Advertisement

ಹಸಿರೀಕರಣಕ್ಕೆ ಹೆಚ್ಚು ಒತ್ತು: ತಿಪ್ಪಾರೆಡ್ಡಿ

09:48 PM Jun 06, 2021 | Team Udayavani |

ಚಿತ್ರದುರ್ಗ: ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಎಲ್ಲಾ ರಸ್ತೆಗಳ ಅಕ್ಕ ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ಪಂಚಚಾರ್ಯ ಕಲ್ಯಾಣಮಂಟಪದ ಬಳಿ ಮತ್ತು ರೋಟರಿ ಬಾಲಭವನದ ಮುಂಭಾಗದ ಉದ್ಯಾನವನದಲ್ಲಿ 2021-22ನೇ ಸಾಲಿನ ವನಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚಿತ್ರದುರ್ಗದ ಸುತ್ತ-ಮುತ್ತಲಿನ ಸುಮಾರು 10 ಕಿಮೀ ವ್ಯಾಪ್ತಿಯಲ್ಲಿ ಇರುವ ಖಾಸಗಿ ಮತ್ತು ಸರ್ಕಾರಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುವುದು. ಪರಿಸರ ರಕ್ಷಿಸುವ ಜವಾಬ್ದಾರಿ ನಾಗರಿಕರದು. ಆದರೆ ಬಹುಪಾಲು ಜನರು ಇದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಜೂನ್‌ 5 ರಂದು ಹಲವೆಡೆ ಗಿಡಗಳನ್ನು ನೀಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ಆದರೆ ಇದು ಇನ್ನೂ ಆಚರಣೆಗೆ ಮಾತ್ರ ಸೀಮಿತವಾಗಿದೆ. ಮಾತ್ರವಲ್ಲ, ಪರಿಸರ ಕೇವಲ ಪರಿಸರ ದಿನಾಚರಣೆಗೆ ಮಾತ್ರವೇ ಸೀಮಿತವಾದಂತಿದೆ ಎಂದು ವಿಷಾದಿ ಸಿದರು. ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಅನಿವಾರ್ಯವಾಗಿ ಮರಗಳನ್ನು ಕಡಿಯಲಾಗುತ್ತಿದೆ. ಅದಕ್ಕಾಗಿ ರಸ್ತೆ ಕಾಮಗಾರಿ ಮುಗಿದ ನಂತರ ಎಷ್ಟು ಗಿಡಗಳನ್ನು ಕಡಿದಿದ್ದಾರೋ ಅದಕ್ಕಿಂತ ಎರಡು ಪಟ್ಟು ಗಿಡಗಳನ್ನು ಹಾಕಿಸಲಾಗುತ್ತದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಲ್ಲರೂ ಮನೆಯ ಸುತ್ತಮೂತ್ತಲಿನ ಪ್ರದೇಶದಲ್ಲಿ ಗಿಡಗಳನ್ನು ನೆಡಬೇಕು. ತಮ್ಮ ಮಕ್ಕಳಿಗೆ ಪರಿಸರ ಪಾಠ ಮಾಡಬೇಕು. ಯುವ ಜನತೆಗೆ ಪರಿಸರ ಕಾಳಜಿ ಮೂಡಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿ  ಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಜಿ. ರಾಧಿ ಕಾ, ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ನಗರಸಭೆ ಪೌರಾಯುಕ್ತ ಹನುಮಂತರಾಜು, ವಲಯ ಅರಣ್ಯಾಧಿಕಾರಿ ಸಂದೀಪ್‌ ನಾಯಕ, ಎಎಸ್‌ಎಫ್‌ ಮಂಜುನಾಥ್‌, ಅರಣ್ಯಾಧಿಕಾರಿ ರುದ್ರಮುನಿ, ನಗರಸಭೆ ಇಂಜಿನಿಯರ್‌ ಕಿರಣ್‌, ನೀರು ಸರಬರಾಜು ಇಂಜಿನಿಯರ್‌ ಚೇತನಾ, ನಗರಸಭೆ ಸದಸ್ಯ ಭಾಸ್ಕರ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next