Advertisement

ರಾಜ್ಯ ಸರ್ಕಾರದ ವಿರುದ್ಧ ಒನಕೆ ಪ್ರದರ್ಶನ

04:03 PM Feb 02, 2021 | Team Udayavani |

ಚಿತ್ರದುರ್ಗ: ಪಂಚಮಸಾಲಿ ಸಮುದಾಯವನ್ನು 2ಎಗೆ·ಸೇರಿಸುವುದು ಹಾಗೂ ಲಿಂಗಾಯಿತ ಸಮಾಜಕ್ಕೆ ಕೇಂದ್ರದಲ್ಲಿಒಬಿಸಿ ಮೀಸಲಾತಿ ನೀಡುವಂತೆ ಪಂಚಮಸಾಲಿ ಸಮಾಜಕೂಡಲಸಂಗಮದಿಂದ ಪಾದಯಾತ್ರೆ ನಡೆಸುತ್ತಿದೆ. ಆದರೆಸಿಎಂ ಯಡಿಯೂರಪ್ಪ ಈವರೆಗೂ ಇದಕ್ಕೆ ಸ್ಪಂದಿಸಿಲ್ಲ.

Advertisement

ಹಾಗಾಗಿ ಮಂಗಳವಾರ ಚಿತ್ರದುರ್ಗದಲ್ಲಿ ಸರ್ಕಾರದವಿರುದ್ಧ ಒನಕೆ ಪ್ರದರ್ಶನ ಮಾಡಲಾಗುವುದು ಎಂದುಪಂಚಮಸಾಲಿ ಮಹಿಳಾ ಘಟಕದರಾಜ್ಯಾಧ್ಯಕ್ಷೆ ವೀಣಾ ವಿ.ಕಾಶಪ್ಪನವರ್‌ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂವಚನಾನಂದ ಸ್ವಾಮೀಜಿಗಳು ಬೀದಿಗಿಳಿದು ಪಾದಯಾತ್ರೆನಡೆಸುತ್ತಿದ್ದಾರೆ. ಆದರೂ ಸರ್ಕಾರ ಮೌನವಾಗಿದೆ. ಇದುಮುಖ್ಯಮಂತ್ರಿಗಳಿಗೆ ಶೋಭೆಯಲ್ಲ. ಅದಕ್ಕಾಗಿ ವೀರವನಿತೆಒನಕೆ ಓಬವ್ವಳ ನಾಡು ಚಿತ್ರದುರ್ಗದಲ್ಲಿ ಸರ್ಕಾರದ ವಿರುದ್ಧಒನಕೆ ಪ್ರದರ್ಶಿಸಲಾಗುವುದು. ಮಹಿಳೆಯರು ಸಹಸ್ರಾರು
ಸಂಖ್ಯೆಯಲ್ಲಿ ಭಾಗವಹಿಸಿ ಪಾದಯಾತ್ರೆಗೆ ಶಕ್ತಿ ತುಂಬುವಂತೆಮನವಿ ಮಾಡಿದರು.

ಕಳೆದ 16 ದಿನಗಳಿಂದ ಮೀಸಲಾತಿಗಾಗಿ ಪಾದಯಾತ್ರೆನಡೆಯುತ್ತಿದೆ. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆಯಿಲ್ಲ.ನಾವು ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಕೇಳುತ್ತಿದ್ದೇವೆಯೇಹೊರತು ರಾಜಕೀಯಕ್ಕಾಗಿ ಅಲ್ಲ. ಸರ್ಕಾರ ಈಗಲಾದರೂಎಚ್ಚೆತ್ತು ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿಮುಂದಿನ ದಿನಗಳಲ್ಲಿ ಹೋರಾಟವನ್ನು ಉಗ್ರ ಸ್ವರೂಪಕ್ಕೆಕೊಂಡೊಯ್ಯಲಾಗುವುದು ಎಂದರು.

ಮಹಿಳಾ ಸಮಾಜದ· ರುದ್ರಸ್ವಾಮಿ ಮಾತನಾಡಿ,ಮಂಗಳವಾರ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದಪೂರ್ಣಕುಂಭ, ಆರತಿಯೊಂದಿಗೆ ಮೆರವಣಿಗೆಹೊರಡಲಿದ್ದು, ಜಿಲ್ಲೆಯಾದ್ಯಂತ ಇರುವ ಪಂಚಮಸಾಲಿ,ಲಿಂಗಾಯಿತ ಸಮುದಾಯದ ಮಹಿಳೆಯರುಪಾಲ್ಗೊಳ್ಳುವಂತೆ ಕೋರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಶಾಂತಾ, ಅನ್ನಪೂರ್ಣ ಸಜ್ಜನ್‌,ಲತಾ ಉಮೇಶ್‌, ಸುಜಾತ ಹಿರೇಮs…, ಮಂಜುಳಾ ರವಿ,ರುದ್ರಾಣಿ ಗಂಗಾಧರ, ಆರತಿ ಮಹಡಿ ಶಿವಮೂರ್ತಿ, ಆಶಾಕಲ್ಲಪ್ಪ, ಜ್ಯೋತಿ ದೇವೇಂದ್ರಪ್ಪ ಮತ್ತಿತರರು ಇದ್ದರು.

ಓದಿ :·4.18 ಲಕ್ಷ ಬೋಗಸ್‌ ಪಿಂಚಣಿ ಪ್ರಕರಣ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next