Advertisement

ಕೊರೊನಾ ಕರ್ಫ್ಯೂ: ಸಾರ್ವಜನಿಕರ ಪರದಾಟ

09:43 PM Apr 28, 2021 | Team Udayavani |

ಮೊಳಕಾಲ್ಮೂರು: ತಾಲೂಕಿನಲ್ಲಿ ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣ ಮತ್ತು ತಾಲೂಕಿನ ನಾನಾ ಪ್ರಮುಖ ಗ್ರಾಮಗಳು ಸ್ತಬ್ಧದೊಂದಿಗೆ ಸಾರ್ವಜನಿಕರು ಪರದಾಡುವಂತಾಗಿದೆ. ವೀಕೆಂಡ್‌ ಕರ್ಫ್ಯೂನಿಂದ ಕಂಗಾಲಾಗಿದ್ದ ಜನಸಾಮಾನ್ಯರು ಮತ್ತೂಮ್ಮೆ ಸರ್ಕಾರವು 14 ದಿನಗಳ ಕಾಲ ಕೈಗೊಂಡ ಕರ್ಫ್ಯೂ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ.

Advertisement

ತಾಲೂಕಿನಲ್ಲಿಯೂ ಸಹ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕೊರೊನಾ ನಿಯಂತ್ರಿಸಲು ಸರ್ಕಾರದ ಕೊರೊನಾ ಮಾರ್ಗಸೂಚಿಯಂತೆ ಕಠಿಣ ನಿಯಮ ಪಾಲಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪಟ್ಟಣ ತಾಲೂಕಿನ ರಾಂಪುರ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಇನ್ನಿತರ ವ್ಯಾಪಾರ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಿದ್ದಾರೆ.

ಆದರೆ ಬೀದಿ ಬದಿ ವ್ಯಾಪಾರಸ್ಥರು ವ್ಯವಹಾರವಿಲ್ಲದೆ ಜೀವನ ನಡೆಸುವುದು ಕಠಿಣ ಸವಾಲಾಗಿದೆ. ಔಷ ಧ ಅಂಗಡಿಗಳು, ಕಿರಾಣಿ ಅಂಗಡಿ, ಹಣ್ಣು, ಹೂವು, ತರಕಾರಿ ಅಂಗಡಿಗಳು ಎಂದಿನಂತೆ ತೆರೆಯಲಾಗಿತ್ತು. ಇವುಗಳ ಜತೆಗೆ ಬೇಕರಿಗಳು, ಮೊಬೈಲ್‌ ಶಾಪ್‌ ಗಳು, ಬೀಡಾ ಅಂಗಡಿಗಳು, ಟೀ ಸ್ಟಾಲ್‌ಗ‌ಳು ಸೇರಿದಂತೆ ಇನ್ನಿತರ ಅಂಗಡಿಗಳನ್ನು ತೆರೆದಿದ್ದವು. ತಾಲೂಕಿನ ಎಲ್ಲಾ ಸರ್ಕಾರಿ ಇಲಾಖಾ ಕಚೇರಿಗಳು ತೆರೆದು ಎಂದಿನಂತೆ ಕಾರ್ಯ ನಿರ್ವಹಿಸಲಾಯಿತು. ಸಾರ್ವಜನಿಕರು ವಿವಿಧ ಪ್ರದೇಶಗಳಿಗೆ ಸಂಚರಿಸಲು ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಸಂಚರಿಸಿದವು.

ತಾಲೂಕಿನಲ್ಲಿ ಕೊರೊನಾ ಕರ್ಫ್ಯೂನಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಸರ್ಕಾರಿ ಇಲಾಖೆಗಳ ಅಧಿ ಕಾರಿ ಸಿಬ್ಬಂದಿ ದೂರದ ಪ್ರದೇಶಗಳಿಂದ ಬರುವವರಿಗೆ ಸಕಾಲಕ್ಕೆ ಬಸ್‌ ಸೌಲಭ್ಯವಿಲ್ಲದ ಕಾರಣ ಸಂಕಷ್ಟ ಅನುಭವಿಸುವಂತಾಗಿದೆ. ತಾಲೂಕಿನಲ್ಲಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಮಾಸ್ಕ್ ಇಲ್ಲದೆ ಓಡಾಡುವವರಿಗೆ ದಂಡ ವಿಧಿ ಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next