Advertisement

ಬೆಡ್‌ ಸಿಗದೇ ವೃದ್ಧ ಸಾವು; ಆರೋಪದ ವಿಡಿಯೋ ವೈರಲ್‌

09:49 PM May 14, 2021 | Team Udayavani |

ಹಿರಿಯೂರು: ಅತಿಯಾದ ಕೆಮ್ಮ, ಜ್ವರದಿಂದ ಬಳಲುತ್ತಿದ್ದ ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದ ರಾಮಪ್ಪ (75)ಎಂಬುವವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್‌ ಮತ್ತು ಆಕ್ಸಿಜನ್‌ ಸಿಗದೇ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದು, ವೃದ್ಧನ ಮೊಮ್ಮಗಳು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್‌ ಆಗಿದೆ. “ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯಗಳಿಲ್ಲ. ಬಡವರಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ತಾರತಮ್ಯ ನೀತಿ ಅನುಸರಿಸುತ್ತಾರೆ.

Advertisement

ಇನ್ನು ಬಡವರ ಎಷ್ಟು ಜನರನ್ನು ಸಾಯಿಸಬೇಕೆಂದಿದ್ದಿರಿ’ ಎಂದು ಶವದ ಬಳಿ ನಿಂತು ಆಕ್ರೋಶದ ಮಾತುಗಳನ್ನಾಡಿ ವಿಡಿಯೂà ಮಾಡಿ ನೋವು ತೋಡಿಕೊಂಡಿದ್ದಾರೆ. “ಸಕಾಲದಲ್ಲಿ ಯಾರೋಬ್ಬರು ಸಹಾಯ ಮಾಡಲಿಲ್ಲ. ಇಲ್ಲಿ ಬೆಡ್‌ ಇಲ್ಲ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅನ್ನುತ್ತಾರೆ. ಜನಪ್ರತಿನಿಧಿಗಳಿಗೆ, ಆಸ್ಪತ್ರೆಯವರಿಗೆ ಫೋನ್‌ ಮಾಡಿದರೆ ಯಾರು ಸ್ಪಂದಿಸಲಿಲ್ಲ. ಆಕ್ಸಿಜನ್‌ ನೀಡಿ ಎಂದರೆ ಅರ್ಧ ಗಂಟೆ ಮಾತ್ರ ನೀಡುತ್ತೇವೆ. ಬೆಳಗಿನ ಜಾವದ ವರೆಗೆ ನೀಡಲು ಆಗುವುದಿಲ್ಲ ಎಂಬ ಉಡಾಫೆ ಮಾತಗಳಾಡುತ್ತಾರೆ. ಇಲ್ಲಿ ಸರಿಯಾದ ಸೌಲಭ್ಯಗಳಿಲ್ಲದೆ ಸಾಯುವಂತಹ ಸ್ಥಿತಿ ಬಂದಿದೆ’ ಎಂದು ಆರೋಪ ಮಾಡಿದ್ದಾರೆ.

ತಾಲೂಕು ವೈದ್ಯಾ ಧಿಕಾರಿ ಡಾ| ವೆಂಕಟೇಶ್‌ ಪ್ರತಿಕ್ರಿಯಿಸಿ, “ನಮ್ಮಲ್ಲಿ 209 ಕೋವಿಡ್‌ ಕೇಸ್‌ಗಳಿದ್ದು, ತಾಲೂಕಿನ 4 ಕೋವಿಡ್‌ ಸೆಂಟರ್‌ ಗಳಾದ ದೇವರಕೊಟ್ಟ, ಧರ್ಮಪುರ, ಮರಡಿಹಳ್ಳಿ ಮತ್ತು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ 100 ಬೆಡ್‌ಗಳು ಮಾತ್ರ ಇವೆ. ಎಲ್ಲವೂ ಭರ್ತಿಯಾಗಿವೆ. ಉಳಿದಂತ ರೋಗಿಗಗಳಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ವೃದ್ಧನಿಗೆ ಬೆಡ್‌ ಇಲ್ಲ ಎಂದರೂ ಕೊಠಡಿಯಲ್ಲಿ ಚಿಕಿತ್ಸೆ ನೀಡಿ ಆಕ್ಸಿಜನ್‌ ನೀಡಿದ್ದಾರೆ.

ವೃದ್ಧರ ದೇಹ ಸ್ಥಿತಿಮೀತಿ ಮೀರಿ ಹೋಗಿರುವುದನ್ನು ಕಂಡು ಆಕ್ಸಿಜನ್‌ ತೆಗೆದಿದ್ದಾರೆ. ತುರ್ತು ಸೇವೆಗೆ ತಾಲೂಕಿನಲ್ಲಿ ಆಕ್ಸಿಜನ್‌ ಕೊರತೆ ಇಲ್ಲ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next