Advertisement

ನ್ಯಾನೋ ಯೂರಿಯಾ ಪರಿಸರ ಸ್ನೇಹಿ

10:49 PM Jun 16, 2021 | Team Udayavani |

ಭರಮಸಾಗರ: ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಇಫ್ಕೋ ಸಂಸ್ಥೆ ರೈತ ಮತ್ತು ಪರಿಸರ ಸ್ನೇಹಿ ನ್ಯಾನೋ ಯೂರಿಯಾವನ್ನು ಕರ್ನಾಟಕದಲ್ಲಿ ಪರಿಚಯಿಸುತ್ತಿದೆ ಎಂದು ಇಫ್ಕೋ ಸಂಸ್ಥೆಯ ಕ್ಷೇತ್ರಾಧಿಕಾರಿ ಲಕ್ಷ್ಮೀಶ್‌ ಹೇಳಿದರು.

Advertisement

ಸಮೀಪದ ಕಾಲಗೆರೆ ಗ್ರಾಮದ ಜಮೀನೊಂದರಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ನ್ಯಾನೋ ಯೂರಿಯಾ ದ್ರಾವಣ ಸಿಂಪಡಣೆಯ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು. ಒಂದು ಚೀಲ ಯೂರಿಯಾ ಗೊಬ್ಬರ ಬಳಕೆಗೆ ಬದಲಾಗಿ 500 ಎಂಎಲ್‌ ನ್ಯಾನೋ ಯೂರಿಯಾವನ್ನು ಬೆಳೆಗಳಿಗೆ ಸಿಂಪಡಣೆ ಮಾಡಿ ರೈತರು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಮೆಕ್ಕೆಜೋಳ ಸೇರಿದಂತೆ ಎಲ್ಲಾ ಬೆಳೆಗಳಿಗೆ ಇದನ್ನು ಬಳಸಬಹುದು. ಪರಿಸರಕ್ಕು ಹಾನಿಯಲ್ಲ. ಮನುಷ್ಯ, ಪ್ರಾಣಿ, ಜೇನುಹುಳು ಇತರೆ ಜೀವಿಗಳಿಗೆ ಈ ದ್ರಾವಣ ಅಪಾಯಕಾರಿಯಲ್ಲ. 50 ಕೆಜಿ ಯೂರಿಯಾ ಗೊಬ್ಬರ ಬಳಕೆ ಮಾಡಿದಾಗ ನೈಜವಾಗಿ ಶೇ. 30 ರಿಂದ 40 ಮಾತ್ರ ಉಪಯೋಗಕ್ಕೆ ಬರುತ್ತಿತ್ತು. ಉಳಿದಿದ್ದೆಲ್ಲ ಮಳೆ ನೀರಿಗೆ ಹರಿಯುವುದು ಇಲ್ಲವೇ ಬಿಸಿಲಿಗೆ ಆವಿಯಾಗುತ್ತಿತ್ತು. ದಪ್ಪ ಕಾಳಿನ ಗ್ಲಾನ್‌ಲಾರ್‌ ಯೂರಿಯಾ ಬೇಗ ಕರಗುತ್ತಿರಲಿಲ್ಲ. ಅದನ್ನು ಬೇಗ ಕರಗದಂತೆ ತಯಾರಿಸಲಾಗುತ್ತಿತ್ತು. ಶೇ. 80ಕ್ಕಿಂತ ಹೆಚ್ಚು ಪ್ರಮಾಣದ ನ್ಯಾಯೋ ಯೂರಿಯಾ ಸಿಂಡಪಣೆ ಮಾಡುವುದರಿಂದ ನಷ್ಟವಾಗದು ಎಂದರು.

ನ್ಯಾನೋ ಯೂರಿಯಾ ಸಿಂಪಡಣೆ ಮಾಡಿದಾಗ ಎಲೆಗಳ ಮೂಲಕ ಸ್ಟೊಮ್ಯಾಟೋ ಮೂಲಕ ನೇರವಾಗಿ ಗಿಡಕ್ಕೆ ಬಳಕೆಯಾಗುತ್ತದೆ. ಮಳೆ ಕಡಿಮೆ ಇದ್ದಾಗ ಒಂದು ಲೀಟರ್‌ ನೀರಿಗೆ 4 ಅಥವಾ 2 ಎಂಎಲ್‌ ಸೇರಿಸಿ ಸಿಂಪಡಿಸಬೇಕು. ಸಾರಜನಕದ ಅಂಶ ಇದರಲ್ಲಿದ್ದು, 25 ರಿಂದ 30 ದಿನದಲ್ಲಿ ಮೆಕ್ಕೆಜೋಳಕ್ಕೆ ಮೊದಲ ನ್ಯಾನೊ ಯೂರಿಯಾ ಸಿಂಪಡಣೆ ಮಾಡಬೇಕು.

40 ರಿಂದ 45 ದಿನಗಳ ಅವ ಧಿಯಲ್ಲಿ ಎರಡನೇ ಸಿಂಡಪಣೆ ಮಾಡಬೇಕು. 45 ದಿನಗಳ ಒಳಗೆ ನೀಡುವ ಗೊಬ್ಬರದ ಅಂಶಗಳು ಮಾತ್ರ ಉಪಯುಕ್ತವಾಗಿರುತ್ತದೆ. ಇದನ್ನು ಸಿಂಪಡಣೆ ಮಾಡಿದ ಮೇಲೆ ಯೂರಿಯಾ ಗೊಬ್ಬರ ಬಳಕೆ ಮಾಡುವಂತಿಲ್ಲ ಎಂದು ತಿಳಿಸಿದರು. ಜೂನ್‌ 25ರ ನಂತರ ಎಲ್ಲಾ ಸಹಕಾರ ಸಂಘ, ಗೊಬ್ಬರದ ಅಂಗಡಿಗಳಲ್ಲಿ 240 ರೂ.ಗೆ 500 ಎಂಎಲ್‌ನ ನ್ಯಾನೋ ಯೂರಿಯಾ ಲಭ್ಯವಾಗಲಿದೆ. ಒಂದು ಎಕರೆಗೆ ಅರ್ಧ ಲೀಟರ್‌ ಬಳಸಬಹುದು. ಮಳೆ ಕಡಿಮೆ ಇದ್ದಾಗ ಲೀಟರ್‌ಗೆ 2 ಎಂಎಲ್‌, ಮಳೆ ಜಾಸ್ತಿ ಇದ್ದಾಗ 4 ಎಂಎಲ್‌ ಬಳಕೆ ಮಾಡಬಹುದು ಎಂದರು.

ಇಫ್ಕೋ ಸಂಸ್ಥೆಯಿಂದ ಖರೀದಿಸಿದ ಯೂರಿಯಾ ಗೊಬ್ಬರ ಚೀಲ ಒಂದಕ್ಕೆ ನಾಲ್ಕು ಸಾವಿರದಂತೆ ಇನ್ಷೊರೆನ್ಸ್‌ ಇರುತ್ತದೆ. ಅಪಘಾತ ಹೊಂದಿದ ವ್ಯಕ್ತಿಯ ನಾಮಿನಿಗೆ 25 ಚೀಲಕ್ಕೆ ಒಂದು ಲಕ್ಷದವರೆಗೆ ಜೀವವಿಮೆ ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ಕಡ್ಡಾಯವಾಗಿ ಗೊಬ್ಬರ ಖರೀದಿಸಿದ ರಸೀದಿಯನ್ನು ಹೊಂದಿರಬೇಕು ಎಂದು ಹೇಳಿದರು.

Advertisement

ಜಿಪಂ ಸದಸ್ಯ ಡಿ.ವಿ. ಶರಣಪ್ಪ, ಟಿಎಪಿಎಂಸಿ ಅಧ್ಯಕ್ಷ ಕೋಗುಂಡೆ ಮಂಜುನಾಥ್‌, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್‌ಕುಮಾರ್‌, ತಾಪಂ ಸದಸ್ಯರಾದ ಕಾಲಗೆರೆ ಶೇಖರಪ್ಪ, ಎನ್‌. ಕಲ್ಲೇಶ್‌, ಕೃಷಿ ಇಲಾಖೆ ಜಂಟಿ ಉಪ ನಿರ್ದೇಶಕ ರಮೇಶ್‌ಕುಮಾರ್‌, ಸಹಾಯಕ ಕೃಷಿ ನಿರ್ದೇಶಕ ಚಂದ್ರ ಕುಮಾರ್‌, ಕೃಷಿ ಅ ಧಿಕಾರಿಗಳಾದ ಶ್ರೀನಿವಾಸ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next