Advertisement

ಮಲ್ಲಿ ಕಾರ್ಜುನ್‌-ಓಂಕಾರಪ್ಪ ಆಯ್ಕೆ

04:09 PM Jan 29, 2021 | Team Udayavani |

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ನಗರಸಭೆ ಮಾಜಿ ಅಧ್ಯಕ್ಷ ಡಿ.ಮಲ್ಲಿಕಾರ್ಜುನ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ.ಮಲ್ಲಿಕಾರ್ಜುನ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಓಂಕಾರಪ್ಪ ಇಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಇಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾ ಧಿಕಾರಿ ಬಷೀರ್‌
ಖಾನ್‌ ಪ್ರಕಟಿಸಿದರು.

ಈ ವೇಳೆ ಮಾತನಾಡಿದ ಡಿ.ಮಲ್ಲಿಕಾರ್ಜುನ್‌, ಕನಕ ಪತ್ತಿನ ಸಹಕಾರ ಸಂಘಕ್ಕೆ ನನ್ನ ಮೇಲೆ ವಿಶ್ವಾಸವಿಟ್ಟು ಸತತವಾಗಿ ಮೂರನೇ ಅವ ಧಿಗೆ ನನ್ನನ್ನು ಆಯ್ಕೆ ಮಾಡಲಾಗಿದೆ. ಹಾಗಾಗಿ ಸಂಘದ ಸದಸ್ಯರು ಮತ್ತು ನಿರ್ದೇಶಕರುಗಳ ನಿರೀಕ್ಷೆಯಂತೆ ಸಂಘದ ಬೆಳವಣಿಗೆಗೆ ಶ್ರಮಿಸುವುದಾಗಿ ನುಡಿದರು.

ಕಳೆದ ಎರಡು ಅವ ಧಿಯಲ್ಲಿ ಈ ಸಹಕಾರ ಸಂಘದಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಈ ಸಂಘದಲ್ಲಿ ಈಗ ಉತ್ತಮ ಹಣಕಾಸಿನ ವ್ಯವಹಾರ ನಡೆಸಲು ಅನುಕೂಲಕರ ವಾತಾವರಣ ನಿರ್ಮಿಸಿಕೊಡಲಾಗಿದ್ದು, ಹಂತ, ಹಂತವಾಗಿ ಪ್ರಗತಿಯತ್ತ
ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘವನ್ನು ಆರ್ಥಿಕವಾಗಿ ಬಲಪಡಿಸಲು ಸಂಕಲ್ಪ ಮಾಡಿರುವುದಾಗಿ
ಮಲ್ಲಿಕಾರ್ಜುನ್‌ ಭರವಸೆ ನೀಡಿದರು.

ಉಪಾಧ್ಯಕ್ಷ ಓಂಕಾರಪ್ಪ ಮಾತನಾಡಿ, ಎಲ್ಲಾ ಸದಸ್ಯರು ಮತ್ತು ನಿರ್ದೇಶಕಗಳು ಸಹಕಾರ ನೀಡಿದಾಗ ಮಾತ್ರ ಸಂಘದ ಬೆಳವಣಿಗೆ ಸಾಧ್ಯವಾಗಲಿದೆ. ಎಲ್ಲರೂ ಒಟ್ಟುಗೂಡಿ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಸಂಘವನ್ನು ಅಭಿವೃದ್ಧಿಪಡಿಸಲು ದೃಢ ಸಂಕಲ್ಪ ಮಾಡೋಣ ಎಂದು ಸಲಹೆ ನೀಡಿದರು.

Advertisement

ನಿರ್ದೇಶಕರಾದ ಕೆ.ಬಿ.ಕೃಷ್ಣಪ್ಪ, ಕೆ.ಬಿ.ರಾಮಪ್ಪ, ಈ.ಅರುಣ್‌ಕುಮಾರ್‌, ಸಿ.ಪುಷ್ಪರಾಜ್‌, ಎಚ್‌ ನೀಲಗಿರಿಯಪ್ಪ, ಸೋಮಶೇಖರ್‌, ಎಂ.ಎಸ್‌.ಬಸವರಾಜ್‌, ದೊಡ್ಡಲಿಂಗಪ್ಪ, ಸಿ,ಷಣ್ಮುಖ, ಎಚ್‌.ಪಾರ್ವತಮ್ಮ, ಡಿ.ಶೋಭಾ, ಮುಖಂಡರಾದ ನರಸಿಂಹಮೂರ್ತಿ, ನಿಖೀಲ್‌, ಹನುಮಂತು ಪೂಜಾರಿ, ಮುಸ್ತು, ಬೀರೇಶ್ವರ್‌, ಶಿವು, ತಿಪ್ಪೇಸ್ವಾಮಿ, ಇನ್ನಿತರರು ಹಾಜರಿದ್ದರು.

ಓದಿ : ನಿರಂತರ ಹೋರಾಟದಲ್ಲಿ ಪಾಲ್ಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next