Advertisement

9 ಗಂಟೆ ಕಾರ್ತಿ ವಿಚಾರಣೆ

11:15 PM May 26, 2022 | Team Udayavani |

ನವದೆಹಲಿ: 2011ರ ಚೀನಾ ವೀಸಾ ಪ್ರಕರಣ ಸಂಬಂಧ ಸಿಬಿಐ ಕಾರ್ತಿ ಚಿದಂಬರಂ ಅವರನ್ನು ಗುರುವಾರ 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದೆ.

Advertisement

ಸುಪ್ರೀಂ ಕೋರ್ಟ್‌ನ ಅನುಮತಿಯೊಂದಿಗೆ ಯು.ಕೆ. ಮತ್ತು ಯುರೋಪ್‌ ಪ್ರವಾಸಕ್ಕೆ ತೆರಳಿದ್ದ ಕಾರ್ತಿ ಅವರಿಗೆ ಭಾರತಕ್ಕೆ ವಾಪಸಾದ 16 ಗಂಟೆಗಳೊಳಗೆ ಸಿಬಿಐ ವಿಚಾರಣೆಗ ಹಾಜರಾಗಲು ವಿಶೇಷ ನ್ಯಾಯಾಲಯವು ಸೂಚಿಸಿತ್ತು. ಅದರಂತೆ ಬುಧವಾರ ಭಾರತಕ್ಕೆ ಬಂದಿಳಿದ ಕಾರ್ತಿ, ಗುರುವಾರ ಬೆಳಗ್ಗೆಯೇ ವಿಚಾರಣೆಗೆ ಹಾಜರಾಗಿದ್ದರು.

ಇದೇ ವೇಳೆ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಕಾರ್ತಿ ಅವರಿಗೆ ಮೇ 30ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ದೆಹಲಿ ಹೈಕೋರ್ಟ್‌ ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next