ಚಿತ್ರದುರ್ಗ: ಅಧಿಕಾರ ಇಲ್ಲದಿದ್ದಾಗ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಪೌರತ್ವದ ವಿಚಾರದಲ್ಲಿ ದಾಂಧಲೆ ಎಬ್ಬಿಸಿತ್ತು. ಈಗ ರೈತರ ಹೆಸರಿನಲ್ಲಿ ಖಲಿಸ್ತಾನಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ದೂರಿದರು.
ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ದೆಹಲಿಯ ಕೆಂಪುಕೋಟೆಗೆ ನುಗ್ಗಿ ದಾಂಧಲೆ ನಡೆಸಿದ್ದು ರೈತರಲ್ಲ, ರಾಷ್ಟ್ರಘಾತುಕ ಶಕ್ತಿಗಳು. ರೈತರ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಗಲಭೆ ಮಾಡುತ್ತಿವೆ. ಅ ಧಿಕಾರ ಕಳೆದುಕೊಂಡ ಕಾಂಗ್ರೆಸ್ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ರೈತರಿಗೆ ಸಂವಿಧಾನ ಹಾಗೂ ಕಾನೂನು ಗೌರವಿಸುವುದು ಗೊತ್ತಿದೆ. ಹಕ್ಕುಗಳಿಗೆ ರೈತರು ಹೋರಾಟ ಮಾಡುವುದು ತಪ್ಪಲ್ಲ. ಆದರೆ, ಪುಂಡಾಟಿಕೆ, ದಾಂಧಲೆ ನಡೆಸುವುದು ತಪ್ಪು. ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ತಪ್ಪು. ಈ ಬಗ್ಗೆ
ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಸಿದ್ದರಾಮಣ್ಣನಿಗೆ ರೈತರ ಪರವಾಗಿ ಮಾತನಾಡುವ ನೈತಿಕತೆ ಇಲ್ಲ. ಅವರ ಅ ಧಿಕಾರಾವಧಿ ಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಮಾಜವಾದದ ಹೆಸರಿನಲ್ಲಿ ಮಜಾ ಮಾಡಿದವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಕೀಯ ಅಂತ್ಯ ಕಾಣಲಿದ್ದಾರೆ. ಜೈಲಿನಿಂದ ಬಂದಾಗ ಮೆರವಣಿಗೆಯಲ್ಲಿ ಬಂದಿದ್ದಾರೆ. ಮತ್ತೆ ಅಲ್ಲಿಗೇ ಹೋಗುತ್ತಾರೆ ಎಂದರು. ಮಹಾತ್ಮ ಗಾಂಧೀಜಿ ಜಾತ್ಯತೀತ ಪದವನ್ನು ಯಾವತ್ತೂ ಉಲ್ಲೇಖ ಮಾಡಿಲ್ಲ. ಸ್ವಾತಂತ್ರ ನಂತರ ಅಧಿ ಕಾರಕ್ಕೆ ಬಂದ ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಇದನ್ನು
ಮುನ್ನೆಲೆಗೆ ತಂದಿತು ಎಂದರು.
ಓದಿ : ಪರಿಸರ ಜಾಗೃತಿ; ಸೈಕಲ್ ಜಾಥಾಕ್ಕೆ ಚಾಲನೆ