Advertisement

ಹೊಳಲ್ಕೆರೆ ಶಾಸಕರ ಉದ್ಧಟತನದ ವರ್ತನೆ ಖಂಡನೀಯ: ಮಾಜಿ ಸಚಿವ ಆಂಜನೇಯ

09:36 PM May 18, 2021 | Team Udayavani |

ಚಿತ್ರದುರ್ಗ: ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವಾಗ ಶಾಸಕರಾದವರು ಜವಾಬ್ದಾರಿಯಿಂದ ವರ್ತಿಸಬೇಕು. ಆದರೆ ಜನ ಎಲ್ಲಾದರೂ ಸಾಯಲಿ ಬಿಡ್ರಿ, ಇಲ್ಲಿ ಆಸ್ಪತ್ರೆ ಮಾಡಲು ಬಿಡುವುದಿಲ್ಲ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಹೇಳಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  ಆರೋಗ್ಯಾಧಿಕಾರಿಗಳು ತಪ್ಪು ಮಾಡಿದರೆ ಅಥವಾ ಜನಪ್ರತಿನಿ ಧಿಗಳ ಮಾತು ಕೇಳದಿದ್ದರೆ ಅವರ ಮೇಲೆ ಅಧಿ ಕಾರ ಚಲಾಯಿಸಿ ಸೌಲಭ್ಯ ಪಡೆಯುವುದು ಜನಪ್ರತಿನಿ ಗಳಾದವರ ಹೊಣೆಗಾರಿಕೆ. ಅದನ್ನು ಬಿಟ್ಟು ಹೊಳಲ್ಕೆರೆಯಲ್ಲಿ ಕೋವಿಡ್‌ ಆಸ್ಪತ್ರೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಜನ ಎಲ್ಲಿ¨ ಅಲ್ಲಿಯೇ ಸಾಯಲಿ ಬಿಡ್ರಿ ಎಂಬ ಉದ್ಧಟತನದ ವರ್ತನೆ ಜನರನ್ನು ಭೀತಿಗೊಳಿಸುತ್ತದೆ ಎಂದಿದ್ದಾರೆ.

ಬೆಳಗ್ಗೆಯಿಂದ ರಾತ್ರಿಯವರೆಗೂ ಕ್ಷೇತ್ರ ಸುತ್ತಾಟ ನಡೆಸಿ ಜನರ ಆರೋಗ್ಯ ವಿಚಾರಣೆ, ಗ್ರಾಮೀಣ ಮಟ್ಟದಲ್ಲಿ ಕೋವಿಡ್‌ ಕೇಂದ್ರ, ಆರೋಗ್ಯ ಕೇಂದ್ರಗಳ ವ್ಯವಸ್ಥೆ ಪರಿಶೀಲಿಸದ ಚಂದ್ರಪ್ಪ,  ಉಸ್ತುವಾರಿ ಸಚಿವ ಶ್ರೀರಾಮುಲು ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆಯೂ ಆರೋಗ್ಯ ಸೇವೆಯನ್ನು ಕ್ಷೇತ್ರಕ್ಕೆ ಪಡೆದುಕೊಳ್ಳುವಲ್ಲಿ ವಿಫಲರಾಗಿ¨ªಾರೆ ಎಂದು ಆರೋಪಿಸಿದ್ದಾರೆ.

ಆರೋಗ್ಯಾಧಿ ಕಾರಿಗಳ ಮೇಲೆ ದಬ್ಟಾಳಿಕೆ ಮಾಡಿದ್ದು ಸರಿಯಲ್ಲ. ಆದ್ದರಿಂದ , ಆರೋಗ್ಯ ಇಲಾಖೆ ಶಾಸಕ ಎಂ. ಚಂದ್ರಪ್ಪ ಅವರನ್ನು ಮಾನಸಿಕ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕು. ಅಲ್ಲಿಯವರೆಗೆ ಎಲ್ಲಿಯೂ ಹೊರಗಡೆ ಮಾತನಾಡದಂತೆ ನಿರ್ಬಂಧ ವಿಧಿಸಬೇಕು. ಇಲ್ಲದಿದ್ದರೆ ಜನರನ್ನು ಭೀತಿಗೆ ಒಳಪಡಿಸಿ ಜನರ ಜೀವದ ಜತೆ ಆಟವಾಡುತ್ತಾರೆ. ಆದ್ದರಿಂದ ಜನರ ಆರೋಗ್ಯ ದೃಷ್ಟಿಯಿಂದ ಕೂಡಲೇ ಅವರನ್ನು ಮಾನಸಿಕ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಆಂಜನೇಯ ಒತ್ತಾಯಿಸಿದ್ದಾರೆ.=

Advertisement

Udayavani is now on Telegram. Click here to join our channel and stay updated with the latest news.

Next