Advertisement

50 ಆಕ್ಸಿಜನ್‌ ಬೆಡ್‌ ಸೌಲಭ್ಯಕ್ಕೆ ಕೋಟಿ ರೂ. ನೀಡುವೆ

10:45 PM May 17, 2021 | Team Udayavani |

ಹೊಳಲ್ಕೆರೆ: ಕೋವಿಡ್‌ ಆಸ್ಪತ್ರೆಯಲ್ಲಿ 50 ಅಕ್ಸಿಜನ್‌ ಬೆಡ್‌ ಸೌಲಭ್ಯ ಕಲ್ಪಿಸಲು ಒಂದು ಕೋಟಿ ರೂ. ಅನುದಾನ ಕೊಡಲು ಸಿದ್ಧ ಎಂದಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ, ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಸಂದೇಶದಲ್ಲಿ ಹುರುಳಿಲ್ಲ ಎಂದು ತಿಳಿಸಿದ್ದಾರೆ.

Advertisement

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಕೋವಿಡ್‌ ಆಸ್ಪತ್ರೆ ಉದ್ಘಾಟನೆ ಸಂದರ್ಭದಲ್ಲಿ ಅಧಿಕಾರಿಗಳಂದಿಗೆ 20 ನಿಮಿಷ ಚರ್ಚೆ ನಡೆಸಿದ್ದೇನೆ. 30 ಕೋಟಿ ರೂ. ವೆಚ್ಚದಲ್ಲಿ ಹೊಳಲ್ಕೆರೆಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು, ಅತ್ಯಾಧುನಿಕ ಸೌಲಭ್ಯ ಕಲ್ಪಿಸಿ ಮಾದರಿ ಆಸ್ಪತ್ರೆ ಎನ್ನುವ ಹೆಗ್ಗಳಿಗೆ ಪಡೆದುಕೊಳ್ಳಬೇಕೆಂದು ಶ್ರಮಿಸುತ್ತಿದ್ದೇನೆ. ನಮ್ಮ ತಾಲೂಕಿನ ಜನರಿಗೆ ಹೆಚ್ಚಿನ ಆರೋಗ್ಯ ಸೇವೆ ಸಿಗಬೇಕು ಎಂಬುದು ಮುಖ್ಯ ಉದ್ದೇಶ ಎಂದಿದ್ದಾರೆ.

ಕೋವಿಡ್‌ ಎರಡನೇ ಅಲೆಯಲ್ಲಿ 50 ಬೆಡ್‌ ಗಳ ಆಸ್ಪತ್ರೆ ನಿರ್ಮಾಣ ಮಾಡಿ ಸೌಲಭ್ಯ ಕಲ್ಪಿಸಿದರೆ ಮೂರನೇ ಅಲೆಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ. ಈ ಸಂಬಂಧ ಅ ಧಿಕಾರಿಗಳ ಜತೆಗೆ ಸುಮಾರು 20 ನಿಮಿಷ ಸಮಾಲೋಚಿಸಿದ್ದೇನೆ. ಅದರಲ್ಲಿ ಕೇವಲ 20 ಸೆಕೆಂಡ್‌ ವಿಡಿಯೋ ವೈರಲ್‌ ಮಾಡಿ ನಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗಿದೆ.

ಈ ಮೂಲಕ ಅಭಿವೃದ್ಧಿ ಕೆಲಸಗಳನ್ನು ಹತ್ತಿಕ್ಕುವ ಹುನ್ನಾರ ನಡೆದಿದೆ. ಅ ಧಿಕಾರಿಗಳಿಗೆ ಜತೆ ಸಮಾಲೋಚನೆ ಸಂದರ್ಭದಲ್ಲಿ ಕೇವಲ 10 ಬೆಡ್‌ ಸಾಲುವುದಿಲ್ಲ, 50 ಬೆಡ್‌ ಕೊಡಿ ಎಂದು ಖಾರವಾಗಿ ಹೇಳಿದ್ದು ನಿಜ. ನಮ್ಮ ತಾಲೂಕಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಿ ಎಂದು ಈ ರೀತಿ ಮಾತನಾಡಿದ್ದೇನೆ. ಇದಕ್ಕೂ ಜನರಿಗೂ ಸಂಬಂಧವಿಲ್ಲ. ಸುಳ್ಳು ಪ್ರಚಾರದಲ್ಲಿ ತೊಡಗಿಸಿಕೊಂಡವರಿಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡುತ್ತೇನೆ ಎಂದು ಶಾಸಕ ಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next