Advertisement

ಅಮೆರಿಕ ಪರಮಾಣು ಶಸ್ತ್ರಾಸ್ತ್ರ ತಾಣಗಳ ಮೇಲೆ ಚೀನೀ ಸ್ಪೈ ಬಲೂನ್ ಕಣ್ಗಾವಲು

10:24 AM Feb 03, 2023 | Team Udayavani |

ವಾಷಿಂಗ್ಟನ್: ಅಮೆರಿಕದ ಮೇಲೆ ಹಾರುತ್ತಿರುವ ಚೀನಾದ ಗೂಢಚಾರಿಕೆ ಬಲೂನ್‌ ನ ಜಾಡು ಹಿಡಿಯಲಾಗುತ್ತಿದೆ ಎಂದು ಪೆಂಟಗನ್ ಗುರುವಾರ ಹೇಳಿದೆ.

Advertisement

ಅಮೆರಿಕದ ಉನ್ನತ ರಾಜತಾಂತ್ರಿಕರು ಬೀಜಿಂಗ್‌ಗೆ ಅಪರೂಪದ ಭೇಟಿ ನೀಡುವ ಕೆಲವೇ ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ.

ಅಧ್ಯಕ್ಷ ಜೋ ಬಿಡೆನ್ ಅವರ ಕೋರಿಕೆಯ ಮೇರೆಗೆ, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳು ಬಲೂನ್ ಅನ್ನು ಹೊಡೆದುರುಳಿಸಲು ಪರಿಗಣಿಸಿದ್ದಾರೆ. ಆದರೆ ಹೊಡೆದುರುಳಿಸುವದರಿಂದ ಕೆಳಗಿರುವ ಹಲವಾರು ಜನರಿಗೆ ಅಪಾಯವಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

” ಈ ಬಲೂನ್‌ ನ ಉದ್ದೇಶವು ಕಣ್ಗಾವಲು ಮಾಡುವದಾಗಿದೆ” ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ:ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿಯಲ್ಲಿ ಅತೃಪ್ತಿಯ ಹೊಗೆ

Advertisement

ವಾಯುವ್ಯ ಯುನೈಟೆಡ್ ಸ್ಟೇಟ್ಸ್‌ ನ ಮೇಲೆ ಬಲೂನ್ ಹಾರಿದೆ, ಅಲ್ಲಿ ಸೂಕ್ಷ್ಮ ವಾಯುನೆಲೆಗಳು ಮತ್ತು ಭೂಗತ ಸಿಲೋಗಳಲ್ಲಿ ಕಾರ್ಯತಂತ್ರದ ಪರಮಾಣು ಕ್ಷಿಪಣಿಗಳಿವೆ ಎಂದು ಅಧಿಕಾರಿ ಹೇಳಿದರು.

ವ್ಯಾಪಾರ ಮತ್ತು ಬೌದ್ಧಿಕ ಆಸ್ತಿಯ ಮೇಲೆ ನಡೆಯುತ್ತಿರುವ ವಿವಾದಗಳ ಜೊತೆಗೆ, ಎರಡು ದೇಶಗಳ ನಡುವಿನ ಸಂಬಂಧಗಳು ವಿಶೇಷವಾಗಿ ತೈವಾನ್‌ ವಿಚಾರವಾಗಿ ಹದಗೆಟ್ಟಿದೆ. ತನ್ನನ್ನು ರಕ್ಷಿಸಿಕೊಳ್ಳಲು ತೈವಾನ್‌ ಗೆ ಅಮೆರಿಕ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದೆ. ಚೀನಾ ದಾಳಿ ಮಾಡಿದರೆ ತೈವಾನ್ ರಕ್ಷಿಸಲು ವಾಷಿಂಗ್ಟನ್ ಸಹಾಯ ಮಾಡುತ್ತದೆ ಎಂದು ಬಿಡೆನ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next