Advertisement

“ಗಾಡ್‌ ಫಾದರ್” ನಟನೆಗೆ ಸಲ್ಮಾನ್‌ ಖಾನ್‌ ಒಂದು ಪೈಸೆಯನ್ನೂ ಪಡೆದಿಲ್ಲ.. ಮೆಗಾಸ್ಟಾರ್‌

04:55 PM Sep 24, 2022 | Team Udayavani |

ಹೈದರಾಬಾದ್:‌ ಮೆಗಾ ಸ್ಟಾರ್‌ ಚಿರಂಜೀವಿ ನಟನೆಯ ʼಗಾಡ್‌ ಫಾದರ್‌ʼ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ. ಅಕ್ಟೋಬರ್‌ 5 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಭರ್ಜರಿ ಪ್ರಮೋಷನ್‌ ನಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ.

Advertisement

ಮಲಯಾಳಂನ  ʼಲೂಸಿಫರ್‌ʼ ಸಿನಿಮಾದ ರಿಮೇಕ್‌ ಸಿನಿಮಾವಾಗಿರುವ ʼಗಾಡ್‌ ಫಾದರ್‌ʼ ನಲ್ಲಿ ಚಿರಂಜೀವಿಯೊಂದಿಗೆ ಸ್ಪೆಷೆಲ್‌ ರೋಲ್‌ ನಲ್ಲಿ ಸಲ್ಮಾನ್‌ ಖಾನ್‌ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ರಿಲೀಸ್‌ ಆದ ಟೀಸರ್‌ ಗೆ ದೊಡ್ಡ ಮಟ್ಟದ ರೆಸ್ಪಾನ್ಸ್‌ ಸಿಕ್ಕಿದೆ.

ಪ್ರಮೋಷನ್‌ ನ ಅಂಗವಾಗಿ ಮೆಗಾ ಸ್ಟಾರ್‌ ಚಿರಂಜೀವಿ ಯೂಟ್ಯೂಬ್‌ ಚಾನೆಲ್‌ ವೊಂದಕ್ಕೆ ವಿಶೇಷ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದ ಪ್ರೋಮೋ ರಿಲೀಸ್‌ ಆಗಿದ್ದು, ಅದರಲ್ಲಿ ಚಿರಂಜೀವಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: War Begins Soon.. ಪ್ರೇಮ್‌ ಸಿನಿಮಾಕ್ಕಾಗಿ ಹೊಸ ಸಾಹಸಕ್ಕೆ ಮುಂದಾದ ಆ್ಯಕ್ಷನ್ ಪ್ರಿನ್ಸ್

ಗಾಡ್‌ ಫಾದರ್‌ ನ ಸಬ್ಜೆಕ್ಟ್ ಹೇಗಿದೆ ಎಂದರೆ ಇದರಲ್ಲಿ ನಾಯಕಿ ಅಥವಾ ಹಾಡುಗಳು ಇಲ್ಲದಿದ್ರು ನೀವು ಆಚ್ಚರಿ ಪಡುವುದಿಲ್ಲ. ಸಿನಿಮಾದಲ್ಲಿ ನಿರ್ದೇಶಕ ಪುರಿ ಜಗನ್ನಾಥ್‌ ಅವರು ನಟಿಸಿದ್ದಾರೆ. ಅವರು ಮೊದಲು ಯಾವುದೇ ಕಾರಣಕ್ಕೂ ನಟಿಸಲ್ಲ ಎಂದಿದ್ದರು. ಆದರೆ ನೀವು ಸಿನಿಮಾವನ್ನು ನೋಡಿದರೆ ನಿಮಗೆ ಅವರ ನಟನೆ ನೋಡಿ ಆಶ್ಚರ್ಯವಾಗಬಹುದು. ಅವರಲ್ಲೊಬ್ಬ ಪ್ರತಿಭಾವಂತ ನಟನಿರುವುದು ನಿಮಗೆ ತಿಳಿಯುತ್ತದೆ ಎಂದು ಚಿರಂಜೀವಿ ಹೇಳಿದ್ದಾರೆ.

Advertisement

ಇನ್ನು ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ಮಾಡಿರುವ ಸಲ್ಮಾನ್‌ ಬಗ್ಗೆ ಪ್ರಶಂಸೆ ಮಾಡುತ್ತಾ, ಸಲ್ಮಾನ್‌ ಖಾನ್‌ ಸಂಭಾವನೆ ತೆಗೆದುಕೊಳ್ಳದೆ ಈ ಸಿನಿಮಾವನ್ನು ಮಾಡಿದ್ದಾರೆ. ಅವರು ಪ್ರೀತಿಗಾಗಿ ಮಾತ್ರ ಸಿನಿಮಾ ಮಾಡುತ್ತಾರೆ. ಹ್ಯಾಟ್ಸ್‌ ಆಫ್‌ ಸಲ್ಮಾನ್‌ ಭಾಯಿ, ವಿ ಲವ್‌ ಯೂ ಎಂದು ಹೇಳಿದ್ದಾರೆ. ಇತ್ತೀಚಿಗೆ ಗಾಡ್‌ ಫಾದರ್‌ ಸಿನಿಮಾದ “ಥಾರ್ ಮಾರ್ ಥಕ್ಕರ್ ಮಾರ್” ಹಾಡು ಬಿಡುಗಡೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next