Advertisement

ಮೊಳಕಾಲ್ಮೂರಲ್ಲಿ ಕರ್ಫ್ಯೂಗೆ ಉತ್ತಮ ಸ್ಪಂದನೆ

06:46 PM Apr 25, 2021 | Team Udayavani |

ಮೊಳಕಾಲ್ಮೂರು: ಪಟ್ಟಣ ಹಾಗೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ಕರ್ಫ್ಯೂನಿಂದ ಶನಿವಾರ ತಾಲೂಕು ಸ್ತಬ್ಧಗೊಂಡಿತ್ತು. ವೀಕೆಂಡ್‌ ಕರ್ಫ್ಯೂ ಮೊದಲ ದಿನದಂದು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಕಿರಾಣಿ ಅಂಗಡಿಗಳು, ಔಷಧ ಅಂಗಡಿಗಳು, ಹಣ್ಣಿನ ಅಂಗಡಿಗಳು, ತರಕಾರಿ ಅಂಗಡಿಗಳು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಅಂಗಡಿಗಳಿಗೆ ಅವಕಾಶ ನೀಡಲಾಗಿತ್ತು. 10 ಗಂಟೆಯಾಗುತ್ತಿದ್ದಂತೆಯೇ ಪೊಲೀಸರು ತೆರೆದಿದ್ದ ಕಿರಾಣಿ ಅಂಗಡಿಗಳು, ಬೇಕರಿ, ಹಣ್ಣು, ತರಕಾರಿ ಅಂಗಡಿಗಳು ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.

Advertisement

ಪೊಲೀಸ್‌ ವೃತ್ತ ನಿರೀಕ್ಷಕ ಜಿ.ಬಿ. ಉಮೇಶ್‌, ಪಿಎಸ್‌ಐ ಎಂ.ಕೆ. ಬಸವರಾಜ್‌ ಮಾರ್ಗದರ್ಶನದಲ್ಲಿ ಎಎಸ್‌ಐ ಜಯಪ್ಪ, ಸಿಬ್ಬಂದಿಗಳಾದ ಭರತೇಶ್‌, ನರೇಶ್‌ ಕುಮಾರ್‌, ಬಾಷಾ, ಮಂಜುನಾಥ, ಹರೀಶ್‌, ಭೀಮಣ್ಣ, ಶ್ರೀಧರ್‌, ತಿಪ್ಪೇಸ್ವಾಮಿ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅನವಶ್ಯಕವಾಗಿ ಹೊರಬಾರದಂತೆ ಮತ್ತು ಕೊರೊನಾ ನಿಯಮಗಳನ್ನು ಪಾಲಿಸಬೇಕೆಂದು ಜಾಗೃತಿ ಮೂಡಿಸಿದರು.

ತಾಲೂಕಿನ ರಾಂಪುರ ಉಪ ಪೊಲೀಸ್‌ ಠಾಣೆಯ ಪಿಎಸ್‌ಐ ಗುಡ್ಡಪ್ಪ ಹಾಗೂ ಸಿಬ್ಬಂದಿಗಳು, ಬಿ.ಜಿ. ಕೆರೆ ಉಪ ಠಾಣೆಯ ವ್ಯಾಪ್ತಿಯಲ್ಲಿಯೂ ಅನವಶ್ಯಕವಾಗಿ ಹೊರ ಬರುವವರ ವಿರುದ್ಧ ಕ್ರಮಕ್ಕೆ ಮುಂದಾದರು.

ಕೊರೊನಾ ಕರ್ಫ್ಯೂದಿಂದ ಬಸ್‌ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು. ಸಕಾಲಕ್ಕೆ ಬಸ್‌ಗಳ ಸೌಲಭ್ಯವಿಲ್ಲದ ಕಾರಣ ಆಟೋಗಳಿಗೆ ಹೆಚ್ಚಿನ ಹಣ ನೀಡಿ ಪ್ರಯಾಣಿಕರು ಪ್ರಯಾಣಿಸುವಂತಾಯಿತು. ಕೊರೊನಾ ಕರ್ಫ್ಯೂದಿಂದ ಜನಸಾಮಾನ್ಯರು ಹಾಗೂ ಬೀದಿಬದಿ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಗಿ ತಾಲೂಕು ಸ್ತಬ್ಧವಾಗಿತ್ತು. ಮಾಸ್ಕ್ ಹಾಕದೆ ಹೊರಬರುವವರಿಗೆ ಪೊಲೀಸರು ದಂಡ ವಿಧಿ ಸಿ ಬಿಸಿ ಮುಟ್ಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next