Advertisement

ಡಾ|ಸಿದ್ದಲಿಂಗಯ್ಯ ಜನಮಾನಸದ ಕವಿ: ಎಚ್‌. ಆಂಜನೇಯ

11:03 PM Jun 14, 2021 | Team Udayavani |

ಚಿತ್ರದುರ್ಗ: ಕವಿ ಸಿದ್ದಲಿಂಗಯ್ಯ ರಾಷ್ಟ್ರಕವಿಗಳ ಸಾಲಿಗೆ ಸೇರುವಂಥ ಮೇರುಕವಿಯಾಗಿದ್ದರು ಎಂದು ಮಾಜಿ ಸಚಿವ ಎಚ್‌. ಆಂಜನೇಯ ಹೇಳಿದರು. ನಗರದ ಐಯುಡಿಪಿ ಬಡಾವಣೆಯಲ್ಲಿನ ಆಸ್ಕರ್‌ ಶಾಲೆ ಸಭಾಂಗಣದಲ್ಲಿ ಜಯಣ್ಣ ಸ್ಮಾರಕ ಟ್ರಸ್ಟ್‌ನಿಂದ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಸಿದ್ದಲಿಂಗಯ್ಯನವರು ಈಗಲೂ ಜನಮನದ ಕವಿಯಾಗಿಯೇ ಇದ್ದಾರೆ. ದೈಹಿಕವಾಗಿ ಇಲ್ಲದಿರುವ ಕಾರಣ ಅನೇಕರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದರು. ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ| ಸಿದ್ದಲಿಂಗಯ್ಯ ನಾಡಿನ ಖ್ಯಾತ ಕವಿ. ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ, ಜನಮುಖೀ ಸಾಹಿತಿಯಾಗಿ, ನೊಂದವರ ದನಿಯಾಗಿದ್ದ ಅವರ ಕ್ರಾಂತಿಕಾರಿ ಗೀತೆಗಳು ಶೋಷಿತರ ಹೃದಯಲ್ಲಿ ಸಂಚಲನ ಮೂಡಿಸುವ ಮೂಲಕ ದಲಿತ ಚಳವಳಿ ಯಶಸ್ವಿಯಾಗಲು ಪ್ರೇರೇಪಿಸುತ್ತಿದ್ದವು. ಹಿಂದಿನ ಸರ್ಕಾರದ ಅವ ಧಿಯಲ್ಲಿ ದಲಿತ ಪರ ಕಾನೂನು ರಚಿಸುವಾಗಲೂ ಅವರ ಸಲಹೆ ಪಡೆಯಲಾಗಿತ್ತು. ವಿಧಾನ ಪರಿಷತ್‌ ಸದಸ್ಯರಾದರೂ ಪರಿಷತ್‌ ಸಭೆಗೆ ಹೋಗದಂತೆ ಪೊಲೀಸರು ಒಮ್ಮೆ ತಡೆದಿದ್ದರು.

ಆಗಲೂ ಮೌನವಾಗಿದ್ದರು. ಸದಸ್ಯರೆಂದು ತಿಳಿದ ನಂತರ ಒಳಗೆ ಬಿಟ್ಟಿದ್ದರು. ಅನೇಕ ನೋವು ಅನುಭವಿಸಿದರೂ ಯಾರ ಬಗ್ಗೆಯೂ ಹಗುರವಾಗಿ ಮಾತನಾಡದ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಸ್ಮರಿಸಿದರು.

ಸಾಹಿತಿ ಪ್ರೊ| ಎಚ್‌. ಲಿಂಗಪ್ಪ ಮಾತನಾಡಿ, ಸಿದ್ದಲಿಂಗಯ್ಯ ಸಾಹಿತ್ಯದ ಮೂಲಕ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ವಿಚಾರಗಳ ಬುತ್ತಿಯನ್ನು ನಾಡಿನ ಜನರಿಗೆ ಸಮರ್ಪಿಸಿದ್ದಾರೆ. ಅಂಬೇಡ್ಕರ್‌ ನಂತರ ಹೆಚ್ಚು ಸಾಹಿತ್ಯ ಓದಿ ತಿಳಿದುಕೊಂಡವರಲ್ಲಿ ಅವರೂ ಒಬ್ಬರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಚಿಂತಕ ಜೆ. ಯಾದವ ರೆಡ್ಡಿ, ಡಾ. ಕೆ.ಆರ್‌.ಜೆ ರಾಜಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next