Advertisement

ಕವಿ ಸಿದ œ ಲಿಂಗಯ್ಯರದು ಅಸಾಧಾರಣ ವ್ಯಕ್ತಿತ್ವ

10:04 PM Jun 13, 2021 | Team Udayavani |

ಚಿತ್ರದುರ್ಗ: ದಲಿತರ ನೋವು- ಸಂಕಟಗಳನ್ನು ಅಕ್ಷರವಾಗಿಸಿದ ಸೂಕ್ಷ್ಮ ಸಂವೇದನೆಯ ಕನ್ನಡ ನಾಡಿನ ದಲಿತ ಕವಿ ಡಾ| ಸಿದ್ದಲಿಂಗಯ್ಯ ನಿಧನಕ್ಕೆ ಡಾ| ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಸವಾಲುಗಳ ವಿರುದ್ಧ ಹೋರಾಡುತ್ತ ಪರಿಶ್ರಮ, ಪ್ರತಿಭೆಗಳಿಂದಲೇ ಗೆದ್ದುಬಂದ ಅಸಾಧಾರಣ ವ್ಯಕ್ತಿತ್ವ ಶ್ರೀಯುತರದು. ಅಂಬೇಡ್ಕರ್‌, ಪೆರಿಯಾರ್‌, ಲೋಹಿಯಾರವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದ ಅವರು ತಮ್ಮ ಸುದೀರ್ಘ‌ ಸಾಹಿತ್ಯ ಪಯಣದಲ್ಲಿ ಸತ್ವಪೂರ್ಣ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆಗಳ ಮೂಲಕ ದಲಿತರಲ್ಲಿ ಸ್ವಾಭಿಮಾನದ ಜಾಗೃತಿ ಮೂಡಿಸಿದ್ದರು.

ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಗು ವಿಧಾನಪರಿಷತ್‌ ಸದಸ್ಯರಾಗಿ ಸಾಹಿತ್ಯ ಮತ್ತು ಸಾಮಾಜಿಕ ವಲಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟ ಹೆಗ್ಗಳಿಕೆ ಸಿದ್ದಲಿಂಗಯ್ಯನವರದು.

ಶ್ರೀಯುತರ ಅನುಪಮವಾದ ಕನ್ನಡಪರ ಸೇವೆಯನ್ನು ಗುರುತಿಸಿ ಶ್ರೀಮಠವು 2019ರ ಮುರುಘಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಸ್ಮರಿಸಿರುವ ಮುರುಘಾ ಶರಣರು, ಅವರ ನಿಧನದಿಂದ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ ಎಂದಿದ್ದಾರೆ. ಮಾಜಿ ಸಚಿವ ಆಂಜನೇಯ ಸಂತಾಪ: ಹಿರಿಯ ಸಾಹಿತಿ, ಕವಿ ಸಿದ್ದಲಿಂಗಯ್ಯ ಅವರ ಅಗಲಿಕೆ ನಾಡಿನ ಲಕ್ಷಾಂತರ ಜನರಲ್ಲಿ ನೋವು ತಂದಿದೆ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಅಡ್ಡಿ ಇರದಿದ್ದಲ್ಲಿ ಅಭಿಮಾನಿಗಳೇ ಅವರ ಅಂತ್ಯಸಂಸ್ಕಾರದ ಹೊಣೆ ವಹಿಸಿಕೊಳ್ಳುತ್ತಿದ್ದರು. ಆದರೆ ಸೋಂಕು ಭೀತಿಯ ಜೊತೆಗೆ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸಿದ್ದಲಿಂಗಯ್ಯ ಅವರಿಗೆ ಅಭಿಮಾನಿಗಳು ಗೌರವ ಸಲ್ಲಿಸಲು ಆಗುತ್ತಿಲ್ಲ. ಅವರ ಸಮಾಧಿ ಸ್ಥಳವನ್ನು ಸಾಹಿತ್ಯ, ಹೋರಾಟ, ಚಿಂತನಾ ಸ್ಥಳವನ್ನಾಗಿಸಬೇಕೆಂದು ಒತ್ತಾಯಿಸಿದ್ದಾರೆ.

Advertisement

ಸಂಘ-ಸಂಸ್ಥೆಗಳ ಕಂಬನಿ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ದಶಕಗಳಿಂದ ಲೇಖಕ, ಪ್ರಕಾಶ, ಚಿಂತಕರಾಗಿ ಕನ್ನಡ ಭಾಷೆಯ ಏಳ್ಗೆಗೆ ಶ್ರಮಿಸಿದ ಧಿಧೀಮಂತ ದಲಿತ ಕವಿ, ವಿಧಾನ ಪರಿಷತ್‌ ಮಾಜಿ ಸದಸ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಕಾಲಿಕ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟವೆಂದು ಚಿನ್ಮೂಲಾದ್ರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಸಂತಾಪ ವ್ಯಕ್ತಪಡಿಸಿದೆ. ವೇದಿಕೆ ಅಧ್ಯಕ್ಷ ಕೊರ‌್ಲಕುಂಟೆ ತಿಪ್ಪೇಸ್ವಾಮಿ ಮತ್ತು ಪದಾ ಧಿಕಾರಿಗಳು ಸಿದ್ದಲಿಂಗಯ್ಯನವರ ಆತ್ಮಕ್ಕೆ ಶಾಂತಿದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next