Advertisement

ನಾಯಕನ ಹಟ್ಟಿ ಜಾತ್ರೆ ಸಂಪನ್ನ

07:01 PM Apr 01, 2021 | Team Udayavani |

ನಾಯಕನಹಟ್ಟಿ: ಓಕಳಿ ಕಾರ್ಯಕ್ರಮದೊಂದಿಗೆ ತಿಪ್ಪೇರುದ್ರಸ್ವಾಮಿ ಜಾತ್ರೆಯ ಎಲ್ಲ ಧಾರ್ಮಿಕ ಆಚರಣೆಗಳು ಬುಧವಾರ ಸಂಪನ್ನಗೊಂಡವು.

Advertisement

ಮಾ. 22 ರಂದು ಕಂಕಣ ಧಾರಣೆಯೊಂದಿಗೆ ಜಾತ್ರೆಯ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಮಾ. 29 ರಂದು ಸೋಮವಾರ ರಥೋತ್ಸವ ಜರುಗಿತ್ತು. ಮಂಗಳವಾರ ಒಳಮಠದಿಂದ ಓಕಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾತ್ರಿ ಒಳಮಠದಿಂದ ಉತ್ಸವ ಮೂರ್ತಿಯನ್ನು ಪಾದಗಟ್ಟೆಗೆ ತರಲಾಯಿತು.

ಇಡೀ ದಿನ ಅಲ್ಲಿಯೇ ತಂಗಿದ್ದ ಉತ್ಸವ ಮೂರ್ತಿಯನ್ನು ಮಂಗಳವಾರ ಬೆಳಗ್ಗೆ ಹೊರಮಠಕ್ಕೆ ಮೆರವಣಿಗೆಯಲ್ಲಿ ಕಳಿಸಲಾಯಿತು. ನಂತರ ನಾನಾ ರೀತಿಯ ಬಣ್ಣಗಳ ಓಕಳಿಯನ್ನು ಸಿದ್ಧಗೊಳಿಸಲಾಯಿತು. ಭಕ್ತಾದಿಗಳು ಹಾಗೂ ಸೇವಾ ಕರ್ತರು ಓಕಳಿ ಎರಚಾಟದಲ್ಲಿ ತೊಡಗಿದರು. ನಾನಾ ರೀತಿಯ ಬಣ್ಣ ಹಾಗೂ ನೀರನ್ನು ಎರಚಿ ಯುವಕರು ಸಂಭ್ರಮಿಸಿದರು.

ಓಕಳಿ ಸಂದರ್ಭದಲ್ಲಿ ಭಕ್ತರು ಉತ್ಸವ ಮೂರ್ತಿಯ ಪಲ್ಲಕ್ಕಿಗೆ ಅಡ್ಡಲಾಗಿ ದಿಂಡಿರುಳು ಉರುಳಿ ಹರಕೆ ಸಲ್ಲಿಸಿದರು. ಈ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next