Advertisement
ಆದರೆ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತೀಯ ಪಾಳಯ ಸಂಭ್ರಮಪಡುವಂತೆ ಮಾಡಿದ್ದಾರೆ.
ಇತ್ತೀಚೆಗಷ್ಟೆ ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡಿದ್ದ ಎಚ್.ಎಸ್.
ಪ್ರಣಯ್ ಅವರು ಮೊದಲ ಸುತ್ತಿನಲ್ಲಿ ತೀವ್ರವಾಗಿ ಹೋರಾಡಿ ಶರಣಾಗಿದ್ದಾರೆ. ಡೆನ್ಮಾರ್ಕ್‌ನ ರಸು¾ಸ್ ಗೆಮೆR ಅವರೊಂದಿಗಿನ ಸೆಣಸಾಟದಲ್ಲಿ ಪ್ರಣಯ್ 17-21, 18-21 ಗೇಮ್‌ಗಳಿಂದ ಸೋತು ಹೊರಬಿದ್ದರು.
Related Articles
ಈ ಮೊದಲು ನಡೆದ ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾತ್ವಿಕ್ ಅವರು ಅಶ್ವಿನಿ ಪೊನ್ನಪ್ಪ ಜತೆಗೂಡಿ 30ನೇ ಶ್ರೇಯಾಂಕದ ಕೆನಡದ ಜೊಶುವ ಹರ್ಲ್ಬರ್ಟ್ ಯು ಮತ್ತು ಜೊಸೆಪೈನ್ ವು ಅವರನ್ನು 21-19, 21-19 ನೇರ ಗೇಮ್‌ಗಳಿಂದ ಮಣಿಸಿ ಮುನ್ನಡೆದಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಕೊರಿಯದ ಸಿಯೊ ಸಿಯುಂಗ್ ಜಾಯಿ ಮತ್ತು ಚಾಯಿ ಯುಜಂಗ್ ಅವರನ್ನು ಎದುರಿಸಲಿದ್ದಾರೆ.
ಆದರೆ ಅಶ್ವಿನಿ ಪೊನ್ನಪ್ಪ ವನಿತೆಯರ ಡಬಲ್ಸ್‌ನಲ್ಲಿ ಸೋತಿದ್ದಾರೆ. ಅಶ್ವಿನಿ ಮತ್ತು ಸಿಕ್ಕಿ ರೆಡ್ಡಿ ಅವರು ವಿಶ್ವದ 10ನೇ ರ್‍ಯಾಂಕಿನ ಚೀನದ ಲಿ ವೆನ್ ಮೆಯಿ ಮತ್ತು ಝೆಂಗ್ ಯು ಅವರೆದುರು 9-21, 8-21 ಗೇಮ್‌ಗಳಿಂದ ಸುಲಭವಾಗಿ ಶರಣಾದರು.
Advertisement
ಸಾತ್ವಿಕ್ ಭರ್ಜರಿ ಆಟಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಭರ್ಜರಿ ಆಟವಾಡಿ ಗಮನ ಸೆಳೆದಿದ್ದಾರೆ. ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ ಜಯ ಸಾಧಿಸಿ ಮುನ್ನಡೆದಿದ್ದಾರೆ. ಥಾçಲಂಡ್ ಓಪನ್ ಚಾಂಪಿಯನ್ ಆಗಿರುವ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಅವರು ಮೊದಲ ಸುತ್ತಿನಲ್ಲಿ ಅಮೆರಿಕದ ಫಿಲಿಪ್ ಚ್ಯು ಮತ್ತು ರಿಯಾನ್ ಚ್ಯು ಅವರನ್ನು 21-9, 21-15 ಗೇಮ್‌ಗಳಿಂದ ಸುಲಭವಾಗಿ ಮಣಿಸಿ ಮುನ್ನಡೆದಿದ್ದಾರೆ.
ಕಳೆದ ತಿಂಗಳು ನಡೆದ ಫ್ರೆಂಚ್ ಓಪನ್ ಕೂಟದಲ್ಲಿ ಫೈನಲ್ಸ್ ವರೆಗೆ ತಲುಪಿದ್ದ ಸಾತ್ವಿಕ್-ಚಿರಾಗ್ ದ್ವಿತೀಯ ಸುತ್ತಿನಲ್ಲಿ ಜಪಾನಿನ ಹಿರೊಯುಯಿ ಎಂಡೊ ಮತ್ತು ಯೂತ ವಾಟನಾಬೆ ಅವರನ್ನು ಎದುರಿಸಲಿದ್ದಾರೆ.