Advertisement

ಪರಿಸರ ಮಾಲಿನ್ಯ ಮನುಕುಲಕ್ಕೆ ಮಾರಕ

10:48 PM Jun 08, 2021 | Team Udayavani |

ಹೊಳಲ್ಕೆರೆ: ಪರಿಸರ ನಿತ್ಯ ಮಾಲಿನ್ಯಕ್ಕೊಳಗಾಗು ತ್ತಿರುವುದು ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ಗಿಡಗಳನ್ನು ನೆಟ್ಟು ಮರಗಳಾಗಿ ಬೆಳೆಸುವುದು ಪ್ರತಿಯೊಬ್ಬರ ಹೊಣೆ ಎಂದು ತಹಶೀಲ್ದಾರ್‌ ರಮೇಶ್‌ ಆಚಾರ್‌ ಹೇಳಿದರು.

Advertisement

ವಿಶ್ವ ಪರಿಸರ ದಿನಾಚಣೆಯ ಅಂಗವಾಗಿ ಪಟ್ಟಣದ ಹಿರೇಕೆರೆ ಗಣಪತಿ ರಸ್ತೆ ಪಕ್ಕದಲ್ಲಿ ಸಾಲು ಮರ ಬೆಳೆಸಲು ಸಸಿ ನೆಟ್ಟು ಅವರು ಮಾತನಾಡಿದರು. ಪರಿಸರ ಕಲುಷಿತಗೊಂಡು ಮನುಕುಲ ಅಪಾಯದಲ್ಲಿದೆ. ಅಕ್ಸಿಜನ್‌ ಪ್ರಮಾಣ ಕಡಿಮೆಯಾಗುವ ಆತಂಕದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಆದ್ದರಿಂದ ಎಲ್ಲರೂ ಪರಿಸರ ರಕ್ಷಣೆಗೆ ಗಮನ ನೀಡಬೇಕೆಂದರು.

ಪುರಸಭೆ ಅಧ್ಯಕ್ಷ ಆರ್‌.ಎ. ಅಶೋಕ್‌ ಮಾತನಾಡಿ, ಪರಿಸರ ಸಂರಕ್ಷಣೆ ಮಾತಲ್ಲಷ್ಟೇ ಇರಬಾರದು. ಕೃತಿಯಲ್ಲಿ ತಂದು ಪರಸರ ರಕ್ಷಣೆ ಮಾಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲಾ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಹಸಿರಿಕರಣಕ್ಕೆ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷ ಕೆ.ಸಿ. ರಮೇಶ್‌ ಮಾತನಾಡಿ, ಇಂದು ಭೂ ತಾಪಮಾನ ಹೆಚ್ಚುತ್ತಿದ್ದು, ಕೈಗಾರಿಕೆಗಳು ಬೆಳೆಯುತ್ತಿವೆ. ವಿಜ್ಞಾನ ಪರಿಸರವನ್ನು ನಿರ್ಲಕ್ಷಿಸುವಂತೆ ಮಾಡಿದೆ ಎಂದರು.

ಪುರಸಭೆ ಹಿರಿಯ ಸದಸ್ಯ ಬಿ.ಎಸ್‌. ರುದ್ರಪ್ಪ ಮಾತನಾಡಿ, ಪ್ರಕೃತಿಯನ್ನು ಉಳಿಸಿ ಬೆಳೆಸಬೇಕು. ಗಿಡಗಳನ್ನು ನೆಟ್ಟು ಅರಣ್ಯಗಳನ್ನು ಬೆಳೆಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಚಿಂತಿಸಬೇಕೆಂದರು.

Advertisement

ಪಿಎಸ್‌ಐ ವಿಶ್ವನಾಥ ಮಾತನಾಡಿದರು. ತಾಲೂಕು ಆರೋಗ್ಯಾಧಿ ಕಾರಿ ಡಾ| ಜಯಸಿಂಹ, ಪುರಸಭೆ ಸದಸ್ಯರಾದ ಡಿ.ಎಸ್‌. ವಿಜಯ್‌, ಎಚ್‌.ಆರ್‌. ನಾಗರತ್ನ ವೇದಮೂರ್ತಿ, ಮಾಜಿ ಸದಸ್ಯ ಇಂದ್ರಪ್ಪ, ವಕೀಲ ಎಸ್‌. ವೇದಮೂರ್ತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗದೀಶ್‌, ಪುರಸಭೆ ಸೂಪರ್‌ ವೈಸರ್‌ ಷಣ್ಮುಖಪ್ಪ, ರೈತ ಸಂಘದ ಕಾರ್ಯದರ್ಶಿ ಅಜಯ್‌, ಪ್ರಗತಿ ಪರ ರೈತ ಸಿದ್ದರಾಮಣ್ಣ ಮತ್ತಿತರರು ಇದ್ದರು. ಪುರಸಭೆಯ 1 ರಿಂದ 3ನೇ ವಾರ್ಡ್‌ ಸದಸ್ಯರು ಸಸಿ ನೆಡುವ ಕಾರ್ಯಕ್ರವನ್ನು ಆಯೋಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next