ಚಿತ್ರದುರ್ಗ: ರಾಷ್ಟ್ರೀಯ ಪಲ್ಸ್ ಪೋಲಿಯೋ·ಲಸಿಕಾ ಕಾರ್ಯಕ್ರಮದಡಿ 2021ರ ಜನವರಿ 31 ರಿಂದ ಫೆ.3 ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಲ್ಲಿ 5 ವರ್ಷದೊಳಗಿನ 41,815 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿ ಕಾರಿ ಡಾ.ಬಿ.ವಿ.ಗಿರೀಶ್ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 2021ರ ಜನವರಿ 31 ರಿಂದ ಫೆಬ್ರವರಿ 3ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿಯಲ್ಲಿ ಚಿತ್ರದುರ್ಗ
ತಾಲೂಕಿನ 0-5 ವರ್ಷದೊಳಗಿನ ಒಟ್ಟು 41,815 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 270 ಬೂತ್‌ಗಳನ್ನು ತಾಲೂಕು ಮಟ್ಟದಲ್ಲಿ ಆಯ್ಕೆ ಮಾಡಲಾಗಿದೆ. 588 ಲಸಿಕೆ ಹಾಕುವ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ
ಎಂದರು.
ಜ.31ರಂದು ಬೂತ್ ಮಟ್ಟದ ಲಸಿಕೆ ಹಾಕಲಾಗುತ್ತದೆ. ಇನ್ನುಳಿದಂತೆ ಫೆ. 1,2, ಮತ್ತು 3 ರಂದು ಬಿಟ್ಟು ಹೋದ ಎಲ್ಲ ಮಕ್ಕಳಿಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
2014ರಲ್ಲಿ ಭಾರತವು ಪೋಲಿಯೋ ಮುಕ್ತ ದೇಶವಾಗಿದೆ. ಆದರೆ ನೆರೆಹೊರೆಯ ದೇಶಗಳಲ್ಲಿ ಇನ್ನೂ ಇದೆ. ಅದು ನಮ್ಮಲ್ಲಿಯೂ ಮತ್ತೆ ಮರುಕಳಿಸಬಹುದು. ಆದ್ದರಿಂದ ನಿಮ್ಮ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಇದರಿಂದ ಪೋಲಿಯೋ ವಿರುದ್ಧ ವಿಜಯ ಸಾ ಧಿಸುವುದನ್ನು ಮುಂದುವರಿಸೋಣ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿ ಕಾರಿ ಮಂಜುನಾಥ್ ಮಾತನಾಡಿ, ನಗರದ ಚಳ್ಳಕೆರೆ ಟೋಲ್ ಗೇಟ್, ಜಿಲ್ಲಾ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಅಂಚೆ ಕಚೇರಿ, ಖಾಸಗಿ ಬಸ್ ನಿಲ್ದಾಣ, ಮುರುಘಾ ಮಠ, ರೈಲ್ವೆ ನಿಲ್ದಾಣ, ಚಿತ್ರದುರ್ಗ ಕೋಟೆ, ಭರಮಸಾಗರ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣ, ಸಿರಿಗೆರೆ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕೇಂದ್ರ ತೆರೆಯಲಾಗುವುದು ಎಂದು
ಹೇಳಿದರು.
ಉಪ ತಶೀಲ್ದಾರ್ ಪರುಶುರಾಮ್, ನಗರಸಭೆಯ ಆಯುಕ್ತ ಜೆ.ಟಿ.ಹನುಮಂತರಾಜು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿ ಕಾರಿ ಜಾನಕಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಸಿದ್ದಪ್ಪ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅ ಧಿಕಾರಿಗಳು ಹಾಗೂ ಇತರೆ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಓದಿ :
ಜೇರಟಗಿಯಲ್ಲಿ ಅಜಯಸಿಂಗ್ ಗ್ರಾಮ ವಾಸ್ತವ್ಯ