ಹೊಸದಿಲ್ಲಿ: ಪುಕ್ಕಟೆ ಜಾಗ ಸಿಕ್ಕರೆ ಚೀನ ಏನು ಮಾಡೋದಕ್ಕೂ ಹೇಸುವುದಿಲ್ಲ. ಈಗ ಪ್ಯಾಂಗಾಂಗ್ ಸರೋವರ ಸಮೀಪ ಮ್ಯಾಂಡರಿನ್ ಭಾಷೆಯಲ್ಲಿ ಬೃಹತ್ ಚಿಹ್ನೆ ಮತ್ತು ನಕ್ಷೆಯ ಗುರುತನ್ನು ಕೆತ್ತುವ ಮೂಲಕ ಚೀನ ಇನ್ನೊಂದು ವಿವಾದ ಸೃಷ್ಟಿಸಿದೆ.
ಫಿಂಗರ್ 4 ಮತ್ತು ಫಿಂಗರ್ 5 ನಡುವೆ 81 ಮೀಟರ್ ಉದ್ದ ಮತ್ತು 25 ಮೀಟರ್ ಅಗಲದಲ್ಲಿ ಮ್ಯಾಂಡರಿನ್ ಭಾಷೆಯಲ್ಲಿ ಈ ರಚನೆಗಳನ್ನು ಕೆತ್ತಿದೆ.
ಪ್ಲ್ರಾನೆಟ್ ಲ್ಯಾಬ್ಸ್ ಉಪಗ್ರಹ ಚಿತ್ರಣ ಸಂಸ್ಥೆ ತೆಗೆದ ಚಿತ್ರಗಳಲ್ಲಿ ಚೀನದ ಈ ದುಂಡಾವರ್ತನೆಗಳು ಸ್ಪಷ್ಟವಾಗಿವೆ. ಅಲ್ಲದೆ ಈ ಚಿತ್ರಗಳಲ್ಲಿ 186 ಡೇರೆಗಳು, ಪುಟ್ಟ ಗೂಡುಗಳೂ ಗೋಚರಿಸುತ್ತಿವೆ. ಸರೋವರ ದಂಡೆ ಮಾತ್ರವಲ್ಲ, ಅಲ್ಲಿಂದ 8 ಕಿ.ಮೀ. ದೂರದ ರಿಡ್ಜ್ ಲೈನ್ ಉದ್ದಕ್ಕೂ ಚೀನ ತನ್ನ ಚಟುವಟಿಕೆಗಳನ್ನು ಹೆಚ್ಚಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಹ್ಯಾಕರ್ ಛೂ ಬಿಟ್ಟ ಚೀನ: ಮಹಾಕಳ್ಳ ಚೀನ ತನ್ನ ದುಬುìದ್ಧಿ ಎಲ್ಲಿ ಬಿಡುತ್ತೆ? ಗಾಲ್ವಾನ್ ಘರ್ಷಣೆಯ ನಂತರ ಚೀನವು ಭಾರತದ ಮೇಲೆ ಹ್ಯಾಕ ರ್ಸ್‌ಗಳನ್ನು ಛೂ ಬಿಟ್ಟಿದೆ ಎಂದು ಸೈಬರ್ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
“ಲಡಾಖ್ ಸಂಘರ್ಷದ ಬಳಿಕ ಚೀನ ಹ್ಯಾಕರ್ಸ್‌ಗಳ ದಾಳಿ ಶೇ.300ರಷ್ಟು ಏರಿಕೆ ಕಂಡಿದೆ. ಈಗ ಹ್ಯಾಕರ್ಸ್‌ಗಳು ಕಣ್ಗಾವಲಿನ ಹಂತ ದಲ್ಲಿದ್ದಾರೆ. ನಮ್ಮ ಸೂಕ್ಷ್ಮ ಮಾಹಿತಿ ಗಳನ್ನು ಕಲೆಹಾಕುತ್ತಿದ್ದಾರೆ. ನಂತರ ಅವುಗಳನ್ನು ಪ್ರೊಫೈಲ್ ಮಾಡಿ, ಹಂತ ಹಂತವಾಗಿ ದಾಳಿ ನಡೆಸುತ್ತಾರೆ’ ಎಂದು ಸೈಬರ್ ಸಂಶೋಧನಾ ಸಂಸ್ಥೆ ಸೈಫ ರ್ಮಾದ ಸಿಇಒ ರಿತೇಶ್ ಕುಮಾರ್ ಎಚ್ಚರಿಸಿದ್ದಾರೆ.
“ಆರಂಭದಲ್ಲಿ ಇವರು ಸ್ಥಳೀಯ ಕೈಗಾರಿಕೆಗಳಾದ ಮೊಬೈಲ್ ಉತ್ಪಾದನೆ, ನಿರ್ಮಾಣ, ಟೈರ್ ಉತ್ಪಾದನಾ ಘಟಕ ಗಳು, ಮಾಧ್ಯಮ ಸಂಸ್ಥೆಗಳು, ಕೆಲವು ಸರಕಾರಿ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸುವ ಸಾಧ್ಯತೆ ಇದೆ. ಅತಿ ಸೂಕ್ಷ್ಮ ಡೇಟಾ, ಗ್ರಾಹಕರ ಮಾಹಿತಿ, ಬೌದ್ಧಿಕ ಆಸ್ತಿಗಳಿಗೆ ಚೀನ ಹ್ಯಾಕರ್ಸ್ ಕನ್ನ ಹಾಕಬಹುದು’ ಎಂದು ಹೇಳಿದ್ದಾರೆ. “ಚೀನ ಇದಕ್ಕೂ ಮುಂಚೆ ಪಾಕಿಸ್ಥಾನ, ಉತ್ತರ ಕೊರಿಯಾ ಹ್ಯಾಕರ್ಸ್ ಗಳ ನೆರವು ಪಡೆಯುತ್ತಿತ್ತು.
ಭಾರತದಲ್ಲಿ ಚೀನೀ ಆ್ಯಪ್ ಗಳು ಜನಪ್ರಿಯವಾದ ನಂತರ ಚೀನ ತಾನೇ ಖುದ್ದಾಗಿ ಹ್ಯಾಕಿಂಗ್ ಕೃತ್ಯಕ್ಕೆ ಇಳಿದಿದೆ’ ಎಂದಿದ್ದಾರೆ.