Advertisement
ಬೇಕಾಗುವ ವಸ್ತುಗಳುಗಾಜಿನ ಲೋಟ,
ಸೆಲ್ಲೋ ಟೇಪ್
ಮಾಡುವ ವಿಧಾನ
ಚಿತ್ರ-2 ಅನ್ನು ಸರಿಯಾಗಿ ಗಮನಿಸಿ. ಮ್ಯಾಜಿಕ್ ಪ್ರದರ್ಶಿಸುವ ಮೊದಲು ಒಂದು ಸೆಲ್ಲೋ ಟೇಪಿನ ತುಂಡನ್ನು ಹೆಬ್ಬೆರಳು ತೂರಲು ಸುಲಭವಾಗುವಂತೆ ಅಂಟಿಸಿಡಲಾಗುತ್ತದೆ. ಮ್ಯಾಜಿಕ್ ಮಾಡುವಾಗ ಎರಡೂ ಕೈಗಳನ್ನು ಗ್ಲಾಸಿನ ಹತ್ತಿರ ತಂದು ಒಂದು ಕೈಯ ಹೆಬ್ಬೆರಳನ್ನು ಟೇಪಿನೊಳಗೆ ಜೋಪಾನವಾಗಿ ತೂರಿಸಬೇಕು. ಹೀಗೆ ಮಾಡಲು ಅಭ್ಯಾಸ ಮಾಡಿರಬೇಕು. ಆಗ ಮಾತ್ರ ಸಹಜವಾಗಿ ಮಾಡುವುದು ಸಾಧ್ಯವಾಗುತ್ತದೆ. ಸ್ವಲ್ಪ ನಿಧಾನವಾದರೂ ಪ್ರೇಕ್ಷಕರಿಗೆ ಅನುಮಾನ ಬರಬಹುದು. ಹೀಗಾಗಿ ಪ್ರೇಕ್ಷಕರ ಗಮನವನ್ನು ಬೇರೆಡೆ ಹರಿಸಲು ಗ್ಲಾಸನ್ನು ಹಿಡಿಯುವಾಗ ಮಂತ್ರೋಚ್ಚಾರ ಮಾಡಬಹುದು. ಹೆಬ್ಬೆರಳು ಟೇಪಿನ ಒಳಗೆ ತೂರಿದ ನಂತರ ನಿಧಾನವಾಗಿ ಕೈಯನ್ನು ಮೇಲಕ್ಕೆ ಚಲಿಸಿ. ಆಗ ಗ್ಲಾಸ್ ಕೂಡಾ ಕೈ ಜೊತೆ ಮೇಲಕ್ಕೆ ಚಲಿಸುವುದರಿಂದ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣಿಸುತ್ತದೆ. – ಉದಯ್ ಜಾದೂಗಾರ್