Advertisement

ನಿಯಮ ಪಾಲಿಸಿ ಕೃಷಿ ಪರಿಕರ ಮಾರಾಟ ಮಾಡಿ

09:37 PM Apr 28, 2021 | Team Udayavani |

ಚಿತ್ರದುರ್ಗ: ಸರ್ಕಾರ ಜಾರಿ ಮಾಡಿರುವ ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ನಿಯಮ ಪಾಲಿಸಿಕೊಂಡು ರೈತರಿಗೆ ತೊಂದರೆಯಾಗದಂತೆ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕು ಎಂದು ಚಿತ್ರದುರ್ಗ ತಹಶೀಲ್ದಾರ್‌ ಜೆ.ಸಿ.ವೆಂಕಟೇಶಯ್ಯ ಸೂಚಿಸಿದರು.

Advertisement

ನಗರದ ಎಪಿಎಂಸಿ ಆವರಣದಲ್ಲಿನ ಕೃಷಿ ತಂತ್ರಜ್ಞರ ಸಂಸ್ಥೆ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಜಾಗೃತಿ ಕಾರ್ಯಾಗಾರ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲೆಡೆ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈಗ ಪರಿಸ್ಥಿತಿ ಚಿಂತಾಜನಕವಾಗಿದೆ. ಆದರೆ ಕೃಷಿ ಸಂಬಂಧಿ ತ ಎಲ್ಲಾ ಚಟುವಟಿಕೆಗಳಿಗೆ ಯಾವುದೇ ರೀತಿಯ ಅನಾನುಕೂಲ ಆಗಬಾರದು ಎಂಬ ಕಾರಣಕ್ಕೆ ಕೃಷಿ ಪರಿಕರಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹಾಗಾಗಿ ಕೊರೊನಾ ನಿಯಮಾವಳಿ ಪಾಲಿಸಿ ವಹಿವಾಟು ನಡೆಸಬೇಕು. ತಮ್ಮ ಅಂಗಡಿಗೆ ಬರುವ ರೈತರು ಒಂದೊಮ್ಮೆ ಮಾಸ್ಕ್ ಹಾಕಿಲ್ಲ ಎಂದರೂ ನೀವೇ ಅವರಿಗೆ ಮಾಸ್ಕ್ ಕೊಟ್ಟು ಅದರ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಪರಿಕರ ಮಾರಾಟಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ.ಪಿ.ರೇವಣಸಿದ್ದಪ್ಪ ಮಾತನಾಡಿ, ಕೋವಿಡ್‌ ನಿಯಮ ಪಾಲಿಸಿಕೊಂಡು ವ್ಯಾಪಾರ ಮಾಡುತ್ತೇವೆ. ಆದರೆ ಕಳೆದ ವರ್ಷ ನೀಡಿದಂತೆ ಎಲ್ಲಾ ಅಂಗಡಿಯವರಿಗೂ ಪಾಸ್‌ ನೀಡಬೇಕು. ಅಂಗಡಿ ಮಾಲೀಕರು ಕೂಡ ರೈತರಿಗೆ ಅನ್ಯಾಯ ಆಗದಂತೆ ಕೃಷಿ ಪರಿಕರಗಳನ್ನು ಎಂ.ಆರ್‌.ಪಿ. ದರದಂತೆ ಮಾರಾಟ ಮಾಡಬೇಕು ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಸದಾಶಿವ ಮಾತನಾಡಿ, ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಹಂಗಾಮು ಪ್ರಾರಂಭ ಆಗಲಿದ್ದು, ಅದಕ್ಕೆ ಜಿಲ್ಲೆಗೆ ಬೇಕಾದ ಅಗತ್ಯ ರಸಗೊಬ್ಬರದ ಸಂಗ್ರಹವಿದೆ. ಎಲ್ಲಾ ಅಂಗಡಿ ಮಾಲೀಕರು ಆದಷ್ಟು ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಆದ್ಯತೆ ನೀಡಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಥವಾ ನಿಯಮಾವಳಿ ಉಲ್ಲಂಘಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಯಾರು ಕೂಡ ಅವಕಾಶ ನೀಡಬಾರದು.

ಅಂಗಡಿ ಮಾಲೀಕರಿಗೆ ಇಲಾಖೆಯಿಂದ ಪಾಸ್‌ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದರು. ಹಿರಿಯೂರು ಬಬ್ಬೂರು ಕೆವಿಕೆ ಪಾರಂನ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಎನ್‌.ಎ. ಪ್ರವೀಣ್‌ ಚೌದರಿ ಮಾತನಾಡಿ, ಕೋವಿಡ್‌ 19 ವ್ಯಾಪಕವಾಗಿ ಹರಡುತ್ತಿದ್ದು, ಇಷ್ಟು ದಿನ ದುಡ್ಡಿನ ಹಿಂದೆ ಓಡುತ್ತಿದ್ದ ಬಹುತೇಕರಿಗೆ ಆರೋಗ್ಯದ ಹಿಂದೆ ಓಡುವಂತಾಗಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು. ಮೇ 15ರ ಒಳಗಾಗಿ ರಸಗೊಬ್ಬರ ತರಿಸಿಕೊಂಡು ನಿಯಮಾವಳಿ ಪ್ರಕಾರ ಪಾರದರ್ಶಕವಾಗಿ ಮಾರಾಟ ಮಾಡಿ ಎಂದು ಸೂಚಿಸಿದರು.

Advertisement

ಚಿತ್ರದುರ್ಗ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್‌.ಚಂದ್ರಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಪ್ಕೊ ಸಂಸ್ಥೆಯ ಪ್ರತಿನಿಧಿ  ಲಕ್ಷಿ$¾àಶ್‌, ಕೃಷಿ ಅಧಿ ಕಾರಿಗಳು. ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next