Advertisement

ಸಾಲ ಬಾದೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

01:59 PM Sep 18, 2021 | Team Udayavani |

ಚಿಂತಾಮಣಿ : ಸಾಲದ ಭಾದೇ ತಾಳಲಾರದೇ ಗಂಡ ಹೆಂಡತಿ ಮನೆಯಲ್ಲಿಯೇ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಂತಾಮಣಿ‌ ತಾ. ಬಟ್ಲಹಳ್ಳಿ ಪೊಲೀಸದ ಠಾಣಾ ವ್ಯಾಪ್ತಿಯ ಕೊಂಡ್ಲಿಗಾಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಸಾಲದ ಭಾದೇ‌ ತಾಳಲಾರದೆ ತಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ದಂಪತಿಗಳು ಚಿಂತಾಮಣಿ ತಾಲೂಕು ಮುಂಗಾನಹಳ್ಳಿ ಹೊಬಳಿ ಗೊಲ್ಲಪಲ್ಲಿ ಗ್ರಾಮ ಪಂಚಾಯಿತಿ‌ ವ್ಯಾಪ್ತಿಯ ಕೊಂಡ್ಲಿಗಾನಹಳ್ಳಿ ಗ್ರಾಮದ ರೈತ ವೆಂಕಟರೆಡ್ಡಿ(53) ಇವರ ಪತ್ನಿ ರತ್ನಮ್ಮ(50) ಮೃತ ದುರ್ದೈವಿಗಳು.

ತಮ್ಮಗಿರುವ ಜಮೀನಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಟೊಮೇಟೊ, ಕ್ಯಾರೆಟ್‌ ಮತ್ತಿತರ ಬೆಳೆಗಳನ್ನು ಬೆಳೆದಿದ್ದು, ಬೆಳೆಗಳಿಗೆ ಉತ್ತಮ‌ ಬೆಲೆ ಸಿಗದ ಕಾರಣ ಸಾಲಗಾರರ ಕಾಟ ಹೆಚ್ಚಾಗಿ ಮಾಡಿದ ಸಾಲವನ್ನು‌ ತೀರಿಸಲಾಗದೆ ಶುಕ್ರವಾರ ರಾತ್ರಿ ರೈತ ವೆಂಕಟರೆಡ್ಡಿ ಹಾಗೂ ಇತನ ಪತ್ನಿ ರತ್ಮಮ ತಮ್ಮ‌ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾಗಿದ್ದಾರೆ.

ಇದನ್ನೂ ಓದಿ :ಸೋನು ಅವರಿಂದ 20 ಕೋಟಿ ತೆರಿಗೆ ವಂಚನೆ: ಐಟಿ ಇಲಾಖೆ ಮಾಹಿತಿ  

ಇನ್ನು ಬೆಳಿಗ್ಗೆ ಆರು ಗಂಟೆ ಸಮಯದಲ್ಲಿ ಮಕ್ಕಳು ನೇಣು‌ ಬಿಗಿದ ಸ್ಥಿತಿಯಲ್ಲಿ ತಂದೆತಾಯಿ ಶವಗಳನ್ನು ಕಂಡು ಅಕ್ಕಪಕ್ಕದ‌ಮನೆಯವರಿಗೆ ವಿಕ್ಷಯ ತಿಳಿಸಿ ನಂತರ ಬಟ್ಲಹಳ್ಳಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಬಟ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶಿಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Advertisement

ಮೃತ ದಂಪತಿಗಳು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ವಿಷಯ ತಿಳಿದ ಕೂಡಲೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಶಾಸಕ ಜೆಕೆ ಕೃಷ್ಣಾರೆಡ್ಡಿ ಭೇಟಿ ನೀಡಿ ಪರಿಶಿಲನೆ ನಡೆಸಿ‌ ಮೃತರ‌ ಕುಟುಂಬದವರಿಗೆ ಸಾಂತ್ವಾನ ಹೇಳಿ ಸರ್ಕಾರದಿಂದ‌ ಸಿಗುವ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಒದಿಗಿಸಿಕೊಡುವುದಾಗಿ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next