊಂದಿಗೆ ಕೆಲ ಕಾಲಮಾತುಕತೆ ನಡೆಸಿದರು. ಭೋವಿ ಗುರುಪೀಠದ ಶ್ರೀಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗಮಹಾಸಂಸ್ಥಾನದ ಡಾ| ಶಾಂತವೀರ ಸ್ವಾಮೀಜಿ,ಯಾದವ ಗುರುಪೀಠದ ಶ್ರೀ ಕೃಷ್ಣ ಯಾದವಾನಂದಸ್ವಾಮೀಜಿ, ಕಬೀರಾನಂದ ಆಶ್ರಮದ ಶ್ರೀಶಿವಲಿಂಗಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದಶ್ರೀ ಬಸವ ಮಾಚಿದೇವ ಸ್ವಾಮೀಜಿ, ಛಲವಾದಿಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ,ಹಾಗೂ ಶ್ರೀ ಕೇತೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗಿಪುತ್ರಿಯ ವಿವಾಹಕ್ಕೆ ಆಹ್ವಾನಿಸಿದರು.
ಬಳಿಕ ಮಾದಾರಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಅವರೊಂದಿಗೆ ಕೆಲ ಹೊತ್ತು ಚರ್ಚೆನಡೆಸಿದರು. ಈ ವೇಳೆ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಚಳ್ಳಕೆರೆಶಾಸಕ ಟಿ. ರಘುಮೂರ್ತಿ, ಮಾಜಿ ಶಾಸಕರಾದ ಡಿ.ಸುಧಾಕರ್, ಬಿ.ಜಿ. ಗೋವಿಂದಪ್ಪ, ಜಿಲ್ಲಾ ಪಂಚಾಯಿತಿಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಕಾಂಗ್ರೆಸ್ ಜಿಲ್ಲಾಧ್ಯಕ್ಷಎಂ.ಕೆ. ತಾಜ್‌ಪೀರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷಜಿ.ಎಸ್. ಮಂಜುನಾಥ್ ಇದ್ದರು.
ಓದಿ :·
ಮೀಸಲು ನೀಡದಿದ್ರೆ ವಿಧಾನಸೌಧಕ್ಕೆ ಮುತ್ತಿಗೆ