ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿನೇಟೆಡ್ ಬೆಡ್ ಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಿ. ಇದಕ್ಕೆ ಬೇಕಾದ ಎಲ್ಲಾ ಅನುಮತಿಯನ್ನೂ ನಾನು ಕೊಡಿಸುತ್ತೇನೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ಕೋವಿಡ್‌ನಿಂದ ಗುಣಮುಖರಾಗಿ ಬಂದಿರುವ ಶಾಸಕರು ಮಂಗಳವಾರ ನಗರದ ಪ್ರವಾಸಿಮಂದಿರದ ಆವರಣದಲ್ಲಿ ಕರೆದಿದ್ದ ಆರೋಗ್ಯ, ಶಿಕ್ಷಣ ಇಲಾಖೆ ಅ ಧಿಕಾರಿಗಳ ಸಭೆಯಲ್ಲಿ ಕೋವಿಡ್ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.
ಆರೋಗ್ಯ ಇಲಾಖೆ ಅ ಧಿಕಾರಿಗಳು ಈ ಸಂದರ್ಭದಲ್ಲಿ ಮೈಮರೆಯದೆ ಮುಂದಿನ ಒಂದೆರಡು ತಿಂಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜನ ಕೋವಿಡ್ 19 ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾರೆ ಎಂದು ಎಚ್ಚರಿಸಿದರು. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 175 ಆಮ್ಲಜನಕ ಸೌಲಭ್ಯ ಇರುವ ಬೆಡ್‌ಗಳಿದ್ದು, ಎಲ್ಲವೂ ಭರ್ತಿಯಾಗಿವೆ. 10 ವೆಂಟಿಲೇಟರ್ ಇರುವ ಬೆಡ್ ಹಾಗೂ 20 ಐಸಿಯು ಬೆಡ್‌ಗಳಿವೆ. ತಾಲೂಕುಗಳಲ್ಲಿ ಕೊರೊನಾ ತಪಾಸಣೆ ಮಾಡಿಸಿಕೊಂಡವರು ನೇರವಾಗಿ ಜಿಲ್ಲಾಸ್ಪತ್ರೆಗೆ ಬರುತ್ತಿರುವುದರಿಂದ ಇಲ್ಲಿ ಒತ್ತಡ ಹೆಚ್ಚಾಗಿದೆ ಎಂದು ಡಿಎಚ್‌ಒ ಡಾ| ಪಾಲಾಕ್ಷ ಮಾಹಿತಿ ನೀಡಿದರು.
ಆಮ್ಲಜನಕ ಕಂಟೇನರ್‌ಗೆ ಚಿಂತನೆ: ಆಮ್ಲಜನಕ ಪೂರೈಕೆ ಮಾಡುವ ಜಂಬೂ ಸಿಲಿಂಡರ್‌ಗಳ ಕೊರತೆ ಉಂಟಾಗಿರುವುದರಿಂದ ಕಂಟೇನರ್‌ಗಳನ್ನು ಖರೀದಿಸಲು ಜಿಲ್ಲಾಡಳಿತ ಮುಂದಾಗಿದೆ. ಜಂಬೂ ಸಿಲಿಂಡರ್‌ಗಳು ಎಲ್ಲಿಯೂ ಲಭ್ಯವಾಗುತ್ತಿಲ್ಲ. ಪುಣೆಯಲ್ಲಿ ಇದಕ್ಕೆ ಪರ್ಯಾಯವಾಗಿ ಕಂಟೇನರ್ ತಯಾರಿಸಲಾಗುತ್ತಿದೆ. ಒಂದು ಕಂಟೇನರ್ 20 ಜಂಬೂ ಸಿಲಿಂಡರ್‌ಗೆ ಸಮ. ಪ್ರತಿ ತಾಲ್ಲೂಕು ಆಸ್ಪತ್ರೆಗೆ ಒಂದು ಕಂಟೇನರ್ ನೀಡುವ ಬಗ್ಗೆ ಜಿಲ್ಲಾಕಾರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ತಿಳಿಸಿದರು. ಪ್ರತಿ ತಾಲೂಕಿಗೆ 40 ಲೀಟರ್ ಸಾಮರ್ಥ್ಯದ 12 ಜಂಬೂ ಸಿಲಿಂಡರ್ ಒದಗಿಸಲಾಗಿದೆ. ಪ್ರತಿ ಸಿಲಿಂಡರ್‌ನಲ್ಲಿ ನಿತ್ಯ 10 ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆಮ್ಲಜನಕ ಪೂರೈಕೆಗೆ ಸಿದ್ಧತೆ ನಡೆಯುತ್ತಿದೆ ಎಂದರು.
ನಿಮ್ಮದು ಟೆಕ್ನಿಕಲ್, ನನ್ನದು ಪ್ರಾಕ್ಟಿಕಲ್: ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾಕಷ್ಟು ಜನ ಸಾವು ನೋವು ಅನುಭವಿಸುತ್ತಿದ್ದಾರೆ. ಆದರೆ, ಆರೋಗ್ಯ ಇಲಾಖೆ ಅ ಕಾರಿಗಳು ನೀಡುತ್ತಿರುವ ಮಾಹಿತಿ ಮಾತ್ರ ಇಲ್ಲಿ ಏನೂ ಆಗಿಯೇ ಇಲ್ಲ ಎಂಬಂತೆ ಅಂಕಿ ಅಂಶ ನೀಡುತ್ತಿದೆ. ನಿಮ್ಮದು ಟೆಕ್ನಿಕಲ್ ಆಗಿ ಸರಿಯಾಗಿರಬಹುದು, ನನ್ನದು ಪ್ರಾಕ್ಟಿಕಲ್ ಆಗಿ ಸರಿಯಾಗಿದೆ. ಚಾಮರಾಜನಗರ ಘಟನೆಯ ನಂತರವಾದರೂ ಎಚ್ಚೆತ್ತು ಸರಿಯಾಗಿ ಕೆಲಸ ಮಾಡಿ ಎಂದು ಶಾಸಕರು ಸೂಚಿಸಿದರು. ರೆಮ್‌ಡಿಸಿವಿರ್ ಚುಚ್ಚುಮದ್ದು ವಿತರಣೆಯಲ್ಲಿ ತೊಂದರೆ ಉಂಟಾಗುತ್ತಿದೆ. ಸೂಚನೆ ನೀಡಿದ ಬಳಿಕ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೆಮ್‌ಡಿಸಿವಿರ್ ನೀಡಲಾಗಿದೆ. ಚಿತ್ರದುರ್ಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಮ್ಲಜಕದ ಕೊರತೆ ಉಂಟಾಗಿತ್ತು. ಐದು ಸಿಲಿಂಡರ್ ವ್ಯವಸ್ಥೆ ಮಾಡಿದ್ದೇನೆ. ಎಚ್ಚರ ತಪ್ಪಿದರೆ ಅಪಾಯ ಎದುರಾಗುತ್ತದೆ, ಜಾಗƒತೆಯಿಂದ ಕೆಲಸ ಮಾಡಿ ಎಂದರು.
ಶುಶ್ರೂಷಕರ ನೇಮಕಾತಿಗೂ ಲಂಚ: ಕಳೆದ ವರ್ಷ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಗುತ್ತಿಗೆ ಆಧಾರದಲ್ಲಿ ಶುಶ್ರೂಷಕರನ್ನು ನೇಮಕ ಮಾಡಿಕೊಳ್ಳುವಾಗ ಅಕ್ರಮ ನಡೆದಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಪ್ರಸ್ತಾಪಿಸಿದರು. ನೇಮಕ ಮಾಡಿಕೊಂಡವರಿಗೆ 25 ಸಾವಿರ ರೂ. ವೇತನ ನೀಡುವುದಾಗಿ ಹೇಳಿ 11 ಸಾವಿರ ಮಾತ್ರ ನೀಡಲಾಗಿದೆ. ಈ ಕಾರಣಕ್ಕೆ ಒಬ್ಬ ವರ್ಗಾವಣೆಯಾಗಿದ್ದಾನೆ. ಕಳೆದ ವರ್ಷ ಕೆಲಸ ಮಾಡಿದವರು, ಈಗ ಮತ್ತೆ ಕೆಲಸ ಕೇಳಿಕೊಂಡು ಬಂದಾಗ ನಿರಾಕರಿಸದೇ ತೆಗೆದುಕೊಳ್ಳಿ, ಕಷ್ಟದ ಸಮಯದಲ್ಲಿ ಕೆಲಸ ಮಾಡಿವರಿಗೆ ಕೆಲಸ ಕೊಟ್ಟು ಮಾನವೀಯತೆ ಮೆರೆಯಿರಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜಪ್ಪ ಅವರಿಗೆ ಸೂಚಿಸಿದರು.
ಜೈನ ಸಮಾಜದ ಕೇರ್ ಸೆಂಟರ್: ಕಡಿಮೆ ರೋಗ ಲಕ್ಷಣಗಳನ್ನು ಹೊಂದಿದ ಸೋಂಕಿತರನ್ನು ಉಪಚರಿಸಲು ಜೈನ ಸಮಾಜ ಕೋವಿಡ್ ಕೇರ್ ಸೆಂಟರ್ ತೆರೆಯಲು ಮುಂದಾಗಿದೆ. ಇದಕ್ಕೆ ಅಗತ್ಯ ಅನುಮತಿ ನೀಡಿ ವೈದ್ಯರು, ಶುಶ್ರೂಷಕರನ್ನು ಒದಗಿಸಿ. ಇದರ ವೆಚ್ಚವನ್ನು ಸಮಾಜ ಭರಿಸಲಿದೆ ಎಂದು ಶಾಸಕರು ಸೂಚಿಸಿದರು. ಜೈನ ಸಮುದಾಯದ ಅನೇಕರು ಚಿಕ್ಕ ಮನೆಗಳನ್ನು ಹೊಂದಿದ್ದಾರೆ. ಸೋಂಕು ಕಾಣಿಸಿಕೊಂಡರೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಕಷ್ಟ ಸಾಧ್ಯ. ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಬಹುತೇಕ ಮನೆಗಳಲ್ಲಿ ಇಲ್ಲ. ಹೀಗಾಗಿ ಜೈನ ಸಮಾಜದ ಸೋಂಕಿತರಿಗೆ ಪ್ರತ್ಯೇಕವಾಗಿ ಆರೈಕೆ ಕೇಂದ್ರ ತೆರೆಯಲು ಅನುಮತಿ ಕೋರಿ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಿದ್ದಾರೆ. ಅವರಿಗೆ ಕೂಡಲೇ ಸ್ಪಂದಿಸಿ ಎಂದು ಹೇಳಿದರು. ಸಭೆಯಲ್ಲಿ ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ತಾಲೂಕು ಆರೋಗ್ಯಾ ಧಿಕಾರಿ ಡಾ| ಗಿರೀಶ್, ಡಿಡಿಪಿಐ ರವಿಶಂಕರ ರೆಡ್ಡಿ ಇದ್ದರು.