Advertisement
ಚಿತ್ರದುರ್ಗ: ಕೋವಿಡ್ ಸೋಂಕಿನ ಎರಡನೇ ಅಲೆಯ ವಿಪರೀತ ಆರಂಭವಾಗುತ್ತಲೇ ಜಿಲ್ಲೆಯಲ್ಲಿ ಆಸ್ಪತ್ರೆಗಳು, ವೈದ್ಯರು, ಅಧಿ ಕಾರಿಗಳ ಜತೆಗೆ ಜನಪ್ರತಿನಿ ಧಿಗಳು ಕೂಡ ಸಾಥ್ ನೀಡಿ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದ್ದಾರೆ.
Related Articles
Advertisement
ತಾಲೂಕಿನ ಮರಡಿಹಳ್ಳಿ ಆರೋಗ್ಯ ಕೇಂದ್ರದಲ್ಲಿದ್ದ ಸೋಂಕಿತರು ರೆಮ್‌ಡಿಸಿವರ್ ಅಗತ್ಯದ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದಾಗ ಜಿಲ್ಲಾಸ್ಪತ್ರೆಯಿಂದ ಅಲ್ಲಿಗೆ ಸರಬರಾಜಾಗುವಂತೆ ನೋಡಿಕೊಂಡಿದ್ದರು. ಚಿತ್ರದುರ್ಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ರೋಗಿಯೊಬ್ಬರು ಆಕ್ಸಿಜನ್ ಖಾಲಿಯಾಗಿದೆ ಎಂದಾಗ ಅಲ್ಲಿಗೆ ಸಿಲಿಂಡರ್ ವ್ಯವಸ್ಥೆ ಮಾಡಿದ್ದು ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವಲ್ಲಿ ಅವಿರತ ಶ್ರಮಿಸುತ್ತಿದ್ದಾರೆ.
ಈಗ ಬೆಂಗಳೂರಿನಿಂದಲೂ ದುರ್ಗಕ್ಕೆ ಬರ್ತಾರೆ: ಇಷ್ಟು ದಿನ ಚಿಕಿತ್ಸೆಗಾಗಿ ಚಿತ್ರದುರ್ಗದಿಂದ ಬೆಂಗಳೂರು ಮತ್ತಿತರೆಡೆಗಳಿಗೆ ಹೋಗುವ ಪರಿಪಾಠ ಇತ್ತು. ಆದರೆ ಈಗ ಅಲ್ಲಿಂದ ಇಲ್ಲಿಗೆ ಬೆಡ್ ಹುಡುಕಿಕೊಂಡು ಬರುತ್ತಿದ್ದಾರೆ. ಜೀವನ್ಮರಣದ ಪ್ರಶ್ನೆ ಬಂದಾಗ ಮಾನವೀಯತೆಯಿಂದ ಅವರಿಗೆ ಸ್ಪಂದಿಸಿ ಚಿಕಿತ್ಸೆ ಕೊಡಿಸಿದ್ದೇವೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಇಲ್ಲಿಗೆ ಬರುವ ಬಡ ರೋಗಿಗಳು ಎಲ್ಲಿಗೆ ಹೋಗಬೇಕು, ಯಾರನ್ನು ಮಾತನಾಡಿಸಬೇಕು ಎನ್ನುವ ಸಮಸ್ಯೆಯಿಂದ ಒದ್ದಾಡುತ್ತಿರುತ್ತಾರೆ.
ಅಂಥವರು ನಮ್ಮನ್ನು ಸಂಪರ್ಕಿಸುವುದು ಹೆಚ್ಚು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಬೆಡ್ ಕೊಡಿಸುವುದು, ಇಂಜೆಕ್ಷನ್ ಕೊಡಿಸುವ ಕೆಲಸವನ್ನು ದಿನದ 24 ಗಂಟೆಯೂ ಮಾಡುತ್ತಿದ್ದೇನೆ ಎಂದು ಶಾಸಕರು ತಿಳಿಸಿದರು.