Advertisement

ಸೋಂಕು ಪ್ರಕರಣ ಇಳಿಕೆ ಉತ್ತಮ ಬೆಳವಣಿಗೆ

09:07 PM May 20, 2021 | Team Udayavani |

ಚಿತ್ರದುರ್ಗ: ಇಡೀ ದೇಶ ಇಂದು ಸಂಕಷ್ಟಕ್ಕೆ ಸಿಲುಕಿದ್ದು, ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜಕಲ್ಯಾಣ ಇಲಾಖೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು. ನಗರದ ಪ್ರವಾಸಿಮಂದಿರದ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ದೇಶದಲ್ಲಿ 26 ಸಾವಿರ ವೆಂಟಿಲೇಟರ್‌ಗಳಿದ್ದವು.

Advertisement

ಈಗ 80 ಸಾವಿರಕ್ಕೆ ಹೆಚ್ಚಿಸಲಾಗಿದೆ. ದೇಶಾದ್ಯಂತ ಆಗಿದ್ದ ಆಕ್ಸಿಜನ್‌ ಕೊರತೆ ನೀಗಿಸಲು ಕೇಂದ್ರ ಸರ್ಕಾರ ರೈಲು, ಹಡಗು ಹಾಗೂ ವಿಮಾನಗಳ ಮೂಲಕ ಸರಬರಾಜು ಮಾಡಿದೆ. ಸ್ಥಳೀಯವಾಗಿ ಆಕ್ಸಿಜನ್‌ ಉತ್ಪಾ  ದಿಸಲು ಒತ್ತು ನೀಡಿದ್ದು, ಕರ್ನಾಟಕದಲ್ಲಿ 32 ಹೊಸ ಘಟಕ ಪ್ರಾರಂಭವಾಗಲಿವೆ ಎಂದರು. ಕೋವಿಡ್‌ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಅಲ್ಪಾವ ಧಿಯಲ್ಲೇ ಲಸಿಕೆ ಕಂಡು ಹಿಡಿದು ಈವರೆಗೆ 18.5 ಕೋಟಿ ಜನರಿಗೆ ವಿತರಣೆ ಮಾಡಿದೆ. ಜತೆಗೆ ವಿಶ್ವದ ಇತರೆ ರಾಷ್ಟ್ರಗಳಿಗೂ ಉಚಿತವಾಗಿ ಲಸಿಕೆ ನೀಡಿದ್ದೇವೆ.

ಇದರ ಪರಿಣಾಮ ಸಾಕಷ್ಟು ದೇಶಗಳು ನಾವು ಕೇಳದಿದ್ದರೂ ವೆಂಟಿಲೇಟರ್‌, ಆಮ್ಲಜನಕ ಸೇರಿದಂತೆ ವೈದ್ಯಕೀಯ ಉಪಕರಣ ನೀಡುತ್ತಿವೆ ಎಂದು ಹೇಳಿದರು. ಸಂಕಷ್ಟದ ಸಮಯದಲ್ಲಿ ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ರೈತರಿಗೆ 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪಿಎಂ ಕೇರ್ ಫಂಡ್‌ನಿಂದ 322.5 ಕೋಟಿ ರೂ. ವೆಚ್ಚದಲ್ಲಿ 1.5 ಲಕ್ಷ ಆಕ್ಸಿಕೇರ್‌ ಸಿಸ್ಟಂ ಖರೀ ಸಲಾಗುತ್ತಿದೆ.

ಭಾರತೀಯ ರೈಲ್ವೆ ಕೂಡ 4400 ಕೋವಿಡ್‌ ಕೇಂದ್ರಗಳಲ್ಲಿ 70 ಸಾವಿರ ಐಸೋಲೇಶನ್‌ ಬೆಡ್‌ಗಳ ವ್ಯವಸ್ಥೆ ಮಾಡಿದೆ. ಇದರ ಪ್ರಯೋಜನವನ್ನು ಗುಜರಾತ್‌, ನಾಗಾಲ್ಯಾಂಡ್‌ ರಾಜ್ಯಗಳು ಪಡೆದುಕೊಳ್ಳುತ್ತಿವೆ ಎಂದರು.

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಕರ್ಫ್ಯೂ ವಿಧಿಸಲಾಗಿದೆ. 50 ಸಾವಿರ ದಾಟಿದ್ದ ಪ್ರಕರಣಗಳು ಈಗ 39 ಸಾವಿರಕ್ಕೆ ಇಳಿಕೆಯಾಗಿವೆ. ಪರಿಸ್ಥಿತಿ ಸುಧಾರಿಸುತ್ತಿರುವುದು ಸಮಾಧಾನಕರ ಸಂಗತಿ ಎಂದು ತಿಳಿಸಿದರು.

Advertisement

ಕಳೆದ ವರ್ಷ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ 1970 ಆಕ್ಸಿನೇಟೆಡ್‌ ಬೆಡ್‌, 444 ಐಸಿಯು, 610 ವೆಂಟಿಲೇಟರ್‌ ಸಹಿತ ಐಸಿಯು ಸೌಲಭ್ಯವಿತ್ತು. ಈಗ ಅದನ್ನು ಗಣನೀಯವಾಗಿ ಹೆಚ್ಚಿಸಿದ್ದು, ಪ್ರಸ್ತುತ 24 ಸಾವಿರ ಆಕ್ಸಿನೇಟೆಡ್‌ ಬೆಟ್‌, 1145 ಐಸಿಯು ಬೆಡ್‌, 2059 ವೆಂಟಿಲೇಟರ್‌ ಬೆಡ್‌ ಹಾಗೂ 1248 ಎಚ್‌ಎಫ್‌ಎನ್‌ ಸೌಲಭ್ಯಗಳಿವೆ, ಅದರಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 4700 ರಿಂದ 9405ಕ್ಕೆ ಬೆಡ್‌ ಗಳ ಸಂಖ್ಯೆಯನ್ನು ದ್ವಿಗುಣ ಮಾಡಲಾಗಿದೆ.

ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ ಎಂದು ಶ್ರೀರಾಮುಲು ಮಾಹಿತಿ ನೀಡಿದರು. ಬಿಜೆಪಿ ಕಾರ್ಯಕರ್ತರು ಕೂಡ ಕೊರೊನಾ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯದ 37 ಜಿಲ್ಲೆಗಳಲ್ಲಿ 250 ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.

ಈ ಮೂಲಕ 2.48 ಲಕ್ಷ ಮಾಸ್ಕ್ ವಿತರಣೆ, 78 ಸಾವಿರ ಆಹಾರದ ಪೊಟ್ಟಣ ವಿತರಣೆ, 3300 ಸೋಂಕಿತರಿಗೆ ಆಕ್ಸಿಜನ್‌ ನೆರವು, 4325 ಮಂದಿಗೆ ಆಸ್ಪತ್ರೆಗಳ ಸಹಕಾರದಲ್ಲಿ ರೆಮ್‌ ಡಿಸಿವಿರ್‌ ಇಂಜೆಕ್ಷನ್‌, 1927 ವೆಂಟಿಲೇಟರ್‌ ನೆರವು, 34 ಆಂಬ್ಯುಲೆನ್ಸ್‌, 76 ರಕ್ತದಾನ ಶಿಬಿರ ಹಾಗೂ 23 ಐಸೋಲೇಶನ್‌ ಕೇಂದ್ರಗಳನ್ನು ತೆರೆದು ಕೆಲಸ ಮಾಡುತ್ತಿದ್ದಾರೆ. 35 ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಎ. ನಾರಾಯಣಸ್ವಾಮಿ, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next