Advertisement

ಚಿರಂಜೀವಿ-ರಾಮ್ ಚರಣ್ ಅಭಿನಯದ ‘ಆಚಾರ್ಯ’ ಬಿಡುಗಡೆ ಮುಂದೂಡಿಕೆ

02:52 PM Jan 15, 2022 | Team Udayavani |

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ‘ಆಚಾರ್ಯ’ ಚಿತ್ರದ ಬಿಡುಗಡೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಕಾರಣದಿಂದ ಬಹುನಿರೀಕ್ಷಿತ ಚಿತ್ರದ ರಿಲೀಸ್ ಪೋಸ್ಟ್ ಪೋನ್ ಮಾಡಲಾಗಿದೆ.

Advertisement

ಫೆಬ್ರವರಿ 4ರಂದು ಆಚಾರ್ಯ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ ಇದಿಗ ಹೆಚ್ಚುತ್ತಿರುವ ಸೋಂಕಿನ ಕಾರಣದಿಂದ, ಉಳಿದ ಚಿತ್ರತಂಡಗಳಂತೆ ಚಿತ್ರ ಬಿಡುಗಡೆಯನ್ನು ಮುಂದೂಡಿಕೆ ಮಾಡಿದೆ.

ಮೂರನೇ ಅಲೆ ಕಡಿಮೆಯಾದ ಬಳಿಕ, ಪರಿಸ್ಥತಿ ಸುಧಾರಣೆಯಾದ ಬಳಿಕ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ:ಸರಣಿ ಸೋಲು: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಐದನೇ ಸ್ಥಾನಕ್ಕಿಳಿದ ಟೀಂ ಇಂಡಿಯಾ

ಕೊರಟಾಲ ಶಿವ ನಿರ್ದೇಶನದ ಆಚಾರ್ಯ ಚಿತ್ರದಲ್ಲಿ ಚಿರಂಜೀವಿ, ರಾಮ್ ಚರಣ್ ಜೊತೆಗೆ ಕಾಜಲ್ ಅಗರ್ವಾಲ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

ಚಿತ್ರದಲ್ಲಿ ಚಿರಂಜೀವಿ, ರಾಮ್ ಚರಣ್ ನಕ್ಸಲೀಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮ್ಯಾಟನಿ ಎಂಟರ್ಟೈನ್ ಮೆಂಟ್ ಮತ್ತು ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಆಚಾರ್ಯ ಚಿತ್ರಕ್ಕೆ ಬಂಡವಾಳ ಹೂಡಿದೆ.

ಚಿತ್ರದಲ್ಲಿ ಕನ್ನಡದ ಸೌರವ್ ಲೋಕೆಶ್ (ಭಜರಂಗಿ ಲೋಕಿ) ಕೂಡಾ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸೋನು ಸೂಡ್, ಜಿಶ್ಶು ಸೆನ್ ಗುಪ್ತಾ, ಕಿಶೋರ್, ಪೊಸಾನಿ ಕೃಷ್ಣ ಮುರಳಿ, ತನಿಕೆಲ್ಲಾ ಭರಣಿ, ಸಂಗೀತಾ ನಟಿಸಿದ್ದಾರೆ. ಮಣಿ ಶರ್ಮಾ ಸಂಗೀತ ಚಿತ್ರಕ್ಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next