Advertisement

ಇತಿಹಾಸ ತಿರುಚುವಿಕೆ ಮಹಾ ಮೋಸ

05:57 PM Apr 19, 2021 | Team Udayavani |

ಚಿತ್ರದುರ್ಗ: ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಹಕ್ಕ-ಬುಕ್ಕರು ದೇಶದ ದೊಡ್ಡ ಆಸ್ತಿ. ಅವರ ಕಾಲದ ಇತಿಹಾಸವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಸುವರ್ಣ ಯುಗದ ಇತಿಹಾಸ, ದಾಖಲೆಗಳನ್ನು ತಿರುಚುವುದು ಪರಂಪರೆಗೆ ಮಾಡುವ ಮಹಾ ಮೋಸ ಎಂದು ವಿಶ್ವ ಹಾಲು ಮತ ಹಕ್ಕ-ಬುಕ್ಕ ಯುವ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಂಚಪ್ಪ ಎಸ್‌. ಹುಲಿಯಾನ್‌ ಹೇಳಿದರು.

Advertisement

ಇಲ್ಲಿನ ಕನಕ ಗುರುಪೀಠದ ಶಾಖಾ ಮಠದಲ್ಲಿ ವಿಶ್ವ ಪಾರಂಪರಿಕ ದಿನದ ಅಂಗವಾಗಿ ಜಿಲ್ಲಾ ಕುರುಬರ ಸಂಘ, ಹಾಲುಮತ ಮಹಾಸಭಾ, ಕನಕ ನೌಕರರ ಸಂಘ, ವಿಶ್ವ ಹಾಲುಮತ ಹಕ್ಕಬುಕ್ಕ ಯುವ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಹಾಗೂ ಕುರುಬ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಹಕ್ಕ ಬುಕ್ಕರು ಸ್ಥಾಪಿಸಿದರು.

ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಕುರುಬರು ಎನ್ನುವ ಬಗ್ಗೆ ಎಲ್ಲಾ ಇತಿಹಾಸ ತಜ್ಞರು, ಏಕಕಂಠದಲ್ಲಿ ಸಾರಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸುಮಾರು 55ಕ್ಕೂ ಹೆಚ್ಚು ದಾಖಲೆಗಳು ಹೇಳುತ್ತವೆ. ಆದರೆ ಇಂದು ರಾಜ್ಯದಲ್ಲಿ ಇತಿಹಾಸವನ್ನು ತಿರುಚುವವರು ಹೆಚ್ಚಾಗಿದ್ದಾರೆ. ಇದು ಅಪಾಯಕಾರಿ ಎಂದರು.

ಉಪನ್ಯಾಸಕ ಡಾ| ಎಸ್‌.ಆರ್‌. ಲೇಪಾಕ್ಷ ಮಾತನಾಡಿ, ನಾಡಿನಲ್ಲಿ ಕುರುಬರ ಜಯಂತಿ ತುಂಬಾ ಅರ್ಥಪೂರ್ಣವಾಗಿ ನಡೆಯುತ್ತಿವೆ. ನಮ್ಮ ಸಂಸ್ಕೃತಿ ಇತಿಹಾಸ ಪರಂಪರೆಯನ್ನು ನಾವು ಮುಂದಿನ ಪೀಳಿಗೆಗೆ ಹೇಳಬೇಕಿದೆ ಎಂದು ತಿಳಿಸಿದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್‌ ಮಾತನಾಡಿ, ಹಕ್ಕ ಬುಕ್ಕರ ಸಾಮ್ರಾಜ್ಯ ಸ್ಥಾಪನೆ ವೇಳೆ ವಿದ್ಯಾರಣ್ಯ ಗುರುಗಳ ಕೃಪೆ ಇದೆ. ಹಾಗೆಯೆ ನಮಗೆ ನಮ್ಮ ಕನಕ ಮಠದ ಕೃಪೆ ಇದೆ. ಕುರುಬರಾದ ನಾವು ಮುಂದೆ ಹಕ್ಕ ಬುಕ್ಕರ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಪತ್ರಕರ್ತ ಮಾಲತೇಶ್‌ ಅರಸ್‌ ಹರ್ತಿಕೋಟೆ, ನಗರಸಭೆ ಮಾಜಿ ಅಧ್ಯಕ್ಷ ಎಚ್‌. ಮಂಜಪ್ಪ, ಕನಕ ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ, ಹಾಲುಮತ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆಹಟ್ಟಿ ಹನುಮಂತಪ್ಪ, ಕುರುಬರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪಿ.ಕೆ. ಮೀನಾಕ್ಷಿ ಮಾತನಾಡಿದರು.

Advertisement

ಎಂ.ವಿ ಮಾಳೇಶ್‌, ಮುತ್ತುರಾಜ್‌, ಕನಕ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸರ್ವೆ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್‌, ಜಿಲ್ಲಾ ನಿರ್ದೇಶಕ ಗುರುನಾಥ್‌, ಕಲ್ಲೇಶ್‌ ಡಿ. ಮೌರ್ಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next