Advertisement

ಒತ್ತುವರಿ ತೆರವಿಗೆ ಶಾಸಕ ತಿಪ್ಪಾರೆಡ್ಡಿ ಸೂಚನೆ

10:34 PM Jun 16, 2021 | Team Udayavani |

ಚಿತ್ರದುರ್ಗ: ನಗರದ ವಿ.ಪಿ. ಬಡಾವಣೆಯಲ್ಲಿ ಕನ್ಸರ್‌ವೆನ್ಸಿಗಳ ಒತ್ತುವರಿಯಾಗಿದ್ದು, ಕೂಡಲೇ ಅದನ್ನು ತೆರವುಗೊಳಿಸಿ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

Advertisement

ವಿ.ಪಿ. ಬಡಾವಣೆಯ 3ನೇ ಕ್ರಾಸ್‌ (ಹಿಟ್ಟಿನ ಗಿರಣಿ ಹತ್ತಿರ) ಸಿಸಿ ರಸ್ತೆ, ಕಾಮಗಾರಿಗೆ ಚಾಲನೆ ನೀಡಿ ಅಕ್ಕ-ಪಕ್ಕದಲ್ಲಿ ನಗರಸಭೆಯ ಜಾಗವಾದ ಕನ್ಸರ್‌ವೆನ್ಸಿಯನ್ನು ಕೆಲವರು ಒತ್ತುವರಿ ಮಾಡಿ ಗೇಟ್‌ ಹಾಕಿದ್ದನ್ನು ಕಂಡು ಕೋಪಗೊಂಡ ಶಾಸಕರು, ಇದನ್ನು ಯಾರು ಮಾಡಿದ್ದು, ಇಲ್ಲಿ ನಗರಸಭೆಯ ಜಾಗವನ್ನು ಒತ್ತುವರಿ ಮಾಡುವ ಮೂಲಕ ಮನೆಯನ್ನು ನಿರ್ಮಾಣ ಮಾಡಿ ಮೆಟ್ಟಿಲುಗಳನ್ನು ಹಾಕಿದ್ದಾರೆ ಇದರ ಬಗ್ಗೆ ಪೌರಾಯುಕ್ತರಿಗೆ ತಿಳಿಸಿ ಕೊಡಲೇ ತೆರವುಗೊಳಿಸುವಂತೆ ಸೂಚನೆ ನೀಡಿದರು.

ಜೆ.ಸಿ.ಆರ್‌. ಬಡಾವಣೆಯ ಎರಡನೇ ತಿರುವಿನಿಂದ ವಿ.ಪಿ. ಬಡಾವಣೆಗೆ ಬರುವ ದಾರಿಯ ಪಕ್ಕದಲ್ಲಿ ಇರುವ ಕನ್ಸರ್‌ವೆನ್ಸಿಗೆ ಅಡ್ಡಲಾಗಿ ಗೇಟ್‌ ಹಾಕಿದ್ದರಿಂದ ಇಲ್ಲಿ ಹಂದಿಗಳ ವಾಸ ಹೆಚ್ಚಾಗಿದೆ. ಇದರಿಂದ ನಗರದಲ್ಲಿ ರೋಗಗಳ ಹೆಚ್ಚಾಗುತ್ತಿದೆ. ಈಗಲೇ ಜನತೆ ಕೊರೊನಾಗೆ ತುತ್ತಾಗುತ್ತಿದ್ದಾರೆ. ಮುಂದೆ ಮತ್ತೂಂದು ರೋಗ ಬರುವುದು ಬೇಡ, ಇದರ ಬಗ್ಗೆ ನಿಗಾ ವಹಿಸಿ ಎಲ್ಲವನ್ನೂ ತೆರವುಗೊಳಿಸಿ ಎಂದರು.

ಇದೇ ವೇಳೆ ಸಮಯದಲ್ಲಿ ಅಲ್ಲೇ ಇದ್ದ ಸರ್ಕಾರದ ಸಹಾಯಕ ಔಷ  ಧ ನಿಯಂತ್ರಣ ಕಚೇರಿಗೆ ಸಮಯ ಮೀರಿದ್ದರೂ ಕರ್ತವ್ಯಕ್ಕೆ ಹಾಜರಾಗದ ಅ ಧಿಕಾರಿ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಗರಸಭಾ ಸದಸ್ಯೆ ರೋಹಿಣಿ ನವೀನ್‌, ಮುಖಂಡರಾದ ರವಿಕುಮಾರ್‌, ವೇದ ಪ್ರಕಾಶ್‌, ಕುಮಾರ್‌, ತಿಮ್ಮಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next