Advertisement

ದೂರು ಸ್ವೀಕರಿಸಿ ಎಫ್‌ಐಆರ್‌ ದಾಖಲಿಸಿ

04:08 PM Jan 28, 2021 | Team Udayavani |

ಚಿತ್ರದುರ್ಗ: ಅಟ್ರಾಸಿಟಿಗೊಳಗಾಗಿ ಪೊಲೀಸ್‌ ಠಾಣೆಗೆ ಬರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ನೀಡುವ ದೂರನ್ನು ಸ್ವೀಕರಿಸಿ ಎಫ್‌ಐಆರ್‌ ದಾಖಲಿಸಿ ತಕ್ಷಣವೇ ಆರೋಪಿಯನ್ನು ಬಂ ಧಿಸಬೇಕು ವಿನಾಕಾರಣ ಕಾಲಹರಣ ಮಾಡಬಾರದು ಎಂದು ಉಪ ವಿಭಾಗಾಧಿ ಕಾರಿ ಡಾ.ನಾಗರಾಜ್‌ ಪೊಲೀಸರಿಗೆ ಸೂಚನೆ ನೀಡಿದರು.

Advertisement

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ 2020-21 ನೇ ಸಾಲಿನ ಮೂರನೇ ತ್ತೈಮಾಸಿಕ ಉಪವಿಭಾಗೀಯ ಮಟ್ಟದ ಎಸ್ಸಿ, ಎಸ್ಟಿ. ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಗೆ ಗೈರು ಹಾಜರಾಗಿದ್ದ ಚಳ್ಳಕೆರೆ ಡಿವೈಎಸ್ಪಿಗೆ ನೋಟಿಸ್‌ ನೀಡುವಂತೆ ಸಭೆಗೆ ಸೂಚಿಸಿ ಮುಂದಿನ ತಿಂಗಳು ನಡೆಯುವ ಸಭೆಗೆ ವಿವಿಧ ಇಲಾಖೆಯ ಕಮಿಟಿಗೆ ನೇಮಕವಾಗಿರುವ ಅ ಧಿಕಾರಿಗಳು ಪಕ್ಕ ಮಾಹಿತಿಯೊಂದಿಗೆ ಬರಬೇಕು. ಅ ಧಿಕಾರಿಗಳ ಪರವಾಗಿ ಬೇರೆಯವರು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಜಾತಿ ನಿಂದನೆಗೊಳಗಾದ ಎಸ್ಸಿ, ಎಸ್ಟಿ ಗಳಿಗೆ ಪರಿಹಾರ ನೀಡುವುದೇ ಮುಖ್ಯವಲ್ಲ. ಎಷ್ಟು ಜನಕ್ಕೆ ಶಿಕ್ಷೆ ವಿಧಿ ಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ನ್ಯಾಯ ಕೊಡಿಸಿದ್ದೇವೆ ಎನ್ನುವುದನ್ನು ಮನದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಅಧಿ ಕಾರಿಗಳಿಗೆ ತಾಕೀತು
ಮಾಡಿದರು.
ಪ್ರಾ

ಥಮಿಕವಾಗಿ ಕೇಸು ದಾಖಲಿಸಿ ಖುದ್ದು ಡಿವೈಎಸ್ಪಿಗಳು 24 ಗಂಟೆಯೊಳಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ
ಸಲ್ಲಿಸಬೇಕು ಎಂದರು.ನ್ಯಾಯವಾದಿ ಹಾಗೂ ದೌರ್ಜನ್ಯ ತಡೆ ಸಮಿತಿ ಸದಸ್ಯ ಡಿ.ವೆಂಕಟೇಶ್‌ ಮಾತನಾಡಿ, ಜಾತಿ ನಿಂದನೆ ಮಾಡಿದವರಿಗೆ ಶಿಕ್ಷೆಯಾಗಿರುವ ಇತಿಹಾಸವೇ ಇಲ್ಲ. ಸ್ಪಾಟ್‌ ಮಹಜರ್‌ಗೆ ಹೋದ ಪೊಲೀಸರು ಹತ್ತು ದಿನ ದೂಡುತ್ತಾರೆ. ಅಷ್ಟರಲ್ಲಿ ಆರೋಪಿ ಮತ್ತು ದೂರು ನೀಡಿದವರು ರಾಜಿಯಾಗಿರುತ್ತಾರೆ. ಒಂದರ್ಥದಲ್ಲಿ ಇದಕ್ಕೆ ಪೊಲೀಸರ ಕುಮ್ಮಕ್ಕು ಇದೆ. ಆರೋಪಿಯನ್ನು ಬಂಧಿಸುವುದಿಲ್ಲ.
ಸಮಾಜ ಕಲ್ಯಾಣ ಇಲಾಖೆಯವರು ಪರಿಹಾರ ಚೆಕ್‌ ನೀಡಿ ಸುಮ್ಮನಾಗುತ್ತಾರೆ. ನಿಜವಾಗಿಯೂ ದೌರ್ಜನ್ಯಕ್ಕೊಳಗಾದ ಎಸ್ಸಿ, ಎಸ್ಟಿಗಳಿಗೆ ನ್ಯಾಯ ಸಿಗುತ್ತಿಲ್ಲ ಎಂದು ದೂರಿದರು.

ಚಿತ್ರದುರ್ಗ ತಾಲೂಕಿನಲ್ಲಿ 2020 ರಲ್ಲಿ 15 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಹತ್ತಕ್ಕೆ ದೋಷಾರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪರಿಹಾರಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಕಳಿಸಿದ್ದೇವೆಂದು ಸಹಾಯಕ ಸಬ್‌ಇನ್ಸ್‌ ಪೆಕ್ಟರ್‌ ಸಭೆಗೆ ಮಾಹಿತಿ ನೀಡಿದಾಗ ಚಿತ್ರದುರ್ಗ ತಾಲೂಕಿನಲ್ಲಿ ಎಸ್ಸಿ, ಎಸ್ಟಿ.ಗಳ ಮೇಲೆ ದೌರ್ಜನ್ಯ ಹೆಚ್ಚಲು ಕಾರಣವೇನು ಎಂದು ಪ್ರಶ್ನಿಸಿದ ಉಪವಿಭಾಗಾ ಧಿಕಾರಿ ದೂರು ಸ್ವೀಕರಿಸಲು ಪೊಲೀಸರು ಮೀನಮೇಷ ಎಣಿಸಿದರೆ ಸಂಬಂಧಪಟ್ಟ ಇಲಾಖೆಯವರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌.ನರಸಿಂಹರಾಜ ಮಾತನಾಡಿ, ದೌರ್ಜನ್ಯಕ್ಕೊಳಗಾದವರಿಗೆ ಪರಿಹಾರ ನೀಡುವುದಕ್ಕಿಂತಲೂ ಮಿಗಿಲಾಗಿ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗುವ ಎಷ್ಟು ಮಂದಿಯನ್ನು ಶಿಕ್ಷೆಗೊಳಪಡಿಸಿ ನ್ಯಾಯ ಕೊಡಿಸಿದ್ದೀರಿ ಎನ್ನುವುದು
ಮುಖ್ಯ. ಕಾನೂನಿಗಿಂತ ದೊಡ್ಡದು ಮಾನವೀಯತೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ಅ ಧಿಕಾರಿಗಳಿಗೆ ಸೂಚಿಸಿದರು.

Advertisement

ಸಮಾಜ ಕಲ್ಯಾಣಾಧಿ ಕಾರಿ ಪರಮೇಶ್ವರಪ್ಪ, ಹಿರಿಯೂರು ತಹಶೀಲ್ದಾರ್‌ ಸೇರಿದಂತೆ ವಿವಿ ಇಲಾಖೆ ಅಧಿಕಾರಿಗಳಿದ್ದರು.

ಓದಿ :ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next