Advertisement

ಜಮುರಾ ವಿವಿ ಸ್ಥಾಪನೆ ಉತ್ತಮ ಬೆಳವಣಿಗೆ

09:58 PM May 05, 2021 | Team Udayavani |

ಚಿತ್ರದುರ್ಗ: ಬರದನಾಡು ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜಿನೊಂದಿಗೆ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾರಾಜೇಂದ್ರ ವಿದ್ಯಾಪೀಠದ ಅಡಿಯಲ್ಲಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಆಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು.

Advertisement

ಅವರ ಇಚ್ಛೆಯನ್ನು ನೆರವೇರಿಸಲೆಂಬಂತೆ 20 ವರ್ಷಗಳ ಹಿಂದೆ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಆರಂಭಿಸಲಾಯಿತು. ಬಸವೇಶ್ವರ ಆಸ್ಪತ್ರೆ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದು, ಕೊರೊನಾ ಸಂಕಷ್ಟದಲ್ಲಿರುವ ಜಿಲ್ಲೆಯ ಜನತೆಗೆ ಸೂಕ್ತವಾಗಿ ಸ್ಪಂದಿಸುತ್ತಿದೆ. ಕಳೆದ ವರ್ಷ ಪ್ರಥಮ ಅಲೆ ಬಂದಾಗ 80 ರೋಗಿಗಳಿಗೆ ಈಗ 120 ರೋಗಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಹೆಚ್ಚಿನ ಅಗತ್ಯತೆ ಕಂಡುಬಂದಲ್ಲಿ ಹೋಟೆಲ್‌ ಅಥವಾ ಕಲ್ಯಾಣಮಂಟಪವನ್ನು ಬಾಡಿಗೆ ಪಡೆದು ಈ ಭಾಗದ ಜನರಿಗೆ ಸ್ಪಂದಿಸಲಾಗುವುದು ಎಂದರು.

ವಿದ್ಯಾಪೀಠವು ಒಂದು ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸಬೇಕು ಎನ್ನವುದು ಶ್ರೀಮಠದ ಮಹತ್ವಾಕಾಂಕ್ಷೆ. ಸರ್ಕಾರದಿಂದ ಮೇಲ್ಮನೆ ಮತ್ತು ಕೆಳಮನೆ ಎರಡೂ ಸದನಗಳಲ್ಲಿ ಮಂಡನೆಯಾಗಿ ಮುಂದೆ ಅದು ರಾಜ್ಯಪಾಲರ ಅನುಮೋದನೆಯೊಂದಿಗೆ ಕರ್ನಾಟಕ ರಾಜ್ಯಪತ್ರದಲ್ಲಿ ಅ ಧಿಕೃತವಾಗಿ ಪ್ರಕಟಣೆಯಾಗಿರುತ್ತದೆ ಎಂದು ಸಂತಸ ವ್ಯಕ್ತಪಡಿಸಿ ಸಭೆಯಲ್ಲಿ ರಾಜ್ಯಪಾಲರನ್ನು ಅಭಿನಂದಿಸಲಾಯಿತು. ಡಾ| ಶಿವಮೂರ್ತಿ ಮುರುಘಾ ಶರಣರ ಹೆಸರನ್ನು ಜಮುರಾ ವಿಶ್ವವಿದ್ಯಾಲಯದ ಕುಲಾ  ಧಿಪತಿ ಸ್ಥಾನಕ್ಕೆ ಆಡಳಿತ ಮಂಡಳಿ ಸದಸ್ಯ ಬಿ.ಎಸ್‌. ಷಣ್ಮುಖಪ್ಪನವರು ಸೂಚಿಸಿದರು.

ಇದನ್ನು ಸಭೆ ಅನುಮೋದಿಸಿತು. ಕುಲಪತಿ, ಕುಲಸಚಿವ ಇತ್ಯಾದಿ ಅ ಧಿಕಾರಿಗಳನ್ನು ನೇಮಿಸುವ ಅ ಧಿಕಾರವನ್ನು ಕುಲಾ  ಪತಿಗಳಿಗೆ ನೀಡಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಕೆ.ವಿ. ಪ್ರಭಾಕರ್‌ ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು. ಸಭೆಯಲ್ಲಿ ಎನ್‌. ಲಿಂಗಮೂರ್ತಿ, ಪಟೇಲ್‌ ಶಿವಕುಮಾರ್‌, ಹರ್ತಿಕೋಟೆ ವೀರೇಂದ್ರಸಿಂಹ, ಬಸವರಾಜ ಪಾಟೀಲ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಉಮೇಶ್‌ ಪತ್ತಾರ ಪ್ರಾರ್ಥಿಸಿದರು. ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next