Advertisement

ಚಿಪ್‌ ಆಧಾರಿತ ಕಾರ್ಡ್‌ ಜ.1ರಿಂದ ಕಡ್ಡಾಯ

12:30 AM Dec 29, 2018 | |

ನವದೆಹಲಿ: ಇಎಂವಿ ಚಿಪ್‌ ಹಾಗೂ ಪಿನ್‌ ಆಧಾರಿತ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಬಳಕೆ ಜನವರಿ 1ರಿಂದ ಜಾರಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವೈಶಿಷ್ಟéತೆ ಹೊಂದಿರದ ಕಾರ್ಡುಗಳು ಈ ಮಾಸಾಂತ್ಯಕ್ಕೆ ಸ್ವಯಂ ಚಾಲಿತವಾಗಿ ನಿಷ್ಕ್ರಿಯಗೊಳ್ಳಲಿವೆ. 

Advertisement

ಈವರೆಗೆ ಕ್ರೆಡಿಟ್‌ ಕಾರ್ಡುಗಳಲ್ಲಿ ಮಾತ್ರವೇ ಚಿಪ್‌ ಮಾದರಿಯ ವಿಶೇಷತೆ ಇತ್ತು. ಇನ್ನು ಡೆಬಿಟ್‌ ಕಾರ್ಡುಗಳಿಗೂ ಇದನ್ನು ವಿಸ್ತರಿಸಲಾಗುತ್ತಿದ್ದು, ಇದು ವಿವಿಧ ಕಾರ್ಡ್‌ ಆಧಾರಿತ ವ್ಯವಹಾರಗಳಿಗೆ ಕಡ್ಡಾಯವಾಗಲಿವೆ. ಹಾಗಾಗಿ, ಕೇವಲ ಮ್ಯಾಗ್ನೆಟಿಕ್‌ ಪಟ್ಟಿ ಹೊಂದಿರುವ ಕಾರ್ಡುಗಳನ್ನು ಬೇಗನೇ ಬ್ಯಾಂಕುಗಳಿಗೆ ಹಿಂದಿರುಗಿಸಿ ಹೊಸ ಚಿಪ್‌ ಆಧಾರಿತ ಕಾರ್ಡುಗಳನ್ನು ಪಡೆಯುವಂತೆ ಈಗಾಗಲೇ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸೂಚನೆ ಕೊಟ್ಟಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next