Advertisement

ಜನರ ತ್ವರಿತ ಸೇವೆಗೆ ಸರ್ಕಾರದಿಂದ ಕ್ರಮ

03:50 PM Jan 29, 2021 | Team Udayavani |

ಚಳ್ಳಕೆರೆ: ರಾಜ್ಯ ಜಿಲ್ಲೆಯ ಜನತೆಗೆ ಪೊಲೀಸ್‌·ಇಲಾಖೆಯ ತ್ವರಿತ ಕಾರ್ಯದಕ್ಷತೆಗಾಗಿ ಐತಿಹಾಸಿಕನೂತನ ತ್ವರಿತ ಸ್ಪಂದನಾ ವ್ಯವಸ್ಥೆ ಜಾರಿಗೆ ತಂದಿದೆ.ಜಿಲ್ಲೆಯ ಜನರು ಯಾವುದೇ ರೀತಿಯ ಭಯಭೀತಿಇಲ್ಲದೆ ನೆಮ್ಮದಿಯಿಂದ ಸಂತಸದಿಂದ ಜೀವನನಡೆಸುವಂತಹ ವ್ಯವಸ್ಥೆ ಜಾರಿಯಾಗುತ್ತಿರುವುದುಹೆಮ್ಮೆಯ ವಿಷಯ ಎಂದು ಎಂದು ಜಿಲ್ಲಾ ಪೊಲೀಸ್‌
ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

Advertisement

ಇಲ್ಲಿನ ಖಾಸಗಿ ಬಸ್‌ ನಿಲ್ದಾಣದಲ್ಲಿ ಪೊಲೀಸ್‌ಇಲಾಖೆ ಕ್ಷಿಪ್ರ ಕಾರ್ಯಚರಣೆಗಾಗಿ ದುರಂತ ಹಾಗೂಇನ್ನಿತರ ತುರ್ತು ಸಂದರ್ಭಗಳಲ್ಲಿ ಜನರ ನೆರವಿಗೆಧಾವಿಸಲು ನೆರೆ, ಅಗ್ನಿ ಅನಾಹುತ, ಸಮಾಜ ಘಾತುಕಶಕ್ತಿಗಳಿಂದ ಉಂಟಾಗಬಹುದಾದ ಅಪಾಯವನ್ನುಕ್ಷಣ ಮಾತ್ರದಲ್ಲಿ ನಿಯಂತ್ರಿಸುವ ದೃಷ್ಟಿಯಿಂದ ತುರ್ತುಸ್ಪಂದನಾ ಸಹಾಯ ವ್ಯವಸೆ ಜಾರಿಗೆ ತರಲಾಗಿದೆ.ತಮ್ಮ ಬಳಿಯಲ್ಲಿರುವ ಮೊಬೈಲ್‌ ಸಹಾಯದಿಂದ112ಗೆ ಡಯಲ್‌ ಮಾಡಿದರೆ ಸಾಕು ಕೇವಲ ಕೆಲವೇನಿಮಿಷಗಳಲ್ಲಿ ಪೊಲೀಸ್‌ ಇಲಾಖೆ ನಿಮ್ಮ ಸಹಾಯಕ್ಕೆಬರಲಿದೆ. ಇದರಿಂದ ಯಾವುದೇ ಸಂದರ್ಭದಲ್ಲೂಸಹ ಎಂತಹ ಅಪಾಯಸ್ಥಿತಿ ಬಂದರೂ ಸಹ ಅದನ್ನುವ್ಯವಸ್ಥಿತವಾಗಿ ಎದುರಿಸುವ ದೃಷ್ಟಿಯಿಂದ ಪೊಲೀಸ್‌ಇಲಾಖೆ ಈ ನೂತನ ಕಾರ್ಯಕ್ರಮ ಜನರಿಗಾಗಿಜಾರಿಗೆ ತಂದಿದ್ದು, ಜನರು ಇದರ ಸದುಪಯೋಗಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಡಿ.ಎ.ಆರ್‌ ಡಿವೈಎಸ್ಪಿ ಜಿ.ಬಿ.ತಿಪ್ಪೇಸ್ವಾಮಿ ಮಾತನಾಡಿ,ಪೊಲೀಸ್‌ ಇಲಾಖೆಯಲ್ಲಿ ವಿನೂತನ ಪ್ರಯೋಗವನ್ನುಸರ್ಕಾರ ಜಾರಿಗೊಳಿಸಿದ್ದು, ಅಪಘಾತ, ಅಗ್ನಿದುರಂತ,ರಾಷ್ಟ್ರೀಯ ವಿಪತ್ತು ಸಂಭವಿಸಿದ ಸಂದರ್ಭದಲ್ಲಿಪೊಲೀಸ್‌ ಇಲಾಖೆಯನ್ನು ಕಾಯದೆ ಸಾರ್ವಜನಿಕರೇ112ಕ್ಕೆ ಕರೆ ಮಾಡಿದರೆಸಾಕು ಕೇವಲ ಕೆಲವೇನಿಮಿಷಗಳಲ್ಲಿ ಪೊಲೀಸ್‌ ಇಲಾಖೆ ತುರ್ತು ಕ್ರಮಮೂಲಕ ಪರಿಹಾರ ನೀಡಲಿದೆ. ದೇಶದ ಇತಿಹಾಸದಲ್ಲಿಇದೊಂದು ನೂತನ ಕ್ರಮವಾಗಿದೆ ಎಂದರು.

ರೈತರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷಕೆ.ಪಿ.ಭೂತಯ್ಯ ಮಾತನಾಡಿ, ನಗರದ ಸಂಚಾರಿವ್ಯವಸ್ಥೆಯನ್ನು ಹತೋಟಿಗೆ ತರಬೇಕಿದೆ. ಗ್ರಾಮೀಣಭಾಗದ ಪೊಲೀಸ್‌ ಠಾಣೆಯ ಜತೆಗೆ ಗಡಿಭಾಗದಜಾಜೂರುಗೆ ಪೊಲೀಸ್‌ ಠಾಣೆ ನೀಡಬೇಕು ಎಂದುಮನವಿ ಮಾಡಿದರು.
ಸಮಾಜ ಸೇವಕ ಎಚ್‌.ಎಸ್‌.ಸೈಯದ್‌ಮಾತನಾಡಿ, ಕೊರೊನಾ ನಿಯಂತ್ರಣ ಸಂದರ್ಭದಲ್ಲಿಬೇರೆ, ಬೇರೆ ರಾಜ್ಯಗಳಿಂದ ಆಗಮಿಸಿ ಕೂಲಿಕಾರ್ಮಿಕರು ತಮ್ಮ ರಾಜ್ಯಕ್ಕೆ ವಾಪಸ್‌ ತೆರಳಲು ಜಿಲ್ಲಾರಕ್ಷಣಾಧಿ ಕಾರಿಗಳು ಸಾಕಷ್ಟು ಪರಿಶ್ರಮವಹಿಸಿದ್ದರು
ಎಂದರು.

ಡಿವೈಎಸ್ಪಿ ಕೆ.ವಿ.ಶ್ರೀಧರ್‌, ವೃತ್ತನಿರೀಕ್ಷಕ ನಲವಾಗಲು ಮಂಜುನಾಥ, ಠಾಣಾಇನ್ಸ್‌ಪೆಕ್ಟರ್‌ ಜೆ.ಸಿ.ತಿಪ್ಪೇಸ್ವಾಮಿ, ಪಿಎಸ್‌ಐಗಳಾದಮಾರುತಿ, ಮಹೇಶ್‌ ಹೊಸಪೇಟೆ ಮುಂತಾದವರುಉಪಸ್ಥಿತರಿದ್ದರು.

Advertisement

ಓದಿ : ಕೋವಿಡ್‌ ಲಸಿಕೆ: ಜಿಲ್ಲೆ ದ್ವಿತೀಯ ಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next