Advertisement

ಕೊರೊನಾ ಲಸಿಕೆ ಪಡೆಯಲು ಜನರ ಹರಸಾಹಸ

10:28 PM May 31, 2021 | Team Udayavani |

ಮೊಳಕಾಲ್ಮೂರು: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೊರೊನಾ ಲಸಿಕಾ ಕೇಂದ್ರದಲ್ಲಿ ನೀಡುವ ಕೊರೊನಾ ಲಸಿಕೆಗಾಗಿ ಜನ ಹರಸಾಹಸ ಪಡುವಂತಾಗಿದೆ.

Advertisement

ಕೊರೊನಾ ಲಸಿಕೆಗಾಗಿ ನೋಂದಾಯಿತರು 2 ನೇ ಡೋಸ್‌ ಪಡೆಯಲು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಬೆಳಗ್ಗೆ 8 ರಿಂದಲೇ ಜನ ಜಮಾಯಿಸಿದ್ದರು. ಕೊರೊನಾ ಲಸಿಕೆ ನೀಡುತ್ತಿರುವ ಲಸಿಕಾ ಕೇಂದ್ರವು  ¨ ‌ ಸಾಮಾಜಿಕ ಅಂತರವಿಲ್ಲದಂತಾಗಿತ್ತು. ಕೊರೊನಾ ಲಸಿಕೆಯ 2 ನೇ ಡೋಸ್‌ ಪಡೆಯಲು 45 ವರ್ಷದ ಮೇಲ್ಪಟ್ಟವರು ಸರದಿ ಸಾಲಲ್ಲಿ ನಿಂತು ನಾ ಮುಂದು ತಾ ಮುಂದು ಎಂಬಂತೆ ಲಸಿಕೆ ಪಡೆಯಲು ಹರಸಾಹಸ ಪಡುವಂತಾಯಿತು.

ಲಸಿಕೆ ನೀಡುವ ಸಿಬ್ಬಂದಿ ಕೆಲ ಕಾರಣಗಳಿಂದ ತಡವಾಗಿ ಬಂದ ಕಾರಣ ಲಸಿಕೆಗೆ ನೋಂದಾಯಿತರು ಅಗತ್ಯ ದಾಖಲೆಗಳೊಂದಿಗೆ 2 ನೇ ಡೋಸ್‌ ಪಡೆಯಲು ಲಸಿಕಾ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಲು ಹರಸಾಹಸ ಪಡುವಂತಾಯಿತು. ಅಂತೂ ಇಂತೂ 2 ನೇ ಡೋಸ್‌ ಲಸಿಕೆ ಪಡೆಯಲು ಬಂದವರು ಲಸಿಕಾ ಕೇಂದ್ರದಲ್ಲಿ ನೋಂದಾಯಿಸಿಕೊಂಡು ಲಸಿಕೆ ಪಡೆದು ನಿಟ್ಟುಸಿರು ಬಿಡುವಂತಾಯಿತು.

ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆ ಪಡೆಯಲು ಸೂಕ್ತ ಸ್ಥಳ ಹಾಗೂ ಸಿಬ್ಬಂದಿ ಕೊರತೆ ನೀಗಿಸಿ ಲಸಿಕೆ ಕಲ್ಪಿಸಲು ಸಂಬಂಧಿ ತ ಅಧಿ ಕಾರಿಗಳು ಗಮನ ಹರಿಸಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next