Advertisement

ಸಿಎಂ ಬಿಎಸ್‌ವೈ ಸ್ಥಾನ ಅಬಾಧಿತ

10:54 PM Jun 08, 2021 | Team Udayavani

ಮೊಳಕಾಲ್ಮೂರು: ರಾಜ್ಯದಲ್ಲಿ ಕೊರೊನಾ ಮೊದಲ ಮತ್ತು ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿ ಬಿಜೆಪಿ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಅವರ ಬದಲಾವಣೆ ಅಸಾಧ್ಯ ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದರು.

Advertisement

ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ಪೌರ ಕಾರ್ಮಿಕರು ಹಾಗೂ ಚರ್ಮ ಕುಶಲಕರ್ಮಿಗಳಿಗೆ ಆಹಾರ ಧಾನ್ಯಗಳ ಕಿಟ್‌ ವಿತರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಯಾವುದೇ ಅಂಜಿಕೆಯಿಲ್ಲದೆ ಸಾರ್ವಜನಿಕರೊಂದಿಗೆ ಬೆರೆತು ಕೊರೊನಾ ನಿರ್ವಹಣೆ ಮಾಡುತ್ತಿದ್ದಾರೆ.

ಇತರೆ ರಾಜ್ಯಗಳಂತೆ ಮುಂದಿನ ದಿನಗಳಲ್ಲಿ ರಾಜ್ಯವನ್ನೂ ಕೊರೊನಾ ಮುಕ್ತಗೊಳಿಸಲಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡುವುದು ನಗಣ್ಯವಾಗುತ್ತದೆ. ಸಚಿವ ಯೋಗೇಶ್ವರ ತಮ್ಮ ನೋವು ತೋಡಿಕೊಳ್ಳಲು ದೆಹಲಿಗೆ ಹೋಗಿದ್ದರು. ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿದ್ದಾರೆಂದು ತಿಳಿಸಿದ್ದಾರೆ. ಹಾಗಾಗಿ ಈ ಬಗ್ಗೆ ಇನ್ನು ಮುಂದೆ ಯಾರೂ ಮಾತನಾಡದಿರುವುದೇ ಸೂಕ್ತ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಡಾ| ಪಿ.ಎಂ. ಮಂಜುನಾಥ, ಪಪಂ ಅಧ್ಯಕ್ಷ ಪಿ. ಲಕ್ಷ್ಮಣ ,ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್‌, ಸದಸ್ಯರಾದ ಟಿ.ಟಿ. ರವಿಕುಮಾರ್‌, ಕೆ. ತಿಪ್ಪೇಸ್ವಾಮಿ, ಬಿ.ಎನ್‌. ಮಂಜಣ್ಣ, ಲೀಲಾವತಿ, ಭಾಗ್ಯಮ್ಮ, ಸವಿತಾ, ರೂಪಾ, ಕೆಡಿಪಿ ಸದಸ್ಯರಾದ ಶಾಂತಾರಾಂ ಬಸಾಪತಿ, ಸರ್ವಮಂಗಳ, ತಿಪ್ಪೇಸ್ವಾಮಿ, ಲಕ್ಷ್ಮೀದೇವಿ, ತಹಶೀಲ್ದಾರ್‌ ಟಿ. ಸುರೇಶ್‌ ಕುಮಾರ್‌, ಪಪಂ ಮುಖ್ಯಾಧಿಕಾರಿ ಕಾಂತರಾಜ್‌, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌, ನಗರಾಧ್ಯಕ್ಷ ಕಿರಣ್‌ ಗಾಯಕವಾಡ್‌, ಪ್ರಧಾನ ಕಾರ್ಯದರ್ಶಿ ರಘು ತಿಲಕ್‌, ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿದ್ಧಾರ್ಥ, ಒಬಿಸಿ ಮೋರ್ಚಾ ಉಪಾಧ್ಯಕ್ಷ ಜಿಂದೆ ಅರ್ಜುನ, ಉಪಾಧ್ಯಕ್ಷ ಹರೀಶ್‌ ಪಾಳೇಗಾರ್‌, ಮುಖಂಡರಾದ ಮೋಹನ ಕನಕ, ಪಿ.ಆರ್‌. ಸಿದ್ದಣ್ಣ, ರಮೇಶ್‌ ನಾಯಕ ದಳವಾಯಿ, ಕೆ. ಶಿವಕುಮಾರ್‌ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next