ಚೀನ: ಚೀನ ರಾಜಧಾನಿ ಬೀಜಿಂಗ್ ಸಮೀಪದ ಲ್ಲಿಯೇ ಇರುವ ಬಂದರು ನಗರ ಟಿಯಾನ್‌ಜಿನ್ ನಲ್ಲಿ ಸೋಂಕಿನ ಭೀತಿ ವ್ಯಕ್ತವಾಗಿದೆ.
ಮುಂದಿನ ತಿಂಗಳ 4ರಿಂದ ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅಲ್ಲಿ ಶೂನ್ಯ ಕೇಸು ಹೊಂದುವುದು ಕ್ಸಿ ಜಿನ್‌ಪಿಂಗ್ ಸರಕಾರಕ್ಕೆ ಅನಿವಾರ್ಯವೇ ಆಗಿದೆ.
ಹೀಗಾಗಿ ಸ್ಥಳೀಯ ಆಡಳಿತ ನಗರದಲ್ಲಿರುವ 14 ಮಿಲಿಯ ಮಂದಿ ಜನರಿಗೆ ಅತ್ಯಂತ ತುರ್ತಾಗಿ ಸೋಂಕು ಪತ್ತೆ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.
ಕೆಲ ದಿನಗಳ ಹಿಂದಷ್ಟೇ ಎರಡು ಒಮಿಕ್ರಾನ್ ರೂಪಾಂತರಿ ಸಹಿತ 20 ಮಂದಿಗೆ ಮಕ್ಕಳಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಯಲ್ಲಿ ತುರ್ತು ಪರೀಕ್ಷೆಗೆ ತೀರ್ಮಾನಿಸಲಾಗಿದೆ.
ಇದನ್ನೂ ಓದಿ:ರಸ್ತೆ ಬಂದ್ ಮಾಡಿ ಮಹಾರಾಷ್ಟ್ರ ಸಂಪರ್ಕ ಕಡಿತ; ಕರ್ಫ್ಯೂ ಯಶಸ್ವಿ
ಸ್ಥಳೀಯ ನಿವಾಸಿಗಳು ವಾಸಿಸುವ ಪ್ರದೇಶಕ್ಕೇ ಬಂದು, ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.