ರಾಜ್ಯದ ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸುವ ಮೂಲಕ ನಮ್ಮ ಸಮಾಜದ ನೋವನ್ನು ಹೊರಹಾಕಿದ್ದಾರೆ ಎಂದು ಕೂಡಲಸಂಗಮದ
ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜ ನಡೆಸುತ್ತಿರುವ ಪಾದಯಾತ್ರೆ ಇಲ್ಲಿನ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣಕ್ಕೆ
ಆಗಮಿಸಿದ ಸಂದರ್ಭದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಶ್ರೀಗಳು ಮಾತನಾಡಿದರು.
Advertisement
ಸಂವಿಧಾನದ ಮೂಲಕ ಅಂಬೇಡ್ಕರ್ ರವರು ಒದಗಿಸಿರುವ ಮೀಸಲಾತಿಯೆಂಬ ರೊಟ್ಟಿಯಲ್ಲಿ ಒಂದು ಚೂರು ಕೇಳುತ್ತಿದ್ದೇವೆ. ಮುಖ್ಯಮಂತ್ರಿಗಳು ಎಲ್ಲಾ ವರದಿಗಳನ್ನು ತರಿಸಿಕೊಂಡು ಪರಿಶೀಲಿಸಿ 2ಎ ಮೀಸಲಾತಿ ಘೋಷಿಸಿ ಆದೇಶ ಹೊರಡಿಸುವವರೆಗೂನಮ್ಮ ಹೋರಾಟ ನಿಲ್ಲದು. ಈ ಕುರಿತು ಪ್ರಧಾನಮಂತ್ರಿಯವರು ದೆಹಲಿಗೆ ಕರೆದರೂ ನಾವು ಹೋಗಲು ಸಿದ್ಧರಿಲ್ಲ. ಏಕೆಂದರೆ ನಮ್ಮ
ಪಾದಯಾತ್ರೆ ನಿರ್ದಿಷ್ಟ ಉದ್ದೇಶ ಹೊಂದಿದೆ.
ಇಕ್ಕಟ್ಟಿಗೆ ಸಿಲುಕಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 18 ದಿನಕ್ಕೆ ಪಾದಯಾತ್ರೆ ಕಾಲಿಟ್ಟಿದ್ದು, 400 ಕಿಮೀ ಸಾಗಿದೆ. ಭೇದ ಭಾವವಿಲ್ಲದ ಏಕೈಕ ಸಮಾಜ ಪಂಚಮಸಾಲಿ ಸಮಾಜವಾಗಿದೆ.
ಕೇಳುವ ಗುಣ ನಮಗೆ ಇರಲಿಲ್ಲ. ಕೊಟ್ಟು ದೊಡ್ಡವರಾಗಿದ್ದೇವೆ. ಶಿಕ್ಷಣ ಮತ್ತು ದಾಸೋಹಕ್ಕೆ ಸಮಾಜದ ಕೊಡುಗೆ ಅಪಾರ. ಸೊಲ್ಲಾಪುರದಿಂದ
ಕೊಳ್ಳೇಗಾಲವರೆಗೆ ಸಮಾಜ ಹಾಸ್ಟೆಲ್‌ಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಕೊಡುಗೆ ನೀಡಿದೆ. ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಬೀದಿಗಿಳಿದು ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.
Related Articles
ಲಿಂಗಾಯಿತರಲ್ಲೆ ಹಲವರಿಗೆ ಮೀಸಲಾತಿ ದೊರೆತಿದೆ. ನಮ್ಮ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗದೆ ಅನ್ಯಾಯವಾಗಿದೆ ಎಂದರು.
ಹರಿಹರದ ವಚನಾನಂದ ಸ್ವಾಮೀಜಿ ಮಾತನಾಡಿ, ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ನಾವು ಸಮಾಜದ ಉದ್ಧಾರಕ್ಕಾಗಿ ಹೆದ್ದಾರಿಗೆ ಬಂದಿದ್ದೇವೆ. ತಾತ್ವಿಕ ಭೇದದಿಂದ ಮಠಗಳು ಬೇರೆಯಾಗಿದ್ದರೂ ಇದೀಗ ಸಮಾಜದ ಒಳಿತಿಗಾಗಿ ನಾವೆಲ್ಲರೂ ಒಂದಾಗಿ ಮುನ್ನಡೆಯುತ್ತಿದ್ದೇವೆ.
Advertisement
ತಂದೆಯಂತಿರುವ ಸಮಾಜದ ಶ್ರೀರಕ್ಷೆ ನಮ್ಮ ಮೇಲಿರಬೇಕು ಎಂದು ಹೇಳಿದರು.ವಿದ್ಯಾರ್ಥಿಗಳಿಗಾಗಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ ಕೀರ್ತಿ ಲಿಂಗೈಕ್ಯ ಜಯದೇವ ಶ್ರೀಗಳಿಗೆ ಸಲ್ಲುತ್ತದೆ. ನಮ್ಮಲ್ಲಿ ನಡೆ-ನುಡಿ
ಒಂದಾಗಿರಬೇಕು. ನಮ್ಮ ಮಠದ ಶ್ರೀಗಳ ಪಾದಯಾತ್ರೆ ಬಗ್ಗೆ ಬೇರೆಯವರು ಅವಹೇಳನ ಮಾಡುವುದು ನಿಲ್ಲಿಸಬೇಕು. ಸಮಾಧಾನವಾಗಿ ಸಮಾಜವನ್ನು ಕಟ್ಟೋಣ ಎಂದರು. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ತೇರದಾಳ ಶಾಸಕ ಸಿದ್ದು ಸವದಿ, ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಎನ್. ಕೋಟ್ರೇಶ್, ಚಂದ್ರಶೇಖರ್ ಪೂಜಾರ್, ಕಲ್ಲಪ್ಪ, ನಾಗರಾಜ್, ರುದ್ರಾಣಿ ಗಂಗಾಧರ, ಎಂ.ಎಸ್. ಪಾಟೀಲ್, ವಿರಾಜ್ ಪಾಟೀಲ್, ವೀರೇಶ್, ಶಾಂತಕುಮಾರ್, ಪ್ರಭು ಕಲುºರ್ಗಿ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ,ಸಿದ್ದಮ್ಮ, ಪ್ರವೀಣ್‌ಕುಮಾರ್ ಇದ್ದರು ಓದಿ : ನಾಟಕದಿಂದ ಮನುಷ್ಯನ ಬದುಕು ಬದಲಾವಣೆ